ಅಲ್ಪಸಂಖ್ಯಾತರ ಸೊಸಾಯಿಟಿ ಎಲ್ಲರಿಗೂ ಸೇರಿದ್ದು – ಜಬ್ಬಾರ್

Must Read

ಹುನಗುಂದ: ಅಝಾದ್ ಅಲ್ಪ ಸಂಖ್ಯಾತರ ಪತ್ತಿನ ಸಹಕಾರ ಸಂಘವು ಬರೀ ಮುಸ್ಲಿಂರಿಗೆ ಮೀಸಲಾಗಿಲ್ಲ. ಎಲ್ಲ ಸಮಾಜದವರನ್ನು ಒಳಗೊಂಡಿದೆ ಎಂದು ಸಂಘದ ಅಧ್ಯಕ್ಷ ಜಬ್ಬಾರ್ ಕಲಬುರ್ಗಿ ಹೇಳಿದರು.

ಪಟ್ಟಣದ ಅಝಾದ್ ಅಲ್ಪ ಸಂಖ್ಯಾತರ ಪತ್ತಿನ ಸಹಕಾರ ಸಂಘದ ಕೇಂದ್ರ ಕಚೇರಿಯಲ್ಲಿ ನಡೆದ ೧೯ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘದ ಕಾರ್ಯ ನಿರ್ವಹಣೆ, ಸಮಸ್ಯೆ ಬಗ್ಗೆ ಮುಕ್ತ ಚರ್ಚೆಗೆ ವಾರ್ಷಿಕ ಸಭೆ ನಡೆಸಲಾಗುತ್ತಡೆ. ಶೇರುದಾರರು ಅಳುಕು ಅಂಜಿಕೆ ಇಲ್ಲದೆ ತಮ್ಮ ಅಹವಾಲು ಪ್ರಶ್ನಿಸಬಹುದು. ಸಂಘದ ೧೩೦೦ಕ್ಕೂ ಹೆಚ್ಚು ಸದಸ್ಯರೇ ಸಂಘದ ಬೆಳವಣಿಗೆಗೆ ಆಧಾರ ಸ್ತಂಭಗಳಾಗಿದ್ದಾರೆ ಎಂದರು.

ಉಪಾಧ್ಯಕ್ಷ ಮೆಹಬೂಬ್ ಸರ್ಕಾವಸ್ ಮಾತನಾಡಿ, ೨೦೦೬ರಲ್ಲಿ ಪ್ರಾರಂಭವಾದ ಆಜಾದ್ ಅಲ್ಪಸಂಖ್ಯಾತರ ಸಂಘ ೨೦೨೫ ಹೊತ್ತಿಗೆ ಸ್ವಂತ ಕಚೇರಿ ಹೊಂದುವಷ್ಟು ಸದೃಢವಾಗಿದೆ ಎಂದರು. ನಿರ್ದೇಶಕರಾದ ಇಮಾಮ ಕರಡಿ, ಹನುಮಂತ ನಡುವಿನಮನಿ, ಪರವೇಜ್ ಖಾಝಿ, ಮಹಮ್ಮದ್ ಶಬ್ಬೀರ್ ಮೌಲ್ವಿ, ರಜಾಕ ರೇಶ್ಮಿ ರಫೀಕ್,  ಶರಣಪ್ಪ  ಹಳಪೇಟಿ ಕಾನೂನು ಸಲಹೆಗಾರ ಯೂನಸ್ ಸಂಗಮಕರ್ ಇದ್ದರು. ವ್ಯವಸ್ಥಾಪಕ ಮಹಬೂಬ್ ನಾಯಕ್ ನಿರೂಪಿಸಿ ವಂದಿಸಿದರು.

Latest News

ರೈತರು ಸಾವಯವ ಕೃಷಿ ಮಾಡಿ ಭೂಮಿಯ ಫಲವತ್ತತೆ ಕಾಯಬೇಕು – ಸಹದೇವ ಯರಗೊಪ್ಪ

ಮೂಡಲಗಿ: ’ರೈತರು ಸಾವಯವ ಮತ್ತು ನೈಸರ್ಗಿಕ ಕೃಷಿ ಮಾಡುವ ಮೂಲಕ ಭೂಮಿಯ ಫಲವತ್ತತೆಯನ್ನು ವೃದ್ಧಿಸುವ ಜೊತೆಗೆ ಸಮಾಜದ ಆರೋಗ್ಯವನ್ನು ಕಾಯುವುದು ಅವಶ್ಯವಿದೆ’ ಎಂದು ಚಿಕ್ಕೋಡಿ ಉಪ...

More Articles Like This

error: Content is protected !!
Join WhatsApp Group