ಬೀದರ – ಸಕ್ಕರೆ ಕಾರ್ಖಾನೆಗಳ ಮಾಲೀಕರ ವಿರುದ್ಧ ಬೀದರ್ ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದು ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನಿಗದಿ ಪಡಿಸುವಂತೆ ಬೇಡಿಕೆಯ ಜಿಲ್ಲಾಧಿಕಾರಿಗಳ ನೇತೃತ್ವದ ಸಭೆ ವಿಫಲಗೊಂಡಿದೆ.
ಕಾರ್ಖಾನೆಗಳು ಕಬ್ಬಿನ ರಿಕವರಿ ಕಡಿಮೆ ತೋರಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಕಳೆದ ವರ್ಷ ಪ್ರತಿ ಟನ್‌ಗೆ 2,600 ರಿಂದ 2650 ಖರೀದಿಸಿದ್ದ ಕಾರ್ಖಾನೆ ಮಾಲೀಕರು ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದಂತೆ ಖರೀದಿಸುತ್ತೇವೆ ಎನ್ನುತ್ತಾರೆ ಆದರೆ ರಿಕವರಿಯಲ್ಲಿ ಕಳ್ಳತನ ಮಾಡುತ್ತಾರೆ ಎಂದು ರೈತ ಮುಖಂಡ ಸಿದ್ರಾಮಪ್ಪ ಅಣದೊರೆ ಆರೋಪಿಸಿದ್ದಾರೆ.
ಪ್ರತಿ ಟನ್‌ಗೆ 3500 ರೂ ನೀಡಬೇಕು ಎಂದು ಪಟ್ಟು ಹಿಡಿಯಲಾಗಿದ್ದು ನ.೧೦ ರೊಳಗೆ ಘೋಷಣೆ ಮಾಡಬೆಡಕು ಇಲ್ಲದಿದ್ದರೆ ನ. ೧೨ ರಂದು ಹತ್ತು ಸಾವಿರ ರೈತರೊಂದಿಗೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ವರದಿ – ನಂದಕುಮಾರ ಕರಂಜೆ, ಬೀದರ

