ಸಿಂದಗಿ: ಪಟ್ಟಣದ ಮರ್ತೂರ ಮತ್ತು ಮಕಾಂದಾರ ಜನರ ಬಹುದಿನಗಳ ಬೇಡಿಕೆಯಾಗಿದ್ದ ಸ್ಮಶಾನ ಜೀರ್ಣೋದ್ದಾರಕ್ಕೆ 15ನೇ ಹಣಕಾಸು ಯೋಜನೆಯಡಿ ರೂ 5 ಲಕ್ಷ ಅನುದಾನದಲ್ಲಿ ಸಲೀಮ್‍ಪಟೇಲ ಮರ್ತೂರ ಅವರು ಸ್ಮಶಾನ ಕಾಮಗಾರಿ ಅಚ್ಚುಕಟ್ಟಾಗಿ ನಿರ್ಮಿಸಿ ಸರಕಾರದ ಯೋಜನೆ ಸದ್ಬಳಕೆ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಪ್ರಶಂಸೆ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆಯ 15ನೇ ಹಣಕಾಸು ಯೋಜನೆಯಡಿ ಮರ್ತೂರ ಮತ್ತು ಮಕಾಂದಾರ ಸ್ಮಶಾನ ಜೀರ್ಣೋದ್ಧಾರದ ರೂ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸ್ಮಶಾನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಪಟ್ಟಣದಲ್ಲಿನ ಸ್ಮಶಾನ ಭೂಮಿಗಳು ಹಿಂದಿನಿಂದಲೂ ಬಳಕೆ ಮಾಡಿಕೊಳ್ಳತ್ತ ಬರಲಾಗುತ್ತಿವೆ ಆದರೆ ಅವುಗಳ ಜಿರ್ಣೋದ್ದಾರ ಮಾಡುವ ಕಾರ್ಯ ನಡೆದಿಲ್ಲ ಅದಕ್ಕೆ ಸ್ಮಶಾನದ ಸುತ್ತಲು ಕಂಪೌಂಡ ನಿರ್ಮಿಸಿದರೆ ಒತ್ತುವರಿಯಾಗುವುದು ನಿಲ್ಲುತ್ತದೆ ಆ ಕಾರಣಕ್ಕೆ ಸ್ಮಶಾನಗಳ ಜೀರ್ಣೋದ್ದಾರಕ್ಕೆ ಕೈ ಹಾಕಲಾಗಿದೆ. ಪಟ್ಟಣದಲ್ಲಿ ಇನ್ನುಳಿದ ಸ್ಮಶಾನಗಳನ್ನು ಸರ್ವೇ ಮಾಡಿಸಿ ಹದ್ದು ಬಂದೋಬಸ್ತ ಮಾಡುವ ಮೂಲಕ ಅವುಗಳ ಜೀರ್ಣೋದ್ದಾರ ಮಾಡಿದರೆ ಶಾಶ್ವತವಾಗಿ ಉಳಿದುಕೊಳ್ಳುತ್ತವೆ ಆ ನಿಟ್ಟಿನಲ್ಲಿ ಪಟ್ಟಣದ ಅಭಿವೃದ್ಧಿಯಲ್ಲಿನ ಸ್ವಲ್ಪ ಹಣ ಸ್ಮಶಾನ ಅಭಿವೃದ್ಧಿಗೆ ಬಳಕೆ ಮಾಡಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಈ ಸ್ಮಶಾನ ಅಭಿವೃದ್ಧಿಗೆ ಅನುದಾನ ಸಾಕಾಗಿಲ್ಲ ಎನ್ನುವುದು ತಿಳಿದು ಬಂದಿದ್ದು ಇನ್ನೂ ಸಣ್ಣ ಪುಟ್ಟ ಕಾಮಗಾರಿಗಳಿದ್ದರು ಹೆಚ್ಚುವರಿಯಾಗಿ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಸಮಾಜದ ಮುಖಂಡ ಬಸೀರ ಮರ್ತೂರ ಮಾತನಾಡಿ, ಈ ಹಿಂದೆ ಹಲವಾರು ಜನರು ಅಧ್ಯಕ್ಷರಾಗಿ ಹೋಗಿದ್ದಾರೆ ಆದರೆ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರು ಮಾಡಿದ ಕಾರ್ಯಗಳು ಸಾರ್ವತ್ರಿಕವಾಗಿವೆ. ಮರ್ತೂರ, ಮಕಾಂದರ ಸಮಾಜದ ಸ್ಮಶಾನ ಅಭಿವೃದ್ಧಿಗೆ ರೂ. 5 ಲಕ್ಷ ಹಾಗೂ ಎಲ್ಲ ಮುಸ್ಲೀಂ ಬಾಂಧವರ ಸ್ಮಶಾನ ಜೀರ್ಣೋದ್ದಾರಕ್ಕೆ ರೂ 10 ಲಕ್ಷ ಅನುದಾನ ನೀಡಿ ಅಭಿವೃದ್ಧಿ ಪಡಿಸುತ್ತಿರುವುದಲ್ಲದೆ. ತರಕಾರಿ ವ್ಯಾಪಾರ ಮಾಡುವ ಎಲ್ಲ ಸಮುದಾಯಗಳ ಜನರಿಗೆ ಮಾರುಕಟ್ಟೆ ನಿರ್ಮಾಣ ಕಾರ್ಯಕ್ಕೆ ಟೆಂಡರ ಕರೆದಿದ್ದು ಇನ್ನೂ ಕೆಲ ದಿನಗಳಲ್ಲಿ ಕಾಮಗಾರಿ ಪ್ರಾರಂಭಗೊಳ್ಳುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಉಪಾದ್ಯಕ್ಷ ಹಾಸೀಂ ಅಳಂದ, ಅಲ್ಲಿಸಾಬ ಮರ್ತೂರ. ಬಾಬುಸಾಬ ಮರ್ತೂರ. ಅಲ್ಲಾಬಕ್ಷ ಮರ್ತೂರ. ಶೌಕತ್ ಮಕಾಂದಾರ, ಶಬ್ಬೀರ ಮರ್ತೂರ. ಸಲೀಮ್‍ಪಟೇಲ ಮರ್ತೂರ, ಶಾಹನವಾಜ ಮಂದೇವಾಲಿ, ಜಾಕೀರ ಬಾಗವಾನ, ನಬೀ ಮರ್ತೂರ. ಕಯುಮ್ ಮಕಾಂದಾರ, ಜಬ್ಬಾರ ಮರ್ತೂರ. ಮಹಿಬೂಬ ಮರ್ತೂರ, ವಸೀಮ್ ಮರ್ತೂರ. ತೌಸೀಫ ನಾಟೀಕಾರ. ಫಾರೂಖ ಮರ್ತೂರ, ಬುರಾನ ಮಕಾಂದಾರ, ಅಬ್ದುಲ್ ಮೇಸ್ತ್ರಿ ಸೇರಿದಂತೆ ಅನೇಕರು ಇದ್ದರು.
ಇಸ್ಮಾಯಿಲ್ ಶೇಖ ಸ್ವಾಗತಿಸಿ ನಿರೂಪಿಸಿದರು. ಸಲೀಂಪಟೇಲ ವಂದಿಸಿದರು.