ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

Must Read

 

ಬರಿಯುಸುಕು ಬರಿಬಿಸಿಲು ನೀರಿಲ್ಲ‌ ನೆರಳಿಲ್ಲ
ಹುರುಳಿಲ್ಲ ಸಂಸಾರ ಮರಳುಗಾಡು
ಮೃಗಜಲವ ಬೆನ್ನತ್ತಿ ಹೋಗದಿರು, ನೀ ಹುಡುಕು
ಶಾಂತಿಯೋಯಾಸಿಸ್ಸು – ಎಮ್ಮೆತಮ್ಮ

ಶಬ್ಧಾರ್ಥ
ಮೃಗಜಲ‌ – ಬಿಸಿಲುಗುದುರೆ,ಮರಳುಗಾಡಿನಲ್ಲಿ ನೀರಿದೆ ಎಂದು ಬಿಸಿಲಿನಲ್ಲಿ ಕಾಣಿಸುತ್ತದೆ. ಆದರೆ ಅದು ಭ್ರಮೆ.
ಓಯಾಸಿಸ್(Oasis) – ಮರುಳುಗಾಡಿನಲ್ಲಿ ನೀರಿರುವ ಹಸುರಿನ ತಾಣ ಅಥವಾ ತೋಟ.

ತಾತ್ಪರ್ಯ
ಸಂಸಾರವೆಂಬುವುದು ಮರಳು,ಬಿಸಿಲು ತುಂಬಿದ ಮತ್ತು
ನೀರು ನೆರಳುಗಳಿಲ್ಲದ ಮರುಭೂಮಿ. ಅಲ್ಲಿ ದೂರದಲ್ಲಿ
ಬಿಸಿಲುಗುದುರೆ ತೋರಿ ನೀರಿದೆ ಎಂದು‌ ಭ್ರಮೆ ಉಂಟಾಗುತ್ತದೆ. ಅದನ್ನು‌ ನಂಬಿ‌ ಹೋಗಬೇಡ‌. ಅಲ್ಲಿ ಎಲ್ಲೋ
ಒಂದು ಕಡೆ ಹಸುರಿನ ತೋಟ ಇದೆ. ಅದನ್ನು ಹುಡುಕಿ ದಣಿವಾರಿಸಿಕೊಳ್ಳು. ಸಂಸಾರದ ತಾಪದಿಂದ ಆಸೆಯೆಂಬ
ನೀರಡಿಕೆ ಉಂಟಾಗುತ್ತದೆ. ಅದನ್ನು ಪರಿಹರಿಸಿಕೊಳ್ಳಲು
ಭ್ರಮಾಧೀನಾಗಿ ಏನೇನೋ ಹುಡುಕಲು‌ ಹೊರಡದೆ
ಶಾಂತಿಯೆಂಬ ಮರುವನವನ್ನು‌ ಹುಡುಕಿ‌ ಆಶ್ರಯ ಪಡೆ.
ಮಾಯೆ ಎಂಬುವ ಬಿಸಿಲುಗುದುರೆಗೆ ಮರುಳಾಗಿ ಹೋದರೆ
ಅಲ್ಲಿ ಬರಿ ನಿರಾಶೆ. ಶಾಂತಿಯ‌ ಮರುವನ ನಿನ್ನ ಅಂತರಂಗದಲ್ಲಿ ನೆಲೆಸಿದೆ. ಅದನ್ನು ಹುಡುಕುವುದು ಬಿಟ್ಟು ಬಾಹ್ಯ ಜಗತ್ತಿನಲ್ಲಿ ಹುಡುಕುಲು‌ ಹೋದರೆ ಸಿಕ್ಕುವುದಿಲ್ಲ ನೆನಪಿರಲಿ.
ಆತ್ಯಚೈತನ್ಯವೆ ನಿಜವಾದ ಮರುವನ. ಅಲ್ಲಿ ತೃಪ್ತಿ, ಶಾಂತಿ, ಸಂತೋಷ ಸಮಾಧಾನಗಳು ನೆಲಸಿವೆ. ಅಲ್ಲಿ ಆಶ್ರಯ
ಪಡೆದರೆ ಸಾಕು ಸದಾಸುಖಿಯಾಗಿ ಪರಮಾನಂದದಿಂದ
ಜೀವಿಸಬಹುದು.

ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group