spot_img
spot_img

ಸವದತ್ತಿ ಹಾಗೂ ರಾಮದುರ್ಗ ತಾಲೂಕಿನ ಆಯ್ದ ಶಾಲೆಗಳ ವೈದ್ಯಕೀಯ ಮೌಲ್ಯಾಂಕನ ಹಾಗೂ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ

Must Read

spot_img
- Advertisement -

ಸವದತ್ತಿ: ಪಟ್ಟಣದ ಶಾಸಕರ ಮಾದರಿ ಶಾಲೆಯ ಶಾಲಾ ಸಿದ್ಧತಾ ಕೇಂದ್ರದಲ್ಲಿ ಸವದತ್ತಿ ಹಾಗೂ ರಾಮದುರ್ಗ ತಾಲೂಕಿನ ಆಯ್ದ ಶಾಲೆಗಳ ವೈದ್ಯಕೀಯ ಮೌಲ್ಯಾಂಕನ ಹಾಗೂ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಎಸ್ ಬಿ ಐ ಫೌಂಡೇಶನ್ ಸಹಯೋಗದಲ್ಲಿ ಇತ್ತೀಚೆಗೆ ಜರುಗಿತು.

ಈ ಸಂದರ್ಭದಲ್ಲಿ ದೈಹಿಕ
ವಿಕಲತೆ ಹೊಂದಿರುವ ಆಯ್ದ ಮಕ್ಕಳಿಗೆ ವೈದ್ಯಕೀಯ ತಪಾಸನೆಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಶಿಬಿರದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಸವರಾಜ್ ಬ್ಯಾಳಿ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಶ್ರೀಶೈಲ ಬೆಟ್ಟದ  ವೈ. ಬಿ ಕಡಕೋಳ, ದುರದಪ್ಪ ಭಜಂತ್ರಿ. ಸಮರ್ಥನಂ ಸಂಸ್ಥೆಯ ಯೋಜನಾ ವ್ಯವಸ್ಥಾಪಕರಾದ. ಡಾ.ಜಯಂತ್ ಕುಮಾರ್ , ಫಿಜಿಯೋಥೆರಪಿಸ್ಟ್ ಡಾ.ರಾಜಶ್ರೀ ರಮಾವತ್. ಶಾಖಾ ಮುಖ್ಯಸ್ಥರಾದ ಅರುಣ್ ಕುಮಾರ್ ಎಂ ಜಿ ಸಮನ್ವಯ ಶಿಕ್ಷಣ ಸಂಯೋಜಕರಾದ ಶಿವಕುಮಾರ್ ಹಲ್ಯಾಳಿ, ವಿಶೇಷ ಶಿಕ್ಷಕರಾದ ಸತ್ಯಪ್ಪ ರಾಚಪ್ಪನವರ್, ಶುಭಂ ಕಿತ್ತೂರ, ಅನಿಲ್ ರಾಥೋಡ್, ಹನುಮಂತ ಅನ್ನಿಗೊಳ ಶಾಲಾ ಸಿದ್ದತಾ ಕೇಂದ್ರದ ಸಹಾಯಕಿ ಮಾಶಾಬಿ ಯಡೊಳ್ಳಿ. ಸವದತ್ತಿ ಹಾಗೂ ರಾಮದುರ್ಗ ತಾಲೂಕಿನ ಆಯ್ದ ಶಾಲೆ ಗಳ ಮುಖ್ಯೋಪಾದ್ಯಾಯರುಗಳು. ವಿಕಲಚೇತನ ಮಕ್ಕಳು ಹಾಗೂ ಪಾಲಕರು ಪಾಲ್ಗೊಂಡಿದರು.

- Advertisement -

ಶಿಬಿರವನ್ನು ಕುರಿತು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಸವರಾಜ್ ಬ್ಯಾಳಿ  ಮಾತನಾಡಿ, “ಸಮರ್ಥನಂ ಅಂಗವಿಕಲರ ಸಂಸ್ಥೆಯು ದೇಶವಿದೇಶಗಳಲ್ಲಿ ದಿವ್ಯಾಂಗರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಜನಸ್ನೇಹಿ ಸಂಸ್ಥೆಯಾಗಿದ್ದು ಈಗ 6 ರಿಂದ 14 ವರ್ಷ ಒಂದರಿಂದ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟು ಶ್ರಮಿಸುತ್ತಿರುವ ಸಂಸ್ಥೆ ಎಸ್‌ಬಿಐ ಫೌಂಡೇಶನ್ ನವರ ಸಹಯೋಗದಲ್ಲಿ ಸವದತ್ತಿ ನಗರದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದೆ ಇದರ ಸದುಪಯೋಗವನ್ನು ಪಡೆದು ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ ವೈದ್ಯಕೀಯ ನೆರವು ನೀಡಲು ಬಂದಿರುವ ಸಮರ್ಥನಂ ಸಂಸ್ಥೆಯ ತಂಡದವರ ಸೇವೆ ಶ್ಲಾಘನೀಯ ಎಂದು ಸ್ಮರಿಸಿದರು.

ಬೆಳಗಾವಿ ಸಮರ್ಥನ ಶಾಖಾ ಮುಖ್ಯಸ್ಥರಾದ ಅರುಣ್ ಕುಮಾರ್ ಎಂ ಜಿ ಮಾತನಾಡಿ, ಕಳೆದ 27 ವರ್ಷಗಳಿಂದ “ದೇಶದ 25ಕ್ಕೂ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಸ್ಥಾಪಿಸಿ ವಿವಿಧ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಬೆಳಗಾವಿ ಜಿಲ್ಲೆಯ ಏಳು ತಾಲೂಕುಗಳ 38 ಸರ್ಕಾರಿ ಶಾಲೆಗಳಲ್ಲಿ ದಿವ್ಯಾಂಗ ಮಕ್ಕಳ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸುತ್ತಿದ್ದು ಅದರ ಅಂಗವಾಗಿ ಇಂದು ಸವದತ್ತಿ ನಗರದಲ್ಲಿ ಸವದತ್ತಿ ಹಾಗೂ ರಾಮದುರ್ಗ ತಾಲೂಕಿನ ಆಯ್ದ ಶಾಲೆಗಳ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಂಡಿದೆ ಇದರ ಮುಂದಿನ ಭಾಗವಾಗಿ ಫಲಾನುಭವಿಗಳಿಗೆ ಅವರ ದಿವ್ಯಾಂಗತೆಗೆ ಅನುಗುಣವಾಗಿ ಅಂದರೆ ಅಂಧರಿಗೆ ಕನ್ನಡಕಗಳು, ಶ್ರವಣದೋಷವುಳ್ಳ ಮಕ್ಕಳಿಗೆ ಶ್ರವಣ ಸಾಧನೆಗಳು, ಹಾಗೂ ದೈಹಿಕ ವಿಕಲಚೇತನರಿಗೆ ಕುರ್ಚಿ, ಕ್ಯಾಲಿಪರ್, ಕೃತಕ ಕಾಲುಗಳು, ಸೇರಿದಂತೆ ಹಲವು ಸಾಧನ ಸಲಕರಣೆಗಳನ್ನು ಮುಂಬರುವ ದಿನಗಳಲ್ಲಿ ವೈದ್ಯರ ಶಿಪಾರಸಿನ ಅನುಗುಣವಾಗಿ ವಿತರಿಸಲಾಗುವುದೆಂದು ತಿಳಿಸಿದರು.

ಈ ಶಿಬಿರದಲ್ಲಿ ರಾಮದುರ್ಗ ಮತ್ತು ಸೌದತ್ತಿ ತಾಲೂಕಿನ ಆಯ್ದ ಶಾಲೆಗಳಿಂದ ದೈಹಿಕ ವಿಕಲಚೇತನ ಹೊಂದಿರುವ 28 ಮಕ್ಕಳಿಗೆ ಕಲಿಕೋಪಕರಣ ಹೊಂದಿರುವ ವೈಯಕ್ತಿಕ ಶಿಕ್ಷಣ ಕಿಟ್ ವಿತರಿಸಲಾಯಿತು ಹಾಗೂ ಪಾಲಕರಿಗೆ ಮಕ್ಕಳ ಶಿಕ್ಷಣ ಕುರಿತು ಮಾಹಿತಿ ನೀಡಲಾಯಿತು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ....
- Advertisement -

More Articles Like This

- Advertisement -
close
error: Content is protected !!
Join WhatsApp Group