ನಾ ಹಿಂದು ನಾ ಕ್ರೈಸ್ತ ನಾ ಜೈನ ನಾ ಬೌದ್ಧ
ನಾ ಸಿಖ್ಖ ನಾ ಮಹಮದೀಯನೆಂದು
ಹೊಡೆದಾಟ ಬಡಿದಾಟ ಗುದ್ದಾಟವೇತಕ್ಕೆ ?
ಮಾನವನು ಮೊದಲಾಗು – ಎಮ್ಮೆತಮ್ಮ
ಶಬ್ಧಾರ್ಥ
ಮಹಮದೀಯ = ಮುಸಲ್ಮಾನ
ತಾತ್ಪರ್ಯ
ಹುಟ್ಟಿದ ತಂದೆತಾಯಿಗಳು ಯಾವ ಧರ್ಮದವನೆಂಬುವ
ಭಾವನೆಯಿರುವುದಿಲ್ಲ. ಅದು ಬೆಳೆಯುತ್ತ ಅದರ ತಲೆಯಲ್ಲಿ
ತಂದೆತಾಯಿಗಳು , ಧರ್ಮಗುರುಗಳು, ಪಾದ್ರಿಗಳು, ಮುಲ್ಲಾಗಳು ಧರ್ಮದ ಆಚಾರ ವಿಚಾರವನ್ನು ತುಂಬಿ
ಸಂಕುಚಿತ ಭಾವನೆಯನ್ನು ಬೆಳೆಸುತ್ತಾರೆ. ಧರ್ಮವೆಂಬುವ
ಅಮಲು ತಲೆಗೇರಿತೆಂದರೆ ಧರ್ಮದ ಸಲುವಾಗಿ ಕುಡುಕರಂತೆ ಜಗಳಮಾಡಲು ಶುರುಮಾಡುತ್ತಾರೆ. ಆದಕಾರಣ ನಾನು
ಹಿಂದು ಧರ್ಮದವ, ಕ್ರೈಸ್ತಧರ್ಮದವ, ಜೈನಧರ್ಮದವ,
ಬೌದ್ಧ ಧರ್ಮದವ, ಸಿಖ್ಖ ಧರ್ಮದವ, ಇಸ್ಲಾಂ ಧರ್ಮದವ
ಎಂಬ ತಾರತಮ್ಯ ಉಂಟಾಗುತ್ತದೆ. ಇದರಿಂದ ಸಾಮಾಜಿಕ
ಸೌಹಾರ್ದಭಾವನೆ ಹೊರಟುಹೋಗುತ್ತದೆ. ಸಮಾಜದಲ್ಲಿ
ಶಾಂತಿ ನೆಲೆಸಬೇಕಾದರೆ ಅವರವರ ಧರ್ಮವನ್ನು ಮನೆ,ಮಠ,
ಮಂದಿರ, ಚರ್ಚು, ಮಸೀದಿ, ಬಸದಿ,ಗುರುದ್ವಾರಗಳಲ್ಲಿ ಆಚರಿಸಬೇಕು.ಮತ್ತೆ ಬೇರೆಯವರ ಧರ್ಮವನ್ನು ಗೌರವದಿಂದ ಕಾಣಬೇಕು. ಆದರೆ ನಾವೆಲ್ಲ ಮಾನವರು ಎಂಬುವುದನ್ನು ಮರೆಯಬಾರದು. ಎಲ್ಲರು ಸಹಕಾರ ಸಹಬಾಳ್ವೆ ಪ್ರೀತಿಪ್ರೇಮ ವಿಶ್ವಾಸದಿಂದ ಕೂಡಿ ಬಾಳಬೇಕು. ಮೊದಲು ನಾವುಗಳು ನಿಜಮಾನವರಾಗಬೇಕು. ಆಮೇಲೆ ವಿಶ್ವಮಾನವನಾಗಬೇಕು. ಹೀಗಾದರೆ ಧರ್ಮಕ್ಕಾಗಿ ಹೊಡೆದಾಟ ಬಡಿದಾಟ ಯುದ್ಧಗಳು ನಿಂತು ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990