ಭೂತವನು ನೆನೆಯುತ್ತ ಭವಿತವ್ಯ ಚಿಂತಿಸುತ ವರ್ತಮಾನದ ಬದುಕು ಮರೆಯಬೇಡ. ಗತಿಸಿಹೋಯಿತು ನಿನ್ನೆ , ನಾಳೆ ಬರದಿರಬಹುದು ಬಾಳಿಂದು ಸಂತಸದಿ – ಎಮ್ಮೆತಮ್ಮ
ಶಬ್ಧಾರ್ಥ
ಭೂತ – ಭೂತಕಾಲ. ಭವಿತವ್ಯ – ಭವಿಷತ್ಕಾಲ
ವರ್ತಮಾನ – ಈಗಿರುವ ಕಾಲ
ತಾತ್ಪರ್ಯ
ನಡೆದು ಹೋದ ಘಟನೆಗಳನ್ನು ಮತ್ತು ಮುಂಬರುವ ಘಟನೆಗಳನ್ನು ಚಿಂತಿಸುತ್ತ ಈಗಿರುವ ಆನಂದವನ್ನು ಕಳೆದುಕೊಳ್ಳಬೇಡ. ನಿನ್ನೆಯೆಂಬುದು ಕಳೆದುಹೋಗಿದೆ.ಅದು ಮತ್ತೆ ಬರುವುದಿಲ್ಲ. ನಾಳೆಯೆಂಬುದು ಇನ್ನು ಬಂದಿಲ್ಲ ಮತ್ತು
ಬರುವುದೆಯಿಲ್ಲ. ನಾವು ಸದಾ ವರ್ತಮಾನದಲ್ಲಿರುತ್ತೇವೆ.
ಆದಕಾರಣ ಇಂದು ಈಗಲೆ ಸಂತೋಷದಿಂದ ಇರುವುದನ್ನು
ಕಲಿಯಬೇಕು. ನಾವು ಸದಾ ನಡೆದ ಘಟನೆಗಳನ್ನು ಮೆಲುಕುಹಾಕುವುದು ಮತ್ತು ಮುಂಬರುವ ಘಟನೆಗಳನ್ನು
ನೆನೆಯುವುದು ನಕಾತ್ಮಕ ಭಾವನೆ. ಅದರಿಂದ ನಮ್ಮ ಶಕ್ತಿ ವ್ಯಯವಾಗಿ ಹೋಗುತ್ತದೆ. ಪುನಾವರ್ತನೆಯ ನಕಾರತ್ಮಕ ಯೋಚನೆಯಿಂದ ಅದು ನಿಜವಾಗಿ ಘಟಿಸಿಬಿಡುತ್ತದೆ.
ಆದಕಾರಣ ವರ್ತಮಾನದ ಸಕಾರಾತ್ಮಕ ಯೋಚನೆ ಮಾಡುವುದರಿಂದ ಅದು ಘಟಿಸುತ್ತದೆ.ಯದ್ಭಾವಂ ತತ್ಭವತಿ
ಎಂಬ ಉಕ್ತಿಯಂತೆ ನಡೆಯುತ್ತದೆ. ನಮ್ಮ ಸುಪ್ತಪ್ರಜ್ಞೆಗೆ
ಏನನ್ನು ಪದೆ ಪದೇ ಯೋಚಿಸಿ ಸಂದೇಶ ಕೊಡುತ್ತಿಯೋ
ಅದೇ ತರಹ ಸಾಕಾರವಾಗುತ್ತದೆ. ಆದಕಾರಣ ನಾವು ಸದಾ
ಸಕಾರಾತ್ಮಕ ಸಂಕಲ್ಪವನ್ನು ವರ್ತಮಾನ ಕಾಲದ ವಾಕ್ಯದಲ್ಲಿ
ಹೇಳುತ್ತ ಬಂದರೆ ಅದು ಪವಾಡಸದೃಶವಾಗಿ ನೆರವೇರುತ್ತದೆ.
ಅದರಿಂದ ಸುಖಸಂತೋಷ ಶಾಂತಿಸಂಪತ್ತು ಸಿಗುವುದು.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ