spot_img
spot_img

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

Must Read

- Advertisement -

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸವದತ್ತಿ ತಾಲೂಕು ವೈದ್ಯಾಧಿಕಾರಿಗಳಾದ ಡಾ.ಮಹೇಶ ಚಿತ್ತರಗಿ ಹುಬ್ಬಳ್ಳಿ ಮನೋವಿಕಾಸ ವಿಕಲಚೇತನರ ಪುನರ್ವಸತಿ ಕೇಂದ್ರದ ಮನೋವೈದ್ಯರಾದ ಡಾಃ ಜಿ.ಕೆ ಹಿರೇಮಠ.ಗಣ್ಯರಾದ ಅಜಿತ ದೇಸಾಯಿ.ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸೃಷ್ಟಿ ಪಟ್ಟಣಶೆಟ್ಟಿ ಡಿ.ವೈ.ಪಿ.ಸಿ ಕೆ.ಎಸ್.ನಂದೇರ. ಎ.ಪಿ.ಸಿಯವರಾದ ರವಿ ಮೆಳವಂಕಿ. ಡೈಟ ಹಿರಿಯ ಉಪನ್ಯಾಸಕರಾದ ಎನ್.ಆರ್.ಪಾಟೀಲ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್,ಬ್ಯಾಳಿ ಅಕ್ಷರ ದಾಸೋಹ ಸಹಾಯಕ ನಿದೇಶಕರಾದ ಮೈತ್ರಾದೇವಿ ವಸ್ತ್ರದ, ಯರಗಟ್ಟಿ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷರಾದ ಆಶಾ ಫರೀಟ್, ಸವದತ್ತಿ ತಾಲೂಕು ಪರಸಗಡ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷರಾದ ಮನೋಹರ ಚೀಲದ ಯರಗಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎ.ಎ.ಮಕ್ತುಂನವರ, ವಿಕಲಚೇತನ ಮಕ್ಕಳ ವಿಶೇಷ ಸಂಪನ್ಮೂಲ ವ್ಯಕ್ತಿಗಳಾದ ವೈ.ಬಿ.ಕಡಕೋಳ ಮೊದಲಾದವರು ಉಪಸ್ಥಿತರಿದ್ದರು.

- Advertisement -

ಕಾರ‍್ಯಕ್ರಮವನ್ನು ಶ್ರೀಶೈಲ ಕರೀಕಟ್ಟಿ ಹಾಗೂ ಅಜಿತ ದೇಸಾಯಿಯವರು ಸಸಿಗೆ ನೀರೆರೆಯುವ ಮೂಲಕ ಮೂಲಕ ಉದ್ಘಾಟಿಸಿದರು.

ಪ್ರಾಸ್ತಾವಿಕಾಗಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ, “ಸಮನ್ವಯ ಶಿಕ್ಷಣವು ಎಲ್ಲಾ ಮಕ್ಕಳಿಗೂ ಅವರವರ ಅಗತ್ಯಗಳನ್ನು ಆಧರಿಸಿ ನೀಡುವ ಸಮಾನವಾದ ಶಿಕ್ಷಣವಾಗಿದೆ.ಇಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳೂ ಸಹ ಇತರೆ ಮಕ್ಕಳೊಡನೆ ಸಮಾನ ಶೈಕ್ಷಣಿಕ ಅವಕಾಶ ಪಡೆಯುವಂತಹ ವಾತಾವರಣವಿರುತ್ತದೆ.

- Advertisement -

ಇಂಥ ಮಕ್ಕಳ ವಿಕಲತೆಯ ಪ್ರಮಾಣವನ್ನು ಇಂದು ವೈದ್ಯರು ತಪಾಸಣೆ ಮಾಡುವ ಮೂಲಕ ಅವರಿಗೆ ದೊರಕಬೇಕಾದ ಸೌಲಭ್ಯಗಳು ಮತ್ತು ನೀಡಬೇಕಾದ ಚಿಕಿತ್ಸೆಗಳ ಬಗ್ಗೆ ವರದಿ ನೀಡುವರು. ಇಂಥ ಸೌಲಭ್ಯಗಳನ್ನು ಎಲ್ಲ ಪಾಲಕರೂ ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು ಜೊತೆಗೆ ಇನ್ನೂ ಹೆಚ್ಚಿನ ಚಿಕಿತ್ಸೆಯ ಸೌಲಭ್ಯಕ್ಕಾಗಿ ಆರೋಗ್ಯ ಇಲಾಖೆ ಕೂಡ ಅನುಕೂಲ ಮಾಡಿಕೊಡುವುದು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪಾಲಕರಿಗೆ ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ ಮಾತನಾಡಿ,“ ಸರಕಾರ ನೀಡುವ ಸೌಲಭ್ಯಗಳನ್ನು ಎಲ್ಲ ಪಾಲಕರೂ ತಪ್ಪದೇ ಪಡೆದುಕೊಳ್ಳಬೇಕು. ಇಂಥ ವೈದ್ಯಕೀಯ ಶಿಬಿರ ಆಯೋಜಿಸಿದಾಗ ಸಕ್ರಿಯವಾಗಿ ಭಾಗವಹಿಸಿ ತಮ್ಮ ಮಕ್ಕಳ ಆರೋಗ್ಯದ ಕುರಿತು ಕಾಳಜಿ ಹೊಂದಬೇಕು. ನಾವು ಇಂದು ಯರಗಟ್ಟಿಯಲ್ಲಿ ಎರಡು ವಲಯಗಳನ್ನು ಮತ್ತು ಇದೇ ತಿಂಗಳ ೩೦ ರಂದು ಸವದತ್ತಿ ಮತ್ತು ಮುನವಳ್ಳಿ ವಲಯಗಳ ವೈದ್ಯಕೀಯ ಮೌಲ್ಯಾಂಕನವನ್ನು ಸವದತ್ತಿಯಲ್ಲಿ ಏರ್ಪಡಿಸಿದ್ದೇವೆ. ನಮ್ಮ ತಾಲೂಕಿನಲ್ಲಿ ವಿಕಲಚೇತನ ಮಕ್ಕಳಿಗೆ ಎಲ್ಲ ರೀತಿಯ ಸೌಲಭ್ಯಗಳು ದೊರೆಯಲು ಈ ರೀತಿಯ ಅನುಕೂಲ ಮಾಡಿದ್ದು ಎಲ್ಲ ಪಾಲಕರೂ ಇದರಲ್ಲಿ ಪಾಲ್ಗೊಳ್ಳುವ ಮೂಲಕ ಸೌಲಭ್ಯವನ್ನು ಹೊಂದಿರಿ ”ಎಂದು ತಿಳಿಸಿದರು.

ಡಿ.ವೈ.ಪಿ.ಸಿ ಕೆ.ಎಸ್.ನಂದೇರ ಮಾತನಾಡಿ, ವಿಕಲಚೇತನ ಮಕ್ಕಳು ವಿಶೇಷ ಅಗತ್ಯವುಳ್ಳ ಮಕ್ಕಳು ಇವರನ್ನು ನಿರ್ಲಕ್ಷಿಸದಿರಿ. ಅವರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಪಾಲಕರು,ಶಿಕ್ಷಕರು,ಸಮಾಜ ಮಾಡಬೇಕು.ಅಂದಾಗ ಅವರಲ್ಲಿ ವಿಶೇಷ ಸಾಮರ್ಥ್ಯ ಹೊರಹೊಮ್ಮಲು ಸಾಧ್ಯ. ಇಂಥ ಶಿಬಿರಗಳನ್ನು ಆಯೋಜಿಸುವ ಮೂಲಕ ವಿಕಲಚೇತನ ಮಕ್ಕಳಿಗೆ ದೊರೆಯಬಹುದಾದ ಸಾಧನ ಸಲಕರಣೆಗಳನ್ನು ವೈದ್ಯರು ಶಿಫಾರಸ್ಸು ಮಾಡುವರು. ಅವುಗಳನ್ನು ದೊರಕಿಸಿಕೊಡುವ ಪ್ರಯತ್ನ ಈ ಮೌಲ್ಯಾಂಕನ ಶಿಬಿರದಿಂದ ಆಗಲಿದೆ ಎಂದು ತಿಳಿಸಿದರು ದಿನವಿಡೀ ನಡೆದ ಶಿಬಿರದಲ್ಲಿ ಸವದತ್ತಿ ಸರಕಾರಿ ತಾಲೂಕು ಆಸ್ಪತ್ರೆಯ ವಿವಿಧ ವಿಭಾಗದ ವೈದ್ಯರುಗಳಾದ ಡಾ.ಎಚ್.ಎಂ.ಮಲ್ಲನಗೌಡರ.ಡಾ.ಎಸ್.ಬಿ.ಹಿತ್ತಲಮನಿ.ಡಾ.ಮಂಜುನಾಥ. ಮನೋವಿಕಾಸ ಸಂಸ್ಥೆ ಹುಬ್ಬಳ್ಳಿಯಿಂದ ಆಗಮಿಸಿದ್ದ ವೈದ್ಯರುಗಳಾದ ವಿಜಯಕುಮಾರ, ಶಿಲ್ಪಾ ಅಜ್ಜನ್ನವರ, ಜಯಲಕ್ಷ್ಮೀ ಶಂಕರಸ್ವಾಮಿ ಮೊದಲಾದವರು ಮಕ್ಕಳ ಆರೋಗ್ಯ ತಪಾಸಣೆ ಕೈಗೊಂಡರು.

ಬಿ.ಐ.ಇ.ಆರ್.ಟಿ.ಗಳಾದ ಸಿ.ವ್ಹಿ.ಬಾರ್ಕಿ. ಎಸ್.ಬಿ.ಬೆಟ್ಟದ, ದುರಗಪ್ಪ ಭಜಂತ್ರಿ ಗಣಕಯಂತ್ರ ಪ್ರೋಗ್ರಾಮರ್ ಮಲ್ಲಿಕಾರ್ಜುನ ಹೂಲಿ ಯರಗಟ್ಟಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವಸಂತ ಬಡಿಗೇರ. ಶಿವಾಪೂರ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎಂ.ಮಲಕನ್ನವರ,ತಲ್ಲೂರ ಸಿ.ಆರ್.ಪಿ.ಗಳಾದ ಗುರುದೇವಿ ಮಲಕನ್ನವರ,ಯರಝರ್ವಿ ಸಿ.ಆರ್.ಪಿಯವರಾದ ಅರ್ಜುನ ಮುಳ್ಳೂರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ವ್ಹಿ.ಸಿ.ಹಿರೇಮಠ, ಶಿವಾನಂದ ಮಿಕಲಿ ಮೊದಲಾದವರು ಉಪಸ್ಥಿತರಿದ್ದರು ದೈಹಿಕ ಶಿಕ್ಷಕರುಗಳಾದ ಬಿ.ಎಂ.ಸರದಾರ.ಶ್ರೀಮತಿ ಎಸ್.ಬಿ.ಗೂರನವರ.ಗಾಣಗಿ.ಎಂ.ಎಂ.ದಿಲಾವರನಾಯ್ಕ.ಪಿ.ಡಿ.ಶಿವಪೂಜಿ.ಶಿಕ್ಷಕರಾದ ಆನಂದ ಲಕ್ಕನ್ನವರ.ಮಹಾಂತೇಶ ಕುಂಬಾರ ಶ್ರೀಮತಿ ಶಕುಂತಲಾ ಕರಾಳೆ ನೋಂದಣಿ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.

ವಿವಿಧ ವಲಯಗಳ ಸಿ.ಆರ್.ಪಿಗಳು ಮುಖ್ಯೋಪಾಧ್ಯಾಯರುಗಳು ಶಿಕ್ಷಕರು ಭಾಗವಹಿಸಿ ಮಕ್ಕಳ ತಪಾಸಣೆ ಕಾರ‍್ಯ ಸುಗಮವಾಗಿ ಸಾಗಲು ಅವಕಾಶ ಮಾಡಿಕೊಟ್ಟರು. ಕಾರ್ಯಕ್ರಮದ ಪ್ರಾರಂಭದಲ್ಲಿ ಆಶಾ ಫರೀಟ್ ನವರಾತ್ರಿ ವಿಶೇಷತೆ ತಿಳಿಸುವ ಮೂಲಕ ಶಾರದಾ ಮಾತೆಯ ಭಕ್ತಿ ಗೀತೆ ಶುಶ್ರಾವ್ಯವಾಗಿ ಹಾಡುವ ಮೂಲಕ ಪ್ರಾರ್ಥನಾ ಗೀತೆ ಹೇಳಿದರು.ಎಸ್.ಬಿ.ಪಾಣಿಶೆಟ್ಟಿ ನಿರೂಪಿಸಿದರು. ವೈ.ಬಿ.ಕಡಕೋಳ ವಂದಿಸಿದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group