ಅ.26-27ರಂದು ಶ್ರೀಶೈಲ ಜಗದ್ಗುರುಗಳ ಸಾನ್ನಿಧ್ಯದಲ್ಲಿ  ಯಡೂರ ಶ್ರೀವೀರಭದ್ರ ದೇವರ ಭಕ್ತರ ಸಭೆ

Must Read
ಧಾರವಾಡ : ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀಶೈಲ ಪೀಠದ ಶ್ರೀಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅ.26 ಮತ್ತು 27 ರಂದು ಚಿಕ್ಕೋಡಿ ತಾಲೂಕು ಯಡೂರ ಕ್ಷೇತ್ರದ ಶ್ರೀ ವೀರಭದ್ರ ದೇವರ ಸಮಸ್ತ ಭಕ್ತ ಸಮೂಹದ ನಾಲ್ಕು ಸಂಘಟನಾ ಸಭೆಗಳು ಜರುಗಲಿವೆ.

ಅ.26 ರಂದು(ರವಿವಾರ) ಮಧ್ಯಾಹ್ನ 2.30 ಗಂಟೆಗೆ ಧಾರವಾಡ ನಗರದ ಭಕ್ತರ ಸಭೆ ಶ್ರೀದುರ್ಗಾದೇವಿ ದೇವಾಲಯದ ಬಳಿ ಇರುವ ಶ್ರೀಸರಸ್ವತಿ ನಿಕೇತನದಲ್ಲಿ ಜರುಗಲಿದ್ದು, ಇದೇ ದಿನ ಸಂಜೆ 5.30 ಗಂಟೆಗೆ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸಭೆ ನಡೆಯಲಿದೆ. ಅ. 27 ರಂದು (ಸೋಮವಾರ) ಮುಂಜಾನೆ 11 ಗಂಟೆಗೆ ತಾಲೂಕಿನ ಗರಗ ಗ್ರಾಮದ ಶ್ರೀಮಡಿವಾಳ ಶಿವಯೋಗಿಗಳ ಮಠದಲ್ಲಿ ಸಭೆ ಜರುಗಲಿದ್ದು, ಇದೇ ದಿನ ಸಂಜೆ 4 ಗಂಟೆಗೆ ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಯಡೂರ ಶ್ರೀವೀರಭದ್ರ ದೇವರ ಭಕ್ತರ ಸಭೆ ನಡೆಯಲಿದೆ.

ಶಿರಕೋಳದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಸುಳ್ಳದ ಶ್ರೀಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಮ್ಮಿನಬಾವಿಯ ಶ್ರೀಅಭಿನವ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿ ನವನಗರದ ಶ್ರೀರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ನವಲಗುಂದದ ಶ್ರೀಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಬ್ಯಾಹಟ್ಟಿಯ ಶ್ರೀಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ, ಮೊರಬದ ಶ್ರೀಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ತುಪ್ಪದಕುರಹಟ್ಟಿಯ ಶ್ರೀವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕುಂದಗೋಳದ ಶ್ರೀ ಶಿಥಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲಘಟಗಿಯ ಶ್ರೀಅಭಿನವ ಮಡಿವಾಳ ಶಿವಾಚಾರ್ಯ ಸ್ವಾಮೀಜಿ, ಹಳ್ಯಾಳ-ಹಳೇಹುಬ್ಬಳ್ಳಿಯ ಶ್ರೀರೇಣುಕ ಪ್ರಸಾದ ಸ್ವಾಮೀಜಿ, ಶಿಂಗನಹಳ್ಳಿಯ ಶ್ರೀರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ತಿರುಮಲಕೊಪ್ಪದ ಶ್ರೀದಾನೇಶ್ವರ ಸ್ವಾಮೀಜಿ ಪಾಲ್ಗೊಳ್ಳುವರು.
ಯಡೂರ ಶ್ರೀವೀರಭದ್ರ ದೇವರ ಭಕ್ತ ಸಮೂಹದ ಸಂಘಟನಾ ಸಭೆಗಳ ಕುರಿತು ಹೆಚ್ಚಿನ ಮಾಹಿತಿಗೆ ಸುನೀಲ ಬಿರದೆ (ಮೊ.9482962754) ಇಲ್ಲವೇ ಮಂಜುನಾಥ ಸಾಲಿಮಠ (ಮೊ.9448823485) ಅವರನ್ನು ಸಂಪರ್ಕಿಸುವ0ತೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರದಿ : ಗುರುಮೂರ್ತಿ ಯರಗಂಬಳಿಮಠ ಅಮ್ಮಿನಬಾವಿ. ಮೊ : ೯೯೪೫೮೦೧೪೨೨

LEAVE A REPLY

Please enter your comment!
Please enter your name here

Latest News

ವಿದ್ಯಾರ್ಥಿಗಳು ತಂತ್ರಜ್ಞಾನದಿಂದಾಗಿ ದಾರಿ ತಪ್ಪಬಾರದು – ಲಕ್ಷ್ಮಿ ಸಾಲೊಡಗಿ

ಸಿಂದಗಿ - ಇಂದಿನ ಯುವ ಜನಾಂಗ ಮೊಬೈಲ್ ಅವಲಂಬಿತ ಜಗತ್ತಿನಲ್ಲಿದೆ. ಎಲ್ಲವೂ ಅಂಗೈನಲ್ಲಿಯೇ ಹಿಡಿದಿಟ್ಟುಕೊಳ್ಳುವ ಮನೋಭಾವದ ವಯಸ್ಸಿನ ಹದಿ ಹರೆಯದವರು ತಂತ್ರಜ್ಞಾನಗಳ ಪ್ರಭಾವಕ್ಕೆ ಒಳಗಾಗಿ ಹಾದಿ...

More Articles Like This

error: Content is protected !!
Join WhatsApp Group