spot_img
spot_img

ದಿಢೀರ್ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ ಶಾಸಕ ಅಶೋಕ ಮನಗೂಳಿ; ಗೈರಾದ ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ

Must Read

spot_img
- Advertisement -

ಸಿಂದಗಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಮತ್ತು ಸಿಬ್ಬಂದಿಗಳು ಬೇಕಾಬಿಟ್ಟಿಯಾಗಿ ಆಸ್ಪತ್ರೆಗೆ ಬರುತ್ತಾರೆ ಎಂಬ ಮಾಹಿತಿ  ಪಡೆದುಕೊಂಡ ಶಾಸಕ ಅಶೋಕ ಮನಗೂಳಿ ಅವರು  ಸೋಮವಾರ ಯಾರಿಗೂ ಮಾಹಿತಿ ನೀಡದೆ ದಿಢೀರವಾಗಿ ಆಸ್ಪತ್ರೆಗೆ ತೆರಳಿ ಪರಿಶಿಲನೆ ನಡೆಸಿದ್ದಾರೆ ಈ ವೇಳೆ ಅಧಿಕಾರಿಗಳ ವರ್ತನೆ ನೋಡಿ ಶಾಸಕರು ಗರಂ ಆದ ಘಟನೆ ನಡೆದಿದೆ.

ತಾಲೂಕು ಕೇಂದ್ರದಲ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವಾಗಿದ್ದ ಈ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ ಆದರೆ ಇರುವ ಸಿಬ್ಬಂದಿಗಳು ಸರಿಯಾಗಿ ಸಮಯಕ್ಕೆ ಸರಿಯಾಗಿ ಬಂದರೆ ಬರುವ ಎಲ್ಲಾ ರೋಗಿಗಳಿಗೆ ನೋಡಿಕೊಳ್ಳಬಹುದು ಆದರೆ ಇಲ್ಲಿ ಕೆಲಸ ಮಾಡುವ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬಾರದೆ ಇರುವುದರಿಂದ ರೋಗಿಗಳಿಗೆ ತೊಂದರೆ ಆಗುತ್ತಿದೆ ಮತ್ತು ಕೆಲವರು ಕೆಲಸಕ್ಕೆ ಬಾರದೆ ಹಾಜರಾತಿ ಹಾಕುತ್ತಾರೆ ಇನ್ನೂ ಕೆಲವರು ರೋಗಿಗಳ ಜೊತೆಗೆ  ಸರಿಯಾಗಿ ವರ್ತನೆ ಮಾಡದೇ ದರ್ಪ ತೋರುತ್ತಾರೆ  ಎಂದು ಅಲ್ಲಿನ ಜನರು ಶಾಸಕರ ಗಮನಕ್ಕೆ ತಂದಾಗ  ತೀವ್ರವಾಗಿ ಗರಂ ಆದ ಶಾಸಕ ಅಶೋಕ ಮನಗೂಳಿ ಅವರು ಅಲ್ಲಿರುವ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ವೇಳೆ ಮಾಹಿತಿ ನೀಡುವಲ್ಲಿ ಅಧಿಕಾರಿಗಳು  ಸ್ವಲ್ಪಹೊತ್ತು ಹಿಂದೇಟು ಹಾಕುತ್ತಿರುವುದನ್ನು ಕಂಡ ಶಾಸಕರು ಹಾಜರಾತಿ ಪುಸ್ತಕ ಗಮನಿಸಿದರು ಅದರಲ್ಲಿ ಗೈರಾದ ಸಿಬ್ಬಂದಿಗಳ ಪಟ್ಟಿ ನೊಡಿ ಕೂಡಲೇ ಗೈರಾದವರು ಗೈರಾಗಲು ಕಾರಣ ಏನು ಎಂದು ಕೊಡಬೇಕು ಮತ್ತು  ಸಮಯಕ್ಕೆ ಸರಿಯಾಗಿ ಬಾರದೆ ಇರುವ ಸಿಬ್ಬಂದಿಗಳ ಹಾಜರಾತಿಯಲ್ಲಿ ಗೈರು ಎಂದು ನಮೂದಿಸಿ ಎಂದು ತಿಳಿಸಿದರು.

- Advertisement -

ಈ ವೇಳೆ ಅಲ್ಲಿರುವ  ಅಧಿಕಾರಿಗಳ ಜೊತೆಗೆ ಮಾತನಾಡಿದ   ಅವರು, ಸಮಾಜದಲ್ಲಿ ಎಲ್ಲರೂ ಶ್ರೀಮಂತರಾಗಿರಲ್ಲ  ಅಲ್ಲದೆ  ಸರ್ಕಾರಿ ಆಸ್ಪತ್ರೆ ಮರುಜೀವ ನೀಡುವ ದೇವಾಲಯ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು  ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ, ಅಲ್ಲದೆ ಸರ್ಕಾರ  ಕೋಟ್ಯಂತರ ಹಣ ಬಿಡುಗಡೆ ಮಾಡಿ  ಇಂತಹ ದೊಡ್ಡದೊಡ್ಡ ಕಟ್ಟಡ ನಿರ್ಮಾಣ ಮಾಡಿ ಬೇಕಾದ  ಯಂತ್ರೋಪಕರಣಗಳನ್ನು ನೀಡುತ್ತಿದೆ ಆದರೆ ನೀವು ಈ ರೀತಿ ಬೇಕಾಬಿಟ್ಟಿ ಕರ್ತವ್ಯ ಮಾಡಿದರೆ ಹೇಗೆ, ನಿಮ್ಮನ್ನು  ಹಾಗೂ ಸರ್ಕಾರವನ್ನೇ ನಂಬಿಕೊಂಡಿರುವ  ಸಾರ್ವಜನಿಕರಿಗೆ ನಿಮ್ಮಿಂದ ತೊಂದರೆಯಾದರೆ ನಾನು  ಸುಮ್ಮನೆ ಇರುವದಿಲ್ಲ ನಾನು ಪ್ರತಿ ವಾರದಲ್ಲಿ ಒಮ್ಮೆ   ಆಸ್ಪತ್ರೆಗೆ ಬೇಟಿ ನೀಡುತ್ತೇನೆ ಆದರೆ ನಾನು ಯಾವಾಗ   ಬರುತ್ತೇನೆ ಎಂದು ಯಾರಿಗೂ ಹೇಳುವುದಿಲ್ಲ ಆಗ  ಸಿಬ್ಬಂದಿಗಳು ಹೀಗೆ ಕಂಡುಬಂದರೆ ಕೂಡಲೇ  ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ವಿರುದ್ದ  ಕ್ರಮ ಜರುಗಿಸುವಂತೆ ತಿಳಿಸುತ್ತೇನೆ ಎಂದರು.

ನಮ್ಮ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಮತ್ತು  ಶಿಕ್ಷಣ ಇಲಾಖೆಯಲ್ಲಿ ತೊಂದರೆಯಾದರೆ ನಾನು ಯಾವ ಕಾಲಕ್ಕೂ ಸಹಿಸಿಕೊಳ್ಳುವದಿಲ್ಲ, ಬಹುತೇಕ ಜನರು ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿತರಾಗಿರುತ್ತಾರೆ ಹೀಗಾಗಿ ಅವರ ಸೇವೆ  ಮಾಡುವುದೇ ನನ್ನ ಉದ್ದೇಶವಾಗಿದೆ, ಬಡಜನರ ಜೀವನ  ಜೊತೆಗೆ ಚಲ್ಲಾಟ ಆಡದೆ ಎಲ್ಲಾ ಅಧಿಕಾರಿಗಳು  ಸಮಯಕ್ಕೆ ಸರಿಯಾಗಿ ಸೇವೆ ಮಾಡಿ ಇಲ್ಲವಾದರೆ  ನಾನು ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು  ಶಾಸಕರು ಖಡಕ್ ಎಚ್ಚರಿಕೆ ನೀಡಿದರು.


- Advertisement -

ಜನರು ನನಗೆ ಜನ ಸೇವೆ ಮಾಡಲು ಅವಕಾಶ  ನೀಡಿದ್ದಾರೆ ಹೀಗಾಗಿ ನಾನು ಜನರಿಗಾಗಿ ಮತ್ತು ಜನರ ಸೇವೆಗಾಗಿ ಸದಾ ಸಿದ್ದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಅಧಿಕಾರಿಗಳು ಕೂಡಾ ನಮ್ಮೊಂದಿಗೆ ಸಹಕಾರ ನೀಡಬೇಕು ಆಗ ಜನರಿಗೆ ಅನೂಕೂಲವಾಗುತ್ತದೆ ಅದು ಬಿಟ್ಟು ಅಧಿಕಾರಿಗಳು ಜನರ ಜೀವದ ಜೊತೆಗೆ ಚೆಲ್ಲಾಟ ಆಡುವ ಕೆಲಸ ಮಾಡಿದರೆ ನಾನು ಸುಮ್ಮನೆ ಇರಲ್ಲ, ಆರೋಗ್ಯ, ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳು ಜನರಿಗೆ ತೊಂದರೆ ಕೊಡಬಾರದು ಕೊಟ್ಟರೆ ನನ್ನ ಕೆಲಸ ನಾ ಮಾಡುತ್ತೇನೆ.

ಅಶೋಕ ಮನಗೂಳಿ. ಶಾಸಕರು, ಸಿಂದಗಿ

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group