ಎಮ್ಮೆ ಮತ್ತು ಒಂದು ಆಕಳು ಸಜೀವ ದಹನ
ಬೀದರ – ಜಿಲ್ಲೆಯ ಹುಲಸೂರ ತಾಲೂಕಿನ ದೇವನಾಳ ಗ್ರಾಮದಲ್ಲಿ ಬಡ ರೈತನೊಬ್ಬನ ದನಗಳ ಕೊಟ್ಟಿಗೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಗರ್ಭಾವಸ್ಥೆಯಲ್ಲಿ ಇರುವ ಒಂದು ಎಮ್ಮೆ ಮತ್ತು ಒಂದು ಆಕಳು ಸಜೀವ ದಹನವಾಗಿವೆ. ಇನ್ನೊಂದು ಹೋರಿಯು ಸಾವು ಬದುಕಿನ ಮಧ್ಯೆ ಹೊರಾಟ ನಡೆಸಿದೆ.
ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಹೋರಿಗೆ ವೈದ್ಯಾಧಿಕಾರಿ ಶಿವಕುಮಾರ ಕೌಟೆ ನೀಡುತ್ತಿದ್ದಾರೆ.
ಶ್ರೀಧರ ಬಾಬುರಾವ್ ಬಿರಾದಾರ ಎನ್ನುವ ಬಡ ರೈತನಿಗೆ ಸೇರಿದ ಕೊಟ್ಟಿಗೆ. ಇದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಕೊಟ್ಟಿಗೆ ಸೇರಿ ಒಟ್ಟು 3 ಲಕ್ಷ ರೂಪಾಯಿಯ ನಷ್ಟ ಉಂಟಾಗಿದೆಯೆನ್ನಲಾಗಿದೆ.
ಸ್ಥಳಕ್ಕೆ ಹುಲಸೂರ ತಹಸಿಲ್ದಾರ ಶಿವಾನಂದ ಮೆತ್ರೆ ಭೇಟಿ ನೀಡಿ ಪರಿಶೀಲಿಸಿ, ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ಪರಿಹಾರ ಕಲ್ಪಿಸಿ ಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ಆದರೆ ಜಾನುವಾರುಗಳನ್ನು ಕಳೆದುಕೊಂಡ ರೈತ ಮಹಿಳೆ ಅಸಹಾಯಕತೆಯಿಂದ ಗಳಗಳನೆ ಕಣ್ಣೀರು ಸುರಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಜೀವನೋಪಾಯಕ್ಕಾಗಿ ಸಾಕಿಕೊಂಡಿದ್ದ ಜಾನುವಾರುಗಳನ್ನು ಇಂಥ ದುರ್ಘಟನೆಯಲ್ಲಿ ಕಳೆದುಕೊಂಡ ರೈತ ಕಂಗಾಲಾಗಿದ್ದು ಸರ್ಕಾರ ಹಾಗೂ ಸ್ಥಳೀಯ ಆಡಳಿತ ಶೀಘ್ರವೇ ಬಡ ರೈತನ ನೆರವಿಗೆ ಬರಬೇಕಾಗಿದೆ.
ವರದಿ: ನಂದಕುಮಾರ ಕರಂಜೆ,ಬೀದರ