ಬೆಂಗಳೂರು – ಇದೇ ದಿ. ೨೪ ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿದ್ಯಾರ್ಥಿನಿಯೊಬ್ಬಳ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರು ಜನ ಕಾಮುಕರಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದು ಇನ್ನೂ ಒಬ್ಬನಿಗಾಗಿ ಹುಡುಕಾಟ ಆರಂಭವಾಗಿದೆ.
ಈ ಮಧ್ಯೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಆಪರೇಷನ್ ಸಕ್ಸಸ್ ಎಂದು ಹೇಳಿದ್ದಲ್ಲದೆ ಮಧ್ಯಾಹ್ನ ಎರಡು ಗಂಟೆಯ ಒಳಗೆ ಎಲ್ಲ ಮಾಹಿತಿಯನ್ನೂ ಪೋಲೀಸರು ಅಥವಾ ತಾವು ನೀಡುವುದಾಗಿ ಹೇಳಿದರು.
ನಾಲ್ಕು ದಿನಗಳ ಹಿಂದೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿಹಾರಕ್ಕೆ ಹೋಗಿದ್ದ ಪ್ರೇಮಿಗಳಿಬ್ಬರ ಮೇಲೆ ಆರು ಜನ ಕುಡುಕರು ದಾಳಿ ಮಾಡಿ ವಿದ್ಯಾರ್ಥಿನಿಯ ರೇಪ್ ಮಾಡಿದ್ದರು. ಅಲ್ಲದೆ ಜೊತೆಯಲ್ಲಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು ಕೂಡ.
ಸುಮಾರು ೮೪ ದಿನಗಳ ನಂತರ ಕಾಮುಕರನ್ನು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದು ಅವರಿಗೆ ಈ ಮೊದಲೇ ಕ್ರಿಮಿನಲ್ ಹಿನ್ನೆಲೆ ಇರುವುದಾಗಿ ತಿಳಿದುಬಂದಿದೆ.
ಬಂಧಿತರಲ್ಲಿ ನಾಲ್ವರು ತಮಿಳುನಾಡಿನವರು, ಒಬ್ಬ ಚಾಮರಾಜನಗರದವನು. ಇವರೆಲ್ಲ ವಿದ್ಯಾರ್ಥಿಗಳಲ್ಲ ಕೂಲಿ ಮಾಡುವವರು ಎಂದು ಹೇಳಲಾಗಿದೆ. ಕರ್ನಾಟಕ – ತಮಿಳುನಾಡಿನ ಗಡಿ ಪ್ರದೇಶದಲ್ಲಿ ಪ್ರತಿದಿನ ಸಾವಿರಾರು ಕೂಲಿ ಕಾರ್ಮಿಕರು ಹೋಗಿ ಬಂದು ಮಾಡುತ್ತಾರೆ ಅಂಥವರಲ್ಲಿ ಈ ಆರು ಜನ ಪ್ರತಿದಿನವೂ ರೇಪ್ ಸಂತ್ರಸ್ತೆ ಹಾಗೂ ಅವಳ ಸ್ನೇಹಿತ ಪ್ರತಿದಿನ ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದುದನ್ನು ಗಮನಿಸಿ ಅವರನ್ನು ಬೆಂಬಲಿಸಿ ಈ ಅತ್ಯಾಚಾರ ಕೈಗೊಂಡಿದ್ದಾರೆ.
ಸಾಂಸ್ಕೃತಿಕ ನಗರವಾದ ಮೈಸೂರಿನಲ್ಲಿ ಇಂಥದೊಂದು ಕೃತ್ಯ ನಡೆದಿದ್ದು ದೇಶಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. ಸರ್ಕಾರಕ್ಕೂ ಕೂಡ ಇದು ಸವಾಲಾಗಿ ಪರಿಣಮಿಸಿತ್ತು. ವಿಪರ್ಯಾಸವೆಂದರೆ, ಹೆಣ್ಣು ಮಕ್ಕಳು ನಿರ್ಜನ ಪ್ರದೇಶಗಳಿಗೆ ಹೋಗಬಾರದು ಎಂಬ ಗೃಹ ಸಚಿವರ ಹೇಳಿಕೆಯನ್ನು ಮಹಿಳೆಯರೇ ಸೇರಿದಂತೆ ವಿರೋಧ ಪಕ್ಷದ ನಾಯಕರು ಟೀಕೆ ಮಾಡಿದ್ದರು. ಯುವತಿಯರಿಗೆ ಬುದ್ಧಿ ಮಾತು ಹೇಳಿದ್ದನ್ನೇ ತಪ್ಪೆಂದು ಬಿಂಬಿಸಲಾಗಿತ್ತು.
ಈ ಪ್ರಕರಣದ ಆರೋಪಿಗಳು ಈ ಹಿಂದೆಯೂ ಇಂಥ ಕೃತ್ಯಗಳಲ್ಲಿ ಭಾಗಿಯಾಗಿದ್ದರೆಂದು ಹೇಳಲಾಗುತ್ತಿದ್ದು ಇನ್ನೊಬ್ಬ ಕಟುಕ ಸಿಕ್ಕ ಕೂಡಲೇ ಇನ್ನೂ ವಿವರ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.