ಬೆಳಗಾವಿ – ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಬರವಣಿಗೆ ಸಾಹಿತ್ಯ ಇನ್ನಿಲ್ಲದಂತೆ ಮಾಯವಾಗುತ್ತಿರುವ ಈ ದಿನಗಳಲ್ಲಿ ತಮ್ಮ ಭಾವನೆಗಳನ್ನು ಪದ್ಯಗಳಲ್ಲಿ ಮತ್ತು ತಮ್ಮ ಭಕ್ತಿ ಭಾವಗಳನ್ನು ಪದ್ಯಗಳಲ್ಲಿ ತೋರಿಸುವುದರ ಮೂಲಕ ಸಾಹಿತ್ಯ ಸೇವೆಯನ್ನು ಪುಸ್ತಕ ರೂಪದಲ್ಲಿ ಹೊರ ತರುವುದು ದುಸ್ತರವಾಗಿದೆ ಈ ಸನ್ನಿವೇಶದಲ್ಲಿ ಪ್ರಥಮ ಪೂಜಿತ ಗಣಪತಿಯ ಕುರಿತಾದ ಪದ್ಯಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರ ತರುತ್ತಿರುವ ಸಾಹಿತಿ ಎಂ. ವೈ ಮೆಣಸಿನಕಾಯಿ ರವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹಿರಿಯ ಸಾಹಿತಿ ಪುಣಜಗೌಡ ಹೇಳಿದರು
ರವಿವಾರ ದಿ. 11 ರಂದು ಬೆಳಗಾವಿಯ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾದ “ಶ್ರೀ ಗಣೇಶಾಯ ನಮಃ” ಕವನ ಸಂಕಲನ ಲೋಕಾರ್ಪಣೆ ಗೊಳಿಸಿ ಜಲತ್ ಕುಮಾರ್ ಪುಣಜಗೌಡ ಮಾತನಾಡಿದರು.
ಕವನ ಸಂಕಲನ ಪರಿಚಯಿಸಿ ಹಿರಿಯ ಸಾಹಿತಿ ಬಿ ಕೆ ಮಲಾಬಾದಿ ಮಾತನಾಡಿ ಭಕ್ತಿ ಭಾವ ಎಂಬುವುದು ಯಾಂತ್ರಿಕವಾಗಿರುವ ಈ ದಿನಗಳಲ್ಲಿ ಭಕ್ತಿಯ ಭಾವಗಳನ್ನು ತಮ್ಮ ಪದ್ಯದ ಪದಗಳಲ್ಲಿ ತೋರಿಸಿದ್ದು ಕವಿಗಳ ಭಾವನೆ ಭಕ್ತಿಯನ್ನು ಉಕ್ಕಿಸುವಂತಿವೆ. ಆ ನಿಟ್ಟಿನಲ್ಲಿ ಇನ್ನಷ್ಟು ಇಂತಹ ಕೃತಿಗಳು ಹೊರಬರಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಯಶೀಲಾ ಬ್ಯಾಕೋಡ ಪುಸ್ತಕಗಳ ಮಹತ್ವದ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಪರಿಷತ್ ವತಿಯಿಂದ ಸಾಹಿತಿ ಎಂ. ವೈ ಮೆಣಸಿನಕಾಯಿರವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಯ. ರು. ಪಾಟೀಲ, ಸುನೀಲ ಪರೀಟ, ಸುಮನ ಪರೀಟ, ಪಾರ್ವತಿ ತುಪ್ಪದ,ಜ್ಯೋತಿ ಬದಾಮಿ, ಶ್ರೀರಂಗ ಜೋಶಿ, ಅ ಬ ಇಟಗಿ, ಸಂಗಮೇಶ ಅರಳಿ, , ವೀರಭದ್ರ ಅಂಗಡಿ, ನಿತಿನ್ ಮೆಣಸಿನಕಾಯಿ, ರುದ್ರಾoಬಿಕಾ ಯಾಳಗಿ,ಎಂ. ಎಸ್. ಹೊಂಗಲ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶಿವಾನಂದ ತಲ್ಲೂರ ಸ್ವಾಗತಿಸಿದರು. ಡಾ ಹೇಮಾ ಸೋನಳ್ಳಿ ನಿರೂಪಿಸಿದರು. ಬಿ. ಬಿ. ಮಠಪತಿ ವಂದಿಸಿದರು.

