ಸವದತ್ತಿಃ ಸಮರ್ಥನಂ ಸಂಸ್ಥೆ ಹಾಗೂ ಎಸ್‌ಬಿಐ ಫೌಂಡೇಶನ್ ಸಹಕಾರದೊಂದಿಗೆ ಸಮುದಾಯದ ಸದಸ್ಯರಿಗೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಸವದತ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭಾಭವನದಲ್ಲಿ ಒಂದು ದಿನದ ಸಮನ್ವಯ ಶಿಕ್ಷಣ ಕಾರ್ಯಗಾರ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಒಟ್ಟು ೪೫ ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು ಹಾಗೂ ತಮ್ಮ ಕಲಿಕೆಯ ಅನುಭವವನ್ನು ಹಂಚಿಕೊಂಡರು. ಈ ಒಂದು ಕಾರ್ಯಗಾರದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿಎನ್ ಬ್ಯಾಳಿ, ಶಿಕ್ಷಣ ಸಂಯೋಜಕರಾದ ಎಂ ಬಿ ಕಡಕೋಳ, ಸುಧೀರ ವಾಗೇರಿ, ಕಾಮನ್ನವರ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ವ್ಹಿ.ಸಿ.ಹಿರೇಮಠ, ಎಂ.ಎನ್.ಕರಡಿಗುಡ್ಡ, ರತ್ನಾ ಸೇತಸನದಿ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ.ಬಿ.ಕಡಕೋಳ, ಎಸ್.ಬಿ.ಬೆಟ್ಟದ, ಡಿ.ಎಲ್.ಭಜಂತ್ರಿ ಸೇರಿದಂತೆ ತಾಲೂಕಿನ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಂಗಳೂರು ಯೋಜನಾ ವ್ಯವಸ್ಥಾಪಕರಾದ, ಜಯಂತ್ ಕುಮಾರ್, ವಿಕಲತೆಯ ವಿಧಗಳನ್ನು ತಿಳಿಸುತ್ತ ಸಮುದಾಯದ ಸಹಭಾಗಿತ್ವದಲ್ಲಿ ವಿಕಲತೆಯನ್ನು ಗುರುತಿಸುವಿಕೆ, ಅವರಿಗೆ ಇರುವ ಯೋಜನೆಗಳು, ಇಲಾಖೆಯ ಅನುಷ್ಠಾನಾಧಿಕಾರಿಗಳ ಸಹಕಾರದಿಂದ ಜರುಗಿಸಬೇಕಾದ ಕಾರ್ಯಗಳು ಇತ್ಯಾದಿ ಮಾಹಿತಿಗಳನ್ನು ಹಂಚಿಕೊಂಡರು.
ಸಮರ್ಥನಂ ಅಂಗವಿಕಲರ ಸಂಸ್ಥೆ ಯೋಜನಾ ಸಂಯೋಜಕರಾದ ಶಿವಕುಮಾರ ಹಲ್ಯಾಳಿ ಹಾಗೂ ಸತ್ಯಪ್ಪ ರಾಚಪ್ಪನವರ್ ಸಮರ್ಥನಂ ಸಂಸ್ಥೆ ಇದುವರೆಗೂ ಹಮ್ಮಿಕೊಂಡಿರುವ ಚಟುವಟಿಕೆಗಳು ಸಮರ್ಥನಂ ಸಂಸ್ಥೆಯ ಉದ್ದೇಶ. ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿರುವ ಚಟುವಟಿಕೆಗಳ ಕುರಿತು ಮಾಹಿತಿಯನ್ನು ನೀಡಿದರು,
‘ವಿಶೇಷ ಶಿಕ್ಷಕರು ಹಾಗೂ ಅಮರ್ತನಂ ಅಂಗವಿಕಲರ ಸಂಸ್ಥೆಯ ಸಿಬ್ಬಂದಿಗಳು ಸಮರ್ಥನ ಸಂಸ್ಥೆಯ ಪರಿಚಯ ಸಂಸ್ಥೆಯ ಉದ್ದೇಶಗಳು ಸಮನ್ವಯ ಶಿಕ್ಷಣ ಗುರಿ ಮತ್ತು ತತ್ವಗಳನ್ನು ವಿಕಲಚೇತನ ಮಕ್ಕಳ ಸಮನ್ವಯ ಶಿಕ್ಷಣ ಹಾಗೂ ಅಂಗವಿಕಲರಿಗೆ ಇರುವ ಸೌಲಭ್ಯಗಳನ್ನು.ಹೂಲಿಕಟ್ಟಿ ಎಂ ಆರ್ ಡಬ್ಲ್ಯೂ ರವರು ಕುರಿತು ತಿಳಿಸಿದರು. ಸವದತ್ತಿ ತಾಲೂಕಿನಲ್ಲಿ ಇದುವರೆಗೂ ತಾಲೂಕು ಪಂಚಾಯತಿ ಮೂಲಕ ಯು.ಡಿ.ಐ.ಡಿ ಕುರಿತು ಹಮ್ಮಿಕೊಳ್ಳಲಾದ ಕಾರ್ಯ ಕುರಿತು ಕೂಡ ಹೂಲಿಕಟ್ಟಿಯವರು ಮಾಹಿತಿಯನ್ನು ನೀಡಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವ್ಹಿ.ಸಿ.ಹಿರೇಮಠ, ಎಂ.ಎನ್.ಕರಡಿಗುಡ್ಡ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್.ಬಿ.ಬೆಟ್ಟದ, ವೈ.ಬಿ.ಕಡಕೋಳ ಇದೇ ಸಂದರ್ಭದಲ್ಲಿ ಸಮನ್ವಯ ಶಿಕ್ಷಣ ಚಟುವಟಿಕೆಗಳ ಕುರಿತು ಮಾತನಾಡಿದರು.’ಅಂಗವಿಕಲರ ಪೋಷಕರ ಸಭೆ ಶಿಕ್ಷಕರಿಗೆ ಹೆಚ್ಚಿನ ತರಬೇತಿ ಶಾಲೆಗಳ ಅಭಿವೃದ್ಧಿ ಕುರಿತು ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡಲಾಯಿತು’. ಕಾರ್ಯಕ್ರಮವನ್ನು ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲ್ ಮುದ್ದಾಪುರ ನಿರ್ವಹಿಸಿದರು.ಕಾರ್ಯ ಯೋಜನೆಯ ಸಂದರ್ಭದಲ್ಲಿ ಎನ್.ಎ.ಹೊನ್ನಳ್ಳಿ ಚಟುವಟಕೆಯನ್ನು ನಡೆಸಿದರು.