ಆಗಸ್ಟ್ 8 ಅಂತಾರಾಷ್ಟ್ರೀಯ ಬೆಕ್ಕು ದಿನ
ಬದುಕಿನ ಕಾಲಘಟ್ಟದಲ್ಲಿ ನಮಗೇ ತಿಳಿಯದಂತೆ ಘಟನೆಗಳು ನಡೆದುಹೋಗುತ್ತವೆ . ವಿಶ್ವ ಬೆಕ್ಕುಗಳ ದಿನದಂದು ಒಂದು ಪುಟ್ಡ ಬೆಕ್ಕಿನ ಪ್ರಾಣ ಉಳಿಸಿದ ನೆನಪಿನ ವಿಶೇಷ ಬರಹ ಇದು.
ಪ್ರತಿ ವರ್ಷ ಆಗಸ್ಟ್ 8 ರಂದು, ಪ್ರಪಂಚವು ಅಂತಾರಾಷ್ಟ್ರೀಯ ಬೆಕ್ಕು ದಿನವನ್ನು ಆಚರಿಸುತ್ತದೆ. ವಿಶ್ವದ ಅತ್ಯಂತ ಪ್ರೀತಿಯ ಸಾಕುಪ್ರಾಣಿಗಳಲ್ಲಿ ಒಂದನ್ನು ಗೌರವಿಸುವ ದಿನವಾಗಿದೆ. ಇಂಟರ್ನ್ಯಾಷನಲ್ ಕ್ಯಾಟ್ ಡೇ, ಕೆಲವೊಮ್ಮೆ ವರ್ಲ್ಡ್ ಕ್ಯಾಟ್ ಡೇ ಎಂದು ಕರೆಯಲಾಗುತ್ತದೆ, ಇದು ಮಾನವರು ಮತ್ತು ಬೆಕ್ಕುಗಳ ನಡುವಿನ ಸೌಹಾರ್ದತೆಯನ್ನು ಆಚರಿಸಲು ಮಾತ್ರವಲ್ಲದೆ ಬೆಕ್ಕುಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರತಿಪಾದಿಸಲು 2002 ರಲ್ಲಿ ಸ್ಥಾಪಿಸಲಾದ ರಜಾ ದಿನವಾಗಿದೆ.
ಅಂತಾರಾಷ್ಟ್ರೀಯ ಬೆಕ್ಕು ದಿನದ ಇತಿಹಾಸ :
ಇಂಟರ್ನ್ಯಾಷನಲ್ ಕ್ಯಾಟ್ ಡೇ ಮೂಲ ಹಬ್ಬಗಳನ್ನು ಮೊದಲ ಬಾರಿಗೆ 2002 ರಲ್ಲಿ IFAW, ಪ್ರಾಣಿ ಕಲ್ಯಾಣಕ್ಕಾಗಿ ಅಂತಾರಾಷ್ಟ್ರೀಯ ನಿಧಿಯಿಂದ ಒಟ್ಟಿಗೆ ಸೇರಿಸಲಾಯಿತು. ಬೆಕ್ಕುಗಳು ಅನೇಕರಿಗೆ ಒಡನಾಟ ಮತ್ತು ಸೌಕರ್ಯವನ್ನು ನೀಡುತ್ತವೆ. ಬೆಕ್ಕನ್ನು ಹೊಂದುವುದು ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.
ನಿಮ್ಮ ಮನೆಯಲ್ಲಿ ಬೆಕ್ಕನ್ನು ಹೊಂದಿರುವುದು ಹೆಚ್ಚಿನ ಅಪಾಯದ ವ್ಯಕ್ತಿಗಳಲ್ಲಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮಾನಸಿಕ ಅಸ್ವಸ್ಥತೆಯ ವಿರುದ್ಧ ಹೋರಾಡಲು ಸಹ ಸಹಾಯ ಮಾಡುತ್ತದೆ. ಬೆಕ್ಕುಗಳು ಮನರಂಜನೆ ಮತ್ತು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಬಹುದು.
ಮಾನಸಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ನಿವಾರಿಸಲು ಬೆಕ್ಕಿನೊಡನೆ ಒಡನಾಟ ಪ್ರಯೋಜನಕಾರಿಯೆನ್ನಲಾಗಿದೆ. ಆದ್ದರಿಂದ ಹೊರಗೆ ಬೆಕ್ಕುಗಳು ಮತ್ತು ನಾಯಿಗಳು ಮಳೆಯಾಗುತ್ತಿರುವಾಗ ಮತ್ತು ಮುದ್ದಾಡಲು ಯಾರೂ ಇಲ್ಲದಿದ್ದಾಗ, ಯಾವುದೇ ಕಪ್ಪು, ಶುಂಠಿ, ಪರ್ಷಿಯನ್, ಸಯಾಮಿ, ಬರ್ಮೀಸ್, ಬೆಂಗಾಲ್, ಶೋರ್ಥೈರ್, ಮಂಚ್ಕಿನ್, ಬಲಿನೀಸ್, ರಾಗಮಫಿನ್ ಅಥವಾ ಯಾವುದೇ ಹಳೆಯ ಬೀದಿ ಬೆಕ್ಕು ಅಂತಾರಾಷ್ಟ್ರೀಯ ಬೆಕ್ಕು ದಿನದಂದು ಚಮತ್ಕಾರ ಮಾಡುತ್ತದೆ. .
ಬೆಕ್ಕಿನ ಮರಿಯೊಂದರ ಪ್ರಾಣ ಉಳಿಸಿದ ನೆನಪು :
ಜುಲೈ 10ರ ರಾತ್ರಿ ಬಡಾವಣೆಯ ಅನುಪಮಾ ಶೆಣೈ ಅವರು ಸಮಯಕ್ಕೆ ಬಂದು ಸ್ಪಂದಿಸದೆ ಹೋಗಿದ್ದರೆ ಬೆಕ್ಕಿನ ಮರಿ ಉಳಿಯುವುದೇ ಕಷ್ಟ ಆಗಿತ್ತು , ಒಂದು ಮುದ್ದಾದ ಬೆಕ್ಕಿನ ಮರಿ ಎಲ್ಲಿಂದಲೋ ನಮ್ಮ ಮನೆಯ ಅಂಗಳಕ್ಕೆ ಬಂದು ಹಾಲಿಗಾಗಿ ಅದು ಚಿಕ್ಕ ಧ್ವನಿ ಯಲ್ಲಿ ಕೂಗುತ್ತ ಇದ್ದಾಗ ನನ್ನ ಧರ್ಮ ಪತ್ನಿ ಅದಕ್ಕೆ ಹಾಲು ಕೊಟ್ಟಾಗ ಅದು ಕುಡಿದು ನಮ್ಮ ಮನೆಯ ಅಂಗಳದಲ್ಲಿ ಮೂಲೆಯಲ್ಲಿ ಹೋಗಿ ಕುಳಿತಿತ್ತು.
ಸಂಜೆಯ ವೇಳೆಗೆ ಅದು ಕಾಣದೆ ಇದ್ದಾಗ ಅದರ ತಾಯಿ ಅದನ್ನು ಕರೆದುಕೊಂಡು ಹೋಗಿರಬೇಕು ಎಂದು ಭಾವಿಸಿದ ನನ್ನ ಹೆಂಡತಿ ನಳಿನಿ ಮನೆಯ ಗೆಟ್ ತೆಗೆದುಕೊಂಡು ಹೊರಗೆ ಹೋಗಿ ನೋಡಿದಾಗ ರಸ್ತೆಯ ಮಧ್ಯದಲ್ಲಿ ಅಸಹಾಯಕ ಸ್ಥಿತಿ ಯಲ್ಲಿ ಮಲಗಿತ್ತು.ಬೆಕ್ಕಿನ ಮರಿಗೆ ನಾಯಿಗಳು ದಾಳಿ ನಡೆಸಿವೆ ಅಂತ ಶ್ರೀನಿವಾಸ್ ಅವರು ಹೇಳಿದರು…. ಮತ್ತೆ ನಾಯಿಗಳು ಎಲ್ಲಿ ಬಂದು ದಾಳಿ ನಡೆಸುತ್ತದೆಯೋ ಎಂದು ವಾಹನಗ ಳಿಂದಲೂ ತೊಂದರೆ ಆಗುತ್ತೆ ಅಂತ ಕಾವಲಿದ್ದರು….
ನನ್ನ ಹೆಂಡತಿ ನಳಿನಿ ಕೋಲು ಹಿಡಿದು ರಸ್ತೆಯಲ್ಲಿ ನಿಂತು ನನಗೆ ಹತ್ತು ಬಾರಿ ಕರೆಮಾಡಿದ್ದಳು, ನಾನು ಮನೆ ಕಡೆ ಹೆಜ್ಜೆ ಹಾಕುತ್ತ ಬಂದಾಗ ರಸ್ತೆಯಲ್ಲಿ ಕೋಲು ಹಿಡಿದು ಬೆಕ್ಕಿನ ಮರಿಯ ರಕ್ಷಣೆ ಗೆ ನನ್ನ ಹೆಂಡತಿ ನಿಂತಿದ್ದಳು, ನಾನು ಬಂದವನು ಅನೇಕ ಪ್ರಾಣಿ ರಕ್ಷಣೆ ಮಾಡುವವರಿಗೆ ಕರೆ ಮಾಡಿದರೆ ಕೆಲವರು ನಾವು ನಾಯಿಗಳನ್ನು ಮಾತ್ರ ರಕ್ಷಣೆ ಮಾಡುತ್ತೇವೆ ಬೆಕ್ಕಿನ ಮರಿ ರಕ್ಷಣೆ ಮಾಡುವುದ್ದಿಲ್ಲ ಅಂದರೆ ಕೆಲವರು ನಾಳೆ ಬೆಳ್ಳಿಗೆ ಅವರ ಚಿಕೆತ್ಸೆ ನೀಡುವ ಕೇಂದ್ರಕ್ಕೆ ಕರೆದುಕೊಂಡು ಬನ್ನಿ ಅಂದರು,
ರಸ್ತೆಯಲ್ಲಿ ವಾಹನಗಳು ಸಾಗುವಾಗ ಬೆಕ್ಕಿನ ಮರಿಗೆ ಏನಾದರೂ ತೊಂದರೆ ಆದರೆ ಎಂದು ಭಾವಿಸಿ ಅದನ್ನು ರಸ್ತೆಯ ಬದಿಗೆ ಬಿಡಲು ಮುಟ್ಟಲು ಹೋದಾಗ ಸಿಟ್ಟು ತೋರಿಸಿ ಅದರ ಮುಂಬದಿಯ ಕಾಲು ಗಳಿಂದ ಮುಂದೆ ಹೋಗಲು ಪ್ರಯತ್ನ ಪಟ್ಟು ಅದರ ಅಸಹಾಯಕ ಸ್ಥಿತಿ ಹಾಗೂ ಕೋಪವನ್ನು ಹೊರಹಾಕಿತ್ತು, ಚಿಕಿತ್ಸೆ ಕೊಟ್ಟರೆ ಬದುಕುತ್ತದೆ ಎಂಬ ವಿಶ್ವಾಸ ಬಂದಿತ್ತು .
ಅದೇ ಸಮಯಕ್ಕೆ ಸರಿಯಾಗಿ ಚಂದ್ರಣ್ಣ ಬಂದಿದ್ದರು, ಆಗ ಅವರನ್ನು ಕರೆದು ಬೆಕ್ಕಿನ ಮರಿ ಉಳಿಸಲು, ಚಿಕಿತ್ಸೆ ಕೊಡಿಸಲು ನಿಮಗೆ ಯಾರಾದರೂ ಗೊತ್ತಿದ್ದರೆ ತಿಳಿಸಿ ಎಂದಾಗ ಚಂದ್ರಣ್ಣ, ಮಗ ಭೂಷಣ್ ಅನು ಅಕ್ಕ ನಿಗೆ ಕರೆ ಮಾಡಿ ಅಂತ ನನಗೆ ಮಾತನಾಡಲು ಕೊಟ್ಟಾಗ ಅನು ಅವರಿಗೆ ನಾಲ್ಕನೇ ತಿರುವಿನಲ್ಲಿ ಬೆಕ್ಕಿನ ಮರಿಗೆ ಆಗಿರುವ ಪರಿಸ್ಥಿತಿ ಬಗ್ಗೆ ತಿಳಿಸಿದಾಗ ಅವರು ಬಂದು ಸ್ಪಂದಿಸಿ ಜೆ. ಪಿ ನಗರ ದ ಪಶು ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಬರುವುದಾಗಿ ತಿಳಿಸಿ , ಬೆಕ್ಕಿನ ಮರಿಯ ಹಿಂಭಾಗ ದ ಕಾಲು ಮೂಳೆ ಮುರಿದು ಹೋಗಿದೆ ಹಾಗೂ ಬಾಯಿಯ ಹತ್ತಿರ ಸ್ವಲ್ಪ ರಕ್ತ ಬಂದಿದೆ ಎಂದು ಅದನ್ನು ಚಿಕಿತ್ಸೆ ಗೆ ಕರೆದುಕೊಂಡು ಹೋದರು,…
ಒಟ್ಟಿನಲ್ಲಿ ಕರೆಗೆ ಸ್ಪಂದಿಸಿ ಬಂದ ಅನುಪಮಾ ಶೆಣೈ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತ ,
ನಾಯಿಗಳು ಹೆಚ್ಚು ದಾಳಿ ಮಾಡದ ಹಾಗೆ ಬೆಕ್ಕಿನ ಮರಿಯನ್ನ ರಕ್ಷಿಸಿದ ಶ್ರೀನಿವಾಸ್ ಗೂ ಬೆಕ್ಕಿನ ಮರಿಯ ಪ್ರಾಣಕ್ಕೆ ನಾಯಿಗಳಿಂದ ವಾಹನಗಳಿಂದ ಎಲ್ಲಿ ತೊಂದರೆ ಆಗತ್ತೊ ಎಂದು ರಸ್ತೆಯಲ್ಲಿ ಕೋಲು ಹಿಡಿದು ನಿಂತಿದ್ದ ನನ್ನ ಧರ್ಮ ಪತ್ನಿ ನಳಿನಿ ಗೂ ಹಾಗೂ , ನಮ್ಮ ಮನೆಯ ಮುಂಭಾಗದಿಂದ ಕೊಂಚ ದೂ ರದಲ್ಲಿ ಇರುವ ಮನೆಯ ಅಜ್ಜಿಗೂ ಹಾಗೂ ನಾವೆಲ್ಲರೂ ಅನು ಅವರು ಬೆಕ್ಕಿನ ಮರಿಯನ್ನು ಚಿಕಿತ್ಸೆ ಕೊಡಿಸಲು ತೆಗೆದುಕೊಂಡು ಹೋದಾಗ ಮನಸ್ಸಿನಲ್ಲಿ ಒಂದು ರೀತಿಯ ನಿರಾಳ ಭಾವನೆ…..
ವಿಶೇಷ ಬರಹ : ತೀರ್ಥಹಳ್ಳಿ ಅನಂತ ಕಲ್ಲಾಪುರ