ಸವದತ್ತಿ: ತಾಲೂಕಿನ ಯರಗಟ್ಟಿ ವಲಯದ ವಿಕಲಚೇತನ ಮಕ್ಕಳನ್ನು ಹೊಂದಿದ ಶಾಲೆಗಳ ಪ್ರಧಾನ ಗುರುಗಳ ಸಭೆಯನ್ನು ಸರಕಾರಿ ಮಾದರಿ ಶಾಲೆಯಲ್ಲಿ ಜರುಗಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಗಳಾದ ಎಂ. ಬಿ ಬಳಿಗಾರ. ಮಾತನಾಡಿ, ಎಲ್ಲಾ ಪ್ರಧಾನ ಗುರುಗಳು ಎಸ್. ಎ. ಟಿ. ಎಸ್ ತಂತ್ರಾಂಶದಲ್ಲಿ ವಿಕಲಚೇತನ ಮಕ್ಕಳ ನ್ಯೂನತೆಗಳನ್ನು ವೈದ್ಯಕೀಯ ಪ್ರಮಾಣ ಪತ್ರ ದಲ್ಲಿ ನಮೂದಿಸಿದ ವಿಕಲತೆ ಯನ್ನು ಸರಿಯಾಗಿ ನಮೂದಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಲು ಕರೆ ನೀಡಿದರು.
BIERT ಗಳಾದ ಶ್ರೀಮತಿ ಎಂ. ಎಂ. ಸಂಗಮ.ಮಾತನಾಡಿ,ಯು. ಡಿ. ಐ. ಡಿ ಮಹತ್ವ ಕುರಿತು ಈ ಸಂದರ್ಭದಲ್ಲಿ ತಿಳಿಸಿದರು. ವೈ. ಬಿ. ಕಡಕೋಳ.ಮಾತನಾಡಿ, ಐ. ಇ. ಪಿ ನಮೂನೆಯ ಭರ್ತಿ ಮಾಡುವ ಕುರಿತು ಹಾಗೂ ವೈದ್ಯಕೀಯ ಪ್ರಮಾಣ ಪತ್ರ ಯಾವ ಮಕ್ಕಳಿಗೆ ಇದುವರೆಗೆ ಮಾಡಿಸಿಲ್ಲವೋ ಅಂತಹ ಮಕ್ಕಳ ಪಾಲಕರಿಗೆ ತಿಳಿಸಿ ವೈದ್ಯಕೀಯ ಪ್ರಮಾಣ ಪತ್ರ ಮತ್ತು ಯು. ಡಿ. ಐ. ಡಿ ಕಾರ್ಡ್ ಅರ್ಜಿ ಸಲ್ಲಿಸುವ ಕುರಿತು ಮಾಹಿತಿ ತಿಳಿಸಿದರು ನಂತರ ಮಾತನಾಡಿದ ಸಿ. ವ್ಹಿ. ಬಾರ್ಕಿ.ಯವರು ಯರಗಟ್ಟಿ ಸತ್ತಿಗೇರಿ. ಶಿವಾಪುರ. ತಲ್ಲೂರು ಸಮೂಹ ಸಂಪನ್ಮೂಲ ಕೇಂದ್ರ ಗಳ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ವಿಕಲಚೇತನ ಮಕ್ಕಳ ವಿವರಗಳನ್ನು ಪ್ರತಿ ಶಾಲೆಗಳ ಪ್ರಧಾನ ಗುರುಗಳಿಗೆ ತಿಳಿಸಿದರು.
ಎಸ್. ಬಿ. ಬೆಟ್ಟದ ಗೃಹ ಆಧಾರಿತ ಮಕ್ಕಳ ವಹಿಯನ್ನು ಭರ್ತಿ ಮಾಡುವ ಕುರಿತು ವಿವರಣೆ ನೀಡಿದರು. ವ್ಹಿ.ಆರ ಡಬ್ಲೂಗಳಾದ ರಶೀದಾಬಾನು ಚಿಕ್ಕುಂಬಿ.ಅರ್ಜುನ ದೇವರ ಮನಿ ಇದುವರೆಗೆ ತಮ್ಮ ವ್ಯಾಪ್ತಿಯಲ್ಲಿ ವಿಕಲಚೇತನರಿಗೆ ಒದಗಿಸಿರುವ ಸೌಲಭ್ಯಗಳನ್ನು ಹಾಗೂ ತಾವು ನಿರ್ವಹಿಸುತ್ತಿರುವ ಕಾರ್ಯ ಚಟುವಟಿಕೆಗಳನ್ನು ಕುರಿತು ತಿಳಿಸಿದರು.
ಕಂಪ್ಯೂಟರ್ ಪ್ರೋಗ್ರಾಂ ಮರ್ ವಿನೋದ ಹೊಂಗಲ.ಮಾತನಾಡಿ ” ಜಿಯೋ ಟ್ಯಾಗ್ ಮತ್ತು ಯು ಡೈಸ್ ಕುರಿತು ಮಾಹಿತಿ ನೀಡಿದರು.
ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಸ್. ವ್ಹಿ. ಜಗುನವರ. ಎಸ್. ಬಿ. ಮಿಕಲಿ. ಎಂ. ಐ. ಮಡಿವಾಳರ. ವ್ಹಿ. ಆರ್. ಡಬ್ಲ್ಯು ಗಳಾದ ಎಸ್. ಎಂ. ಹೂಗಾರ. ಎ. ಎನ್.ನದಾಪ್.ಎಂ.ಎಂ.ಸಂಗೊಳ್ಳಿ. ಬಿ. ಎಸ್. ಹಳೇಮನಿ.ಎಚ್.ಎ.ಮುಲ್ಲಾ.ಬಿ.ಎಸ್ ಉಗರಗೋಳ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ UDID ಕಾರ್ಡ್. ವೈದ್ಯಕೀಯ ಪ್ರಮಾಣ ಪತ್ರ. ಬ್ಯಾಂಕ್ ಖಾತೆ. ವಿಕಲತೆಯುಳ್ಳ ಮಕ್ಕಳ ವಿಕಲತೆ ಯನ್ನು SATS ನಲ್ಲಿ ಇಂದೀಕರಿಸುವುದು. ನ್ಯೂನತೆಗಳನ್ನು ಕುರಿತು ಪ್ರಧಾನ ಗುರುಗಳಿಗೆ ತಿಳಿಸಲಾಯಿತು.ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾದ ಎಸ್. ಬಿ. ಆಲದ ಕಟ್ಟಿ.ಮಟ್ಟಿಪಡಿ.ಎಸ್.ಆರ್.ಬೆನಕಟ್ಟಿ.ಸಿದ್ಲಿಂಗಪ್ಪ ಗಾಣಗಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಎಂ. ಎಂ ಸಂಗಮ ಸ್ವಾಗತಿಸಿದರು. ಎಸ್. ಬಿ. ಮಿಕಲಿ ನಿರೂಪಿಸಿದರು. ಸಿ. ವ್ಹಿ.ಬಾರ್ಕಿ ವಂದಿಸಿದರು