ಬುದ್ಧಶಂಕರಬಸವ ನಾನಕಮಹಾವೀರ
ಶ್ರೀಕೃಷ್ಣಪೈಗಂಬರೇಸುಕ್ರಿಸ್ತ
ಧ್ಯಾನದೊಳಗಿದ್ದಾಗ ಸತ್ಯ ಗೋಚರವಾಯ್ತು
ಧ್ಯಾನ ಧರ್ಮದ ಮೂಲ- ಎಮ್ಮೆತಮ್ಮ
ಶಬ್ಧಾರ್ಥ
ಗೋಚರ = ವೇದ್ಯವಾಗು, ಕಾಣಿಸು
ತಾತ್ಪರ್ಯ
ಗೌತಮಬುದ್ಧನ , ಶಂಕರಾಚಾರ್ಯರ, ಬಸವಣ್ಣನವರ, ನಾನಕರ, ಮಹಾವೀರರ, ಶ್ರೀಕೃಷ್ಣನ, ಮಹಮ್ಮದ್ ಪೈಗಂಬರರ, ಏಸುಕ್ರಿಸ್ತನ ಆಧ್ಯಾತ್ಮಾಚರಣೆ ಬೇರೆ ಬೇರೆಯಾದರು ಕೊನೆಯಲ್ಲಿ ಅವರು ಸಾಕ್ಷಾತ್ಕಾರ ಪಡೆದದ್ದು
ಧ್ಯಾನದ ಮುಖಾಂತರವೆ. ದೇವರ ಗುಡಿಗೆ ಯಾವ ಕಡೆಯಿಂದ ಬಂದರು ದರ್ಶನ ಪಡೆಯಲು ಗರ್ಭಗುಡಿಯ ಬಾಗಿಲಿಗೆ ಬರಲೇಬೇಕು. ಹಾಗೆ ಆಧ್ಯಾತ್ಮದ ಕೊನೆಯ ಹಂತದ ಪ್ರವೇಶ ಧ್ಯಾನವೆಂಬ ಹೆಬ್ಬಾಗಿಲಿನಿಂದ ಮಾತ್ರ. ಧ್ಯಾನವಿಲ್ಲದ ಯಾವ ಧರ್ಮವಿಲ್ಲ. ಬುದ್ಧನು ಬೋಧಿವೃಕ್ಷದ ಕೆಳೆಗೆ ಧ್ಯಾನ ಮಾಡಿ ಜ್ಞಾನ ಉದಯಿಸಿತು.
ಶಂಕರಾಚಾರ್ಯರು ಕೂಡ ಸಣ್ಣ ವಯಸ್ಸಿನಲ್ಲಿಯೆ ಸನ್ಯಾಸ ಸ್ವೀಕರಿಸಿ ದೇಶವೆಲ್ಲ ಸುತ್ತಿ ಧ್ಯಾನದಿಂದಲೆ ಅಧ್ವೈತ ಜ್ಞಾನ ಪಡೆದುಕೊಂಡರು. ಬಸವಣ್ಣನವರು ಲಿಂಗ ನಿರೀಕ್ಷಿಸಿ ಶಿವಧ್ಯಾನ ಮಾಡಿ ಐಕ್ಯಸ್ಥಿತಿ ಪಡೆದರು. ಗುರುನಾನಕರು ಕೂಡ ಏಕದೇವೋಪಾಸನೆ ಮಾಡಿ ಧ್ಯಾನದಿಂದಲೆ ಗುರಿ ತಲುಪಿದರು. ಶ್ರೀಕೃಷ್ಣ ಕೂಡ ಧ್ಯಾನದಿಂದಲೆ ಮಹಾಯೋಗಿಯಾದನು. ಹಾಗೆ ಮಹಾವೀರ
೧೨ ವರ್ಷ ಧ್ಯಾನಮಾಡಿ ನಿರ್ವಾಣ ಪಡೆದರು.ಮಹಮ್ಮದ್
ಪೈಗಂಬರರು ದಿನನಿತ್ಯ ಗವಿಯಲ್ಲಿ ಧ್ಯಾನಮಾಡುವಾಗ ನುಡಿದನುಡಿಗಳೆ ಕುರಾನವಾಯಿತು.ಏಸುಕ್ರಿಸ್ತ ೪೦ ದಿವಸ ಧ್ಯಾನ ಮಾಡಿ ಸೈತಾನನನ್ನು ಜಯಿಸಿ ದೇವರಮಗನಾದನು.
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990