ನೂರಾರು ದೃಶ್ಯಗಳು ತೋರುವವು ಕನಸಿನಲಿ
ನೂರಾರು ಭಾವಗಳು ಜಾಗರದಲಿ
ಸುಖನಿದ್ದೆಯೊಳಗಾವ ದೃಶ್ಯಭಾವಗಳಿಲ್ಲ
ನಿದ್ದೆಯೊಲು ಸಿದ್ಧಿಪಡೆ – ಎಮ್ಮೆತಮ್ಮ
ಶಬ್ಧಾರ್ಥ
ಜಾಗರ = ಎಚ್ಚರ
ಶಬ್ಧಾರ್ಥ
ಮನುಷ್ಯನಿಗೆ ಜಾಗ್ರತೆ ಸುಷುಪ್ತಿ ಮತ್ತು ಸುಪ್ತಿ ಎಂಬ ಮೂರು ಅವಸ್ಥೆಗಳಿವೆ. ಎಚ್ಚರವಾಗಿದ್ದಾಗ ಮನಸು ಸದಾ ಚಂಚಲ
ಆಗಿರುತ್ತದೆ. ಸಾವಿರಾರು ಆಲೋಚನೆಗಳನ್ನು ಮಾಡುತ್ತದೆ.
ಹಾಗೆ ಕನಸಿನಲ್ಲಿ ಕೂಡ ಮನಸು ಅನೇಕ ದೃಶ್ಯಗಳನ್ನು
ಸೃಷ್ಟಿಮಾಡುತ್ತದೆ ಮತ್ತು ವಿಚಾರ ಮಾಡುತ್ತಿರುತ್ತದೆ. ನಿದ್ದೆಯಲ್ಲಿ ದೃಶ್ಯಗಳಾಗಲಿ ಭಾವಗಳಾಗಲಿ ಇರುವುದಿಲ್ಲ. ಏಕೆಂದರೆ ನಿದ್ದೆಯಲ್ಲಿ ಮಾತ್ರ ಮನಸು ಇಲ್ಲವಾಗುತ್ತದೆ.ಆಗ ನಮ್ಮ ದೇಹದಲ್ಲಿ ವಿಶ್ವಶಕ್ತಿ ಪ್ರವೇಶವಾಗುತ್ತದೆ. ಆದ್ದರಿಂದ ಎದ್ದ ಮೇಲೆ ದೇಹದಲ್ಲಿ ಏನೋ ಆನಂದ ಸಂತೋಷ ಇರುತ್ತದೆ. ನಿದ್ದೆ ದೇವರು ಕೊಟ್ಟ ಸಹಜಯೋಗ. ಆದರೆ ನಿದ್ದೆಯಲ್ಲಿ ಎಚ್ಚರವಿರುವುದಿಲ್ಲ. ಎಚ್ಚರದಲ್ಲಿ ಮನಸು ಇಲ್ಲವಾಗುವುದೆ ಯೋಗ. ಯೋಚನಾರಹಿತ ಸ್ಥಿತಿಯಲ್ಲಿ ವಿಶ್ವಶಕ್ತಿ ದೇಹದಲ್ಲಿ ಪ್ರವೇಶವಾಗಿ ಆನಂದವನ್ನು ತರುತ್ತದೆ. ಅದನ್ನೆ ಬ್ರಹ್ಮಾನಂದ ಎಂದು ಯೋಗಿಗಳು ಹೇಳುತ್ತಾರೆ. ಅದನ್ನು ತುರೀಯಾವಸ್ಥೆ ಎನ್ನುತ್ತಾರೆ. ಅದನ್ನು ಮೀರಿ ಮುಂದೆ ಹೋದರೆ ಸಮಾಧಿ ಉಂಟಾಗುತ್ತದೆ. ಅದನ್ನು ತುರೀಯಾತೀತಾವಸ್ಥೆ ಎನ್ನುತ್ತಾರೆ.
ಆಗ ಆತನಿಗೆ ಲೋಕದೆಲ್ಲ ಜ್ಞಾನ ಉಂಟಾಗುತ್ತದೆ. ಅದನ್ನೆ
ಸಾಕ್ಷಾತ್ಕಾರ ಎನ್ನುತ್ತಾರೆ. ಮೂರವಸ್ಥೆಗಳನ್ನು ಮೀರಿ
ಹೋದವನೆ ನಿಜವಾದ ಮಹಾಯೋಗಿ ಮಹಾಜ್ಞಾನಿ.
ಅದಕ್ಕೆ ಪೂಜೆಪ್ರಾರ್ಥನೆ ಜಪತಪ ಮೌನಧ್ಯಾನ ಮಾಡಬೇಕು.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990