ಸಿಂದಗಿ — ತಾಲೂಕಿನ ಸೋಂಪುರ ಗ್ರಾಮದ ವಿದ್ಯಾರ್ಥಿಗಳ ಬಹುದಿನ ಬೇಡಿಕೆಯಾಗಿರುವ ಸೋಂಪುರ ಗ್ರಾಮದಿಂದ ಸಿಂದಗಿ ಪಟ್ಟಣಕ್ಕೆ ಬಸ್ಸಿನ ಸೌಕರ್ಯವನ್ನು ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಬೇಡಿಕೆಗೆ ಶಾಸಕ ಅಶೋಕ ಮನಗೂಳಿ ಸ್ಪಂದಿಸಿದ್ದಾರೆ.
ಸೋಂಪುರ ಗ್ರಾಮದಿಂದ ಸಿಂದಗಿ ಪಟ್ಟಣದವರೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ನೂತನ ಬಸ್ಸಿಗೆ ಮಂಗಳವಾರ ವಿದ್ಯಾರ್ಥಿಗಳಿಂದಲೇ ಚಾಲನೆ ನೀಡಿದರು.
ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸೋಂಪುರ ಗ್ರಾಮದಿಂದ ಸಿಂದಗಿ ಪಟ್ಟಣಕ್ಕೆ ನಿತ್ಯ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಕಲಿಯುವುದಕ್ಕೆ ಬರುತ್ತಲಿದ್ದಾರೆ. ಬಸ್ಸಿನ ಸೌಕರ್ಯವಿಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದೆ ಬೀಳುತ್ತಿದ್ದರು. ಇದನ್ನ ಅರ್ಥೈಸಿಕೊಂಡು ಆ ಗ್ರಾಮದ ಯಾವ ಮಕ್ಕಳಿಗೂ ಕಲಿಕೆಗೆ ತೊಂದರೆ ಆಗಬಾರದು ಎಂದು ನಿರ್ಧರಿಸಿ ಅವರ ಬೇಡಿಕೆಯನ್ನ ಪೂರೈಸಲು ಮುಂದಾಗಿದ್ದೇವೆ. ತಾಲೂಕಿನಲ್ಲಿ ಇನ್ನೂ ಕೆಲವು ಗ್ರಾಮಗಳಿಂದ ಸಿಂದಗಿ ನಗರಕ್ಕೆ ಶಾಲಾ ಕಾಲೇಜಿನ ಸರಿಯಾದ ಸಮಯಕ್ಕೆ ಬರುತ್ತಿಲ್ಲ ಅಂಥವುಗಳನ್ನ ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ ಎಂದರು.
– ನಾನು ಕಾಲೇಜಿನ ವಿದ್ಯಾರ್ಥಿನಿ ನಮ್ಮ ಕಾಲೇಜು ಬೆಳಗ್ಗೆ 7.45 ಕ್ಕೆ ಪ್ರಾರಂಭಗೊಳ್ಳುತ್ತದೆ ಆದರೆ ಬಸ್ಸಿನ ಸೌಕರ್ಯವಿಲ್ಲದಿರುವ ಕಾರಣ ಖಾಸಗಿ ವಾಹನದಲ್ಲಿ ಬರುವ ನಾವುಗಳು ನಿತ್ಯ ಒಂದು ಅವಧಿಯ ತರಗತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಇದರಿಂದ ನಮಗೆ ನಿತ್ಯ ತೊಂದರೆಯಾಗುತ್ತಿತ್ತು. ಪ್ರಸ್ತುತ ನಾವು ನಮ್ಮ ಶಾಲಾ-ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ನಾವು ಇಂದು ಹೋಗುವಂತಾಗಿದ್ದೇವೆ. ಎಲ್ಲ ವಿದ್ಯಾರ್ಥಿಗಳ ಪರವಾಗಿ ಶಾಸಕ ಅಶೋಕ ಮನಗೂಳಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ.
ಲಕ್ಷ್ಮಿ ಪಾಟೀಲ, ವಿದ್ಯಾರ್ಥಿನಿ
ಎಚ್. ಜಿ. ಕಾಲೇಜ ಸಿಂದಗಿ.
ಇದೆ ಸಂದರ್ಭದಲ್ಲಿ ಸಿಂದಗಿ ಘಟಕ ವಿಭಾಗಿ ನಿಯಂತ್ರಕ ರೇವಣಸಿದ್ದಪ್ಪ ಖೈನೂರು, ಸಿಂದಗಿ ಬ್ಲಾಕ್ ಅಧ್ಯಕ್ಷ ಸುರೇಶ ಪೂಜಾರಿ, ಜಿಲ್ಲಾ ಕೆಡಿಪಿ ಸದ್ಯಸ ನೂರು ಅಹಮ್ಮದ ಅತ್ತಾರ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಶಂಬೇವಾಡ ಸೇರಿದಂತೆ ಗ್ರಾಮ ಪಂಚಾಯಿತಿ ಸದ್ಯಸರು,ಊರಿನ ಹಿರಿಯರು ಯುವಕರು ತಾಯಿಂದಿರು ಉಪಸ್ಥಿತರಿದ್ದರು..