spot_img
spot_img

ಮಾನವೀಯ ಮೌಲ್ಯಗಳ ಪ್ರತಿಪಾದಕರು: ಎಮ್ ಐ ಸವದತ್ತಿ | ದಲಿತರ ಧ್ವನಿ: ಸಿದ್ಧಲಿಂಗಯ್ಯ

Must Read

- Advertisement -

ಬೆಳಗಾವಿ : ಮೊನ್ನೆ ನಿಧನರಾದ ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಐ.ಸವದತ್ತಿ ಅವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದರು.

ಬೆಳಗಾವಿಯೊಂದಿಗೆ ಸಂಪರ್ಕವಿಟ್ಟುಕೊಂಡಿದ್ದರು. ನಡೆ-ನುಡಿಯಲ್ಲಿ ಒಂದಾಗಿದ್ದ ಸವದತ್ತಿ ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಕೊಡುಗೆ ಬಹುಮುಖವಾದುದು ಎಂದು ಹಿರಿಯ ಚಿಂತಕ ಪ್ರೊ ಜ್ಯೋತಿ ಹೊಸೂರ ಅವರು ಹೇಳಿದರು.

ಡಾ.ಎಂ ಐ ಸವದತ್ತಿ

ಹೊಸೂರ ಅವರು ಪ್ರೊ.ಸವದತ್ತಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಎಂ.ವಾಯ.ಮೆಣಸಿನಕಾಯಿ, ಸಿ.ಎಂ. ಬೂದಿಹಾಳ, ಪ್ರೊ ಬಸವರಾಜ ಕಲ್ಲಣ್ಣವರ ಹಾಗೂ ಎ.ಎ.ಸನದಿ ಅವರು ಸಭೆಯಲ್ಲಿ ಇದ್ದರು.

- Advertisement -

ಸಿದ್ಧಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ

ದಲಿತರ ಧ್ವನಿಯಾಗಿದ್ದ ದಲಿತ ಕವಿ ಸಿದ್ದಲಿಂಗಯ್ಯ ಅವರ ಅಗಲಿಕೆಯಿಂದ ಕನ್ನಡ ನಾಡು ಒಬ್ಬ ಪ್ರತಿಭಾವಂತನನ್ನು ಕಳೆದುಕೊಂಡು ಬಡವಾಗಿದೆ. ಉಪನ್ಯಾಸಕರಾಗಿ, ಕವಿ, ಸಾಹಿತಿಯಾಗಿ, ವಿಧಾನ ಪರಿಷತ್ ಸದಸ್ಯರಾಗಿ, ದಲಿತ ಪರ ಹೋರಾಟಗಾರರಾಗಿ ಅವರು ಗೈದ ಸೇವೆ ಅನುಪಮ. ನಾಡೋಜ ಸಿದ್ಧಲಿಂಗಯ್ಯ ಸಾಮಾಜಿಕ ಸಮಾನತೆಗಾಗಿ ಸದಾ ತುಡಿಯುವ ಹಿರಿಯ ಜೀವ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಿ.ಎ.ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಾರ್ಥಿಸುತ್ತದೆ ಎಂದು ಅಧ್ಯಕ್ಷ ಪ್ರೊ.ಜ್ಯೋತಿ ಹೊಸೂರ ಪ್ರಕಟಣೆ ಯೊಂದರಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group