- Advertisement -
ಬೀದರ – ಪ್ರಭು ಚವ್ಹಾಣಗೆ ಸಚಿವ ಸ್ಥಾನ ಪಡೆದಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ನೇತೃತ್ವದಲ್ಲಿ ಜಿಲ್ಲೆಯ ಹುಮನಾಬಾದ್ ಪಟ್ಟಣದ ವಿವಿಧ ವೃತ್ತಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿಹಂಚಿ ಸಂಭ್ರಮಿಸಿದರು.
- Advertisement -
ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ ಪಾಟೀಲ ಮಾಡ್ಗುಳ್, ಪಕ್ಷದ ಮುಖಂಡ ವಿನಾಯಕ ಮಂಡಾ, ಸಾಂಸ್ಕೃತಿಕ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಗೋಪಾಲಕೃಷ್ಣ ಮೋಹಳೆ ಕಾರ್ಯದರ್ಶಿಗಳಾದ ಜ್ಞಾನದೇವ್ ಧುಮಾಳೆ ಮತ್ತು ಗಿರೀಶ್ ತುಂಬಾ ಉಪಸ್ಥಿತರಿದ್ದರು.
ವರದಿ: ನಂದಕುಮಾರ ಕರಂಜೆ, ಬೀದರ