spot_img
spot_img

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

Must Read

ಸವದತ್ತಿ – ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಬಿ.ಬಿ.ಮಮದಾಪುರ ಪ್ರೌಢಶಾಲೆಯ ಸಭಾಂಗಣದಲ್ಲಿ ೨೦೨೨-೨೩ ನೇ ಸಾಲಿನ ಸವದತ್ತಿ ಹಾಗೂ ಮುನವಳ್ಳಿ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಅಲಿಂಕೋ ಸಂಸ್ಥೆ ಬೆಂಗಳೂರಿನ ಡಾ.ಬ್ರಜೇಶಕುಮಾರ, ಡಾ.ಮೋಹನ್ ಹುಬ್ಬಳ್ಳಿ ಮನೋವಿಕಾಸ ವಿಕಲಚೇತನರ ಪುನರ್ವಸತಿ ಕೇಂದ್ರದ ಮನೋವೈದ್ಯರಾದ ಡಾ. ಜಿ.ಕೆ ಹಿರೇಮಠ, ಡಾ.ಕಿಶೋರ್ ಎಸ್.ಕೆ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ, ಸವದತ್ತಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಎಚ್.ಎಂ.ಮಲ್ಲನಗೌಡರ, ನೇತ್ರ ತಜ್ಞರಾದ ಸಲೀಂಕಿತ್ತೂರು, ಎಲವು ಕೀಲು ತಜ್ಞರಾದ ಡಾ.ಪಿ.ವ್ಹಿ.ಕಾಡರಕೊಪ್ಪ, ಸವದತ್ತಿ ತಾಲೂಕು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಸುಧೀರ ವಾಘೇರಿ, ಬಿ.ಬಿ.ಮಮದಾಪುರ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ವ್ಹಿ.ಚಿಚಕಂಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕಿಯರಾದ ಚೇತನಾ ಎನ್. ಹಳ್ಳಿ ವಿಕಲಚೇತನ ಮಕ್ಕಳ ವಿಶೇಷ ಸಂಪನ್ಮೂಲ ವ್ಯಕ್ತಿಗಳಾದ ವೈ.ಬಿ.ಕಡಕೋಳ, ಎಸ್.ಬಿ.ಬೆಟ್ಟದ, ಸಿ.ವ್ಹಿ.ಬಾರ್ಕಿ, ದುರಗಪ್ಪ ಭಜಂತ್ರಿ ಮೊದಲಾದವರು ಉಪಸ್ಥಿತರಿದ್ದರು.

ಕಾರ‍್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ ಸಸಿಗೆ ನೀರೆರೆಯುವ ಮೂಲಕ ಮೂಲಕ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡುತ್ತ “ಸಮನ್ವಯ ಶಿಕ್ಷಣವು ಎಲ್ಲಾ ಮಕ್ಕಳಿಗೂ ಅವರವರ ಅಗತ್ಯಗಳನ್ನು ಆಧರಿಸಿ ನೀಡುವ ಸಮಾನವಾದ ಶಿಕ್ಷಣವಾಗಿದೆ.

ಇಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳೂ ಸಹ ಇತರೆ ಮಕ್ಕಳೊಡನೆ ಸಮಾನ ಶೈಕ್ಷಣಿಕ ಅವಕಾಶ ಪಡೆಯುವಂತಹ ವಾತಾವರಣವಿರುತ್ತದೆ. ಇಂಥ ಮಕ್ಕಳ ವಿಕಲತೆಯ ಪ್ರಮಾಣವನ್ನು ಇಂದು ವೈದ್ಯರು ತಪಾಸಣೆ ಮಾಡುವ ಮೂಲಕ ಅವರಿಗೆ ದೊರಕಬೇಕಾದ ಸೌಲಭ್ಯಗಳು ಸಾಧನ ಸಲಕರಣೆಗಳು ಮತ್ತು ನೀಡಬೇಕಾದ ಚಿಕಿತ್ಸೆಗಳ ಬಗ್ಗೆ ವರದಿ ನೀಡುವರು. ಇಂಥ ಸೌಲಭ್ಯಗಳನ್ನು ಎಲ್ಲ ಪಾಲಕರೂ ಪಡೆದುಕೊಳ್ಳಬೇಕು. ಈಗಾಗಲೇ ಯರಗಟ್ಟಿ ಹಾಗೂ ಮುರಗೋಡ ವಲಯದ ಮಕ್ಕಳ ಮೌಲ್ಯಾಂಕನ ಜರುಗಿದ್ದು ಇಂದು ಸವದತ್ತಿ ಮತ್ತು ಮುನವಳ್ಳಿ ವಲಯದ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಜರುಗಿದೆ. ಇದರ ಸೌಲಭ್ಯವನ್ನು ಎಲ್ಲ ಪಾಲಕರು ಪಡೆಯಬೇಕು.” ಎಂದು ಕರೆ ನೀಡಿದರು ಜೊತೆಗೆ ಇನ್ನೂ ಹೆಚ್ಚಿನ ಚಿಕಿತ್ಸೆಯ ಸೌಲಭ್ಯಕ್ಕಾಗಿ ಆರೋಗ್ಯ ಇಲಾಖೆ ಕೂಡ ಅನುಕೂಲ ಮಾಡಿ ಕೊಡುವುದು. ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಸಾಧನ ಸಲಕರಣೆಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪಾಲಕರಿಗೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಬಿ.ಆರ್.ಪಿ ಗಳಾದ ವ್ಹಿ.ಸಿ.ಹಿರೇಮಠ, ರತ್ನಾ ಸೇತಸನದಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಆರ್.ಪಿ.ನಲವಡೆ, ಕುಶಾಲ್ ಮುದ್ದಾಪುರ, ಪಿ.ಸಿ.ಫರೀಟ್, ಮಂಜುನಾಥ ಗಡೇಕಾರ, ಎಸ್.ಎಂ.ಕುಂಬಾರ, ಜಿ.ಎಸ್.ಚಿಪ್ಪಲಕಟ್ಟಿ, ಎನ್.ಎ.ಹೊನ್ನಳ್ಳಿ, ರಾಮಚಂದ್ರಪ್ಪ ಬಿ.ಎಂ, ಸವದತ್ತಿ ತಾಲೂಕಾ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ ವ್ಹಿ.ಆರ್.ಡಬ್ಲ್ಯೂಗಳಾದ ಜಾವೇದಾ ಫರಾಸಿ, ಗದಿಗಯ್ಯ ಸಂಬೈನವರಮಠ,ಬಸವರಾಜ ದಾಟನಾಳ,ಮಹಮ್ಮದ ತಲ್ಲೂರ,ಬಿ.ಆರ್.ಭಜಂತ್ರಿ, ಸಂಗಪ್ಪ ಅರಗೋಳ, ನೂರಮ್ಮದ ಮುಲ್ಲಾ, ಮಾಯಪ್ಪನವರ ಅಶೋಕ ಚುಂಚನೂರ, ಶೇರಿ ಸ್ಕೌಟ್ ಮತ್ತು ಗೈಡ್ಸನ ಶ್ರೀಮತಿ ಎಂ.ಎಚ್.ಮಣ್ಣೂರ, ಆರ್.ಆರ್.ನಲವಡೆ, ಎಂ.ಬಿ.ತೊರಗಲ್, ತೊರಗಲ್ ಮಠ ಮೊದಲಾದವರು ಉಪಸ್ಥಿತರಿದ್ದರು ಕಾರ್ಯಕ್ರಮದ ಪ್ರಾರಂಭದಲ್ಲಿ ರತ್ನಾ ಸೇತಸನದಿ ಪ್ರಾರ್ಥನಾ ಗೀತೆ ಹೇಳಿದರು. ವೈ.ಬಿ.ಕಡಕೋಳ ಸ್ವಾಗತಿಸಿದರು. ಎಸ್.ಬಿ.ಬೆಟ್ಟದ ನಿರೂಪಿಸಿದರು. ಸಿ.ವ್ಹಿ.ಬಾರ್ಕಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!