Homeಸುದ್ದಿಗಳುಋತುಚಕ್ರ ನೈರ್ಮಲ್ಯ ದಿನಾಚರಣೆ

ಋತುಚಕ್ರ ನೈರ್ಮಲ್ಯ ದಿನಾಚರಣೆ

ದಿನಾಂಕ 27/05/2022 ರಂದು ಜಿಲ್ಲಾ ಪಂಚಾಯತ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಚಿಕ್ಕೋಡಿ ವಿಭಾಗ , ರೂರಲ್ ಡೆವಲಪಮೆಂಟ್ ಸೋಸೈಟಿ (RDS) ಸಂಸ್ಥೆ ಮುರಗೋಡ, ಇವರ ಸಹಯೋಗದೊಂದಿಗೆ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮ ಪಂಚಾಯತ ಇವರ ಸಂಯೋಗದಲ್ಲಿ ಋತು ಚಕ್ರ ನೈರ್ಮಲ್ಯ ದಿನಾಚರಣೆಯನ್ನೂ ಆಚರಿಸಲಾಯಿತು.

ಸಂದರ್ಭದಲ್ಲಿ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ದೀಪಕ್ K ಅವರು ಮಾತನಾಡಿ, ಋತುಚಕ್ರ ಕ್ರಿಯೆ ಒಂದು ನೈಸರ್ಗಿಕ ಕ್ರಿಯೆಯಾಗಿದ್ದು ವಿದ್ಯಾರ್ಥಿನಿಯರು ಭಯಪಡುವ ಮತ್ತು ಆತಂಕ ಪಡುವ ಅವಶ್ಯಕತೆಯಿಲ್ಲ. ಹಾಗೇ ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು ಪ್ರಕೃತಿ ಸಹಜ ಪ್ರಕ್ರಿಯೆಯನ್ನು ಸಹಜವಾಗಿ ಸ್ವೀಕರಿಸುವಂತೆ ಪ್ರೇರೇಪಿಸಬೇಕಿದೆ ಮತ್ತು ಋತು ಚಕ್ರದ ಪ್ರಕ್ರಿಯೆ ಯಲ್ಲಿ ಬಳಸಿದ ವಸ್ತುಗಳನ್ನು ಹೊರಗಡೆ ಎಸೆಯಬಾರದು ಹಾಗೇ ಅದನ್ನು ಇನ್ಸುಲೇಟರ್ ಮಶಿನ ಬಳಸಿ ಪರಿಸರವನ್ನು ಸ್ವಚ್ಛವಾಗಿಡಬೇಕು ಎಂದು ಮಾತನಾಡಿದರು.

ಜಿಲ್ಲಾ ಪಂಚಾಯತಿಯ IEC ಸಮಾಲೋಚಕರಾದ ಶ್ರೀ ಬಾಹುಬಲಿ ಮೇಳವಂಕಿ ಮತ್ತು ಶ್ರೀ ಶಿವರಾಜ್ ಹೊಳೆಪ್ಪಗೊಳ HRD ಪರಿಣಿತರು ಹಾಗೂ ದಡ್ಡಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಾದ ಪ್ರಶಾಂತ ಮುನ್ನೊಳ್ಳಿ ಮತ್ತು ಪಂಚಾಯಿತಯ ಸರ್ವ ಸದಸ್ಯರೂ ಆಶಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವ ಸಹಾಯ ಸಂಘಗಳ ಮಹಿಳೆಯರು ಮತ್ತು ಗ್ರಾಮದ ಸರ್ವ ಜನರು ಹಾಗೂ ಪಂಚಾಯಿತಿ ಸಿಬ್ಬಂದಿ ಹಾಗೂ ಇನ್ನುಳಿದವರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group