ಸವದತ್ತಿಃ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ಸಮರ್ಥನಂ ಸಂಸ್ಥೆ ಹಾಗೂ ಕೆ.ಎಲ್.ಇ. ಸಂಸ್ಥೆಯ ಸಹಭಾಗಿತ್ವದಲ್ಲಿ ಆಯ್ದ ಶಾಲೆಗಳ ವಿಕಲಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಕಾರ್ಯಕ್ರಮವು ಜರುಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ,ಎನ್,ಬ್ಯಾಳಿ ವಹಿಸಿದ್ದರು. ಕೆ,ಎಲ್,ಇ ಸಂಸ್ಥೆಯ ವೈದ್ಯರ ತಂಡದ ನೇತೃತ್ವವನ್ನು ವಹಿಸಿದ್ದ ವೈದ್ಯರಾದ ಡಾ.ಅಶ್ವಿನಿ, ಅಂಗಡಿ, ಡಾ.ಅರ್ಪಿತಾ ಫಡಿ, ಡಾ.ಗಣೇಶ, ಪಿ.ಸಮರ್ಥನಂ ಸಂಸ್ಥೆಯ ಅರುಣಕುಮಾರ್ಸ, ಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್,ಬಿ,ಬೆಟ್ಟದ, ದುರಗಪ್ಪ ಭಜಂತ್ರಿ, ವೈ,ಬಿ.ಕಡಕೋಳ, ಮಾಶಾಭಿ ಯಡೊಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ.ಅಶ್ವಿನಿ ಅಂಗಡಿ ಮಾತನಾಡಿ, ಕೆ,ಎಲ್,ಇ ಸಂಸ್ಥೆಯ ವೈದ್ಯರ ತಂಡವು ಇಂದು ತಾಲೂಕಿನ ಆಯ್ದ ಶಾಲೆಗಳ ಮಕ್ಕಳಿಗೆ ಇಂದು ವೈದ್ಯಕೀಯ ತಪಾಸಣೆ ಕೈಗೊಳ್ಳುವ ಮೂಲಕ ಅವರಿಗೆ ಮತ್ತು ಪಾಲಕರಿಗೆ ಸೂಕ್ತ ನೆರವನ್ನು ಸ್ಥಳದಲ್ಲಿಯೇ ನೀಡುವ ಕಾರ್ಯ ಇದಾಗಿದ್ದು ಈ ಕಾರ್ಯಕ್ರಮದ ಸದುಪಯೋಗ ಪಡೆಯಲು ಪಾಲಕರಿಗೆ ಕರೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ,ಎನ್,ಬ್ಯಾಳಿ ಮಾತನಾಡಿ, ಇದು ನಮ್ಮ ತಾಲೂಕಿನ ಸೌಭಾಗ್ಯ ಸಮರ್ಥನಂ ಸಂಸ್ಥೆ ಮತ್ತು ಕೆ,ಎಲ್,ಇ ಸಂಸ್ಥೆಯವರು ಇಂದು ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಮಾಡುವ ಜೊತೆಗೆ ಸೂಕ್ತ ಔಷಧೋಪಚಾರ ಹಾಗೂ ನೆರವನ್ನು ನೀಡುವರು.ಇಂಥ ಕಾರ್ಯ ಮಾಡುತ್ತಿರುವ ಈ ಎರಡೂ ಸಂಸ್ಥೆಗಳಿಗೆ ಇಲಾಖೆಯ ಪರವಾಗಿ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ತಾಲೂಕಿನಾದ್ಯಂತ ಈ ಕಾರ್ಯ ವಿಸ್ತಾರ ಮಾಡುವ ಮೂಲಕ ವಿಕಲಚೇತನ ಮಕ್ಕಳಿಗೆ ನೆರವು ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಸಮರ್ಥನಂ ಸಂಸ್ಥೆಯ ಅರುಣ್ ಕುಮಾರ್ ಮಾತನಾಡಿ “ಸಮರ್ಥನಂ ಸಂಸ್ಥೆ ವಿಕಲಚೇತನ ಮಕ್ಕಳಿಗೆ ಹಾಗೂ ಸಮನ್ವಯ ಶಿಕ್ಷಣಕ್ಕೆ ಒಳಪಡುವ ಎಲ್ಲರಿಗೂ ಕೂಡ ನೆರವು ನೀಡಲು ಹುಟ್ಟಿಕೊಂಡ ಸಂಸ್ಥೆ ಕೇವಲ ವೈದ್ಯಕೀಯ ಮೌಲ್ಯಾಂಕನ ಅಷ್ಟೇ ಅಲ್ಲ ವಿವಿಧ ಸೌಲಭ್ಯಗಳು ಈ ಸಂಸ್ಥೆಯ ಮೂಲಕ ಜರುಗುತ್ತಿವೆ ಎಂಬ ಮಾಹಿತಿಯ ವಿವರಗಳನ್ನು ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್,ಬಿ,ಬೆಟ್ಟದ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ,ಬಿ,ಕಡಕೋಳ ಸ್ವಾಗತಿಸುವ ಜೊತೆಗೆ ಕಾರ್ಯಕ್ರಮ ನಿರೂಪಿಸಿದರು. ಸಮನ್ವಯ ಶಿಕ್ಷಣ ಪ್ರೌಢ ವಿಭಾಗದ ಶಿಕ್ಷಕ ಡಿ,ಎಲ್,ಭಜಂತ್ರಿ ವಂದಿಸಿದರು.ಈ ಸಂದರ್ಭದಲ್ಲಿ ಕೆ,ಎಲ್,ಇ ಸಂಸ್ಥೆಯ ವೈದ್ಯರುಗಳು, ವಿಕಲಚೇತನ ಮಕ್ಕಳು ಪಾಲಕರು ಆಯ್ದ ಶಾಲೆಗಳ ಮುಖ್ಯಾಪಾಧ್ಯಾಯರುಗಳು ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದು ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಜರುಗಲು ಸಹಕರಿಸಿದರು.