spot_img
spot_img

ಬೈಕ್ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದ ಸಚಿವ ಪ್ರಭು ಚವ್ಹಾಣ

Must Read

spot_img

ಬೀದರ – ದ್ವಿಚಕ್ರ ವಾಹನ ಅಪಘಾತಗೊಂಡು ನರಳುತ್ತ ರಸ್ತೆಯಲ್ಲಿಯೇ ಬಿದ್ದಿದ್ದವರನ್ನು ಕಂಡ ಕೂಡಲೇ ಆ್ಯಂಬುಲೆನ್ಸ್ ತರಿಸಿ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿದ ಸಚಿವ ಪ್ರಭು ಚವ್ಹಾಣ ಮಾನವೀಯತೆ ಮೆರೆದಿದ್ದಾರೆ.

ಕಮಲನಗರ ತಾಲೂಕಿನ ಸಂಗಮ ಗ್ರಾಮದ ಬಳಿ ಹಾಲಹಳ್ಳಿ ಗ್ರಾಮದ ಇಬ್ಬರು ಬೈಕ್ ಸವಾರರು ಅಪಘಾತದಿಂದಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದರು.

ಇದನ್ನು ಕಂಡ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ತಕ್ಷಣವೇ ಅಂಬುಲೆನ್ಸ್ ಗೆ ಕರೆ ಮಾಡಿದ್ದು ಅದು ಬಂದು ಗಾಯಾಳುಗಳನ್ನು ಕರೆದೊಯ್ಯುವವರೆಗೂ ನಿಂತ ಮೇಲುಸ್ತುವಾರಿ ನಡೆಸಿದರು.

ಸಚಿವ ಪ್ರಭು ಚವ್ಹಾಣ ಅವರು ಸ್ವಗ್ರಾಮ ದಿಂದ ಯಾದಗಿರಿ ಜಿಲ್ಲೆಗೆ ಪ್ರಯಾಣಿಸುತ್ತಿರುವಾಗ ಇಂದು ಬೆಳಿಗ್ಗೆ ಮಾರ್ಗ ಮಧ್ಯದಲ್ಲಿ ಈ ಘಟನೆ ನಡೆದಿದೆ.

ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!