ಹೀಗೆ ಕೆಲವರು
1.. ಕವಿವಯ೯ರು
ಯಾರಿಗೂ ತಲೆಬಾಗುವುದಿಲ್ಲ
ಎನ್ನುತ್ತಿದ್ದ ಕವಿವಯ೯ರು
ಬಾಗಿದರು
ಹೊದಿಸಿದ ಸನ್ಮಾನ
ಶಾಲಿಗೆ
2..ಕತೆಗಾರರು
ನಮ್ಮವರು
ಒಳ್ಳೆಯ ಕತೆಗಾರರು
ಆದರೆ ಬರೆಯುವುದಿಲ್ಲ
ಹೇಳುವರು
ದಿನಕ್ಕೊಂದು ಕತೆ
ಮನೆಗೆ ಕುಡಿದು
ಬರುವುದು ತಡವಾದರೇ.
3.ವಿಮಶ೯ಕರು
.ನಮ್ಮೂರಿನ ಕೆಲ
ಹೆಂಗಸರು
ಕಟು ವಿಮಶ೯ಕರು
ದಿನಾ ಬೆಳಗ್ಗೆ
ಚಾವಡಿಯಲ್ಲಿ ಅವರಿವರ
ಮನೆ ಕತೆಯನ್ನು
ಕಟುವಾಗಿ ವಿಮಶಿ೯ಸುವರು
4.. ಸ್ಪೂತಿ೯ದಾಯಕರು
ಕಾಲೇಜಿನಲ್ಲಿ ಕಾವ್ಯಳಿಗೆ
ಪ್ರೇಮಪತ್ರ ಬರೆಯುತ್ತಿದ್ದ
ಕಾಳಿದಾಸರು
ಕಾವ್ಯಳನ್ನು ಮದುವೆಯಾಗಿ
ಬರೆಯುತ್ತಿರುವರು
ದುರಂತ ಕಥನಾ ಕಾವ್ಯ
ಇದಕ್ಕೆ ಮಡದಿಯೇ
ಸ್ಪೂತಿ೯ದಾಯಕರು.
—
ಗೊರೂರು ಅನಂತರಾಜು
ಹಾಸನ
9449462879