spot_img
spot_img

ಸರ್ವಜನಾಂಗಗಳ ಶಾಂತಿಯ ಪ್ರತೀಕ ಶಾಸಕ ಬಾಲಚಂದ್ರ ಜಾರಕಿಹೊಳಿಯವರು – ಭೂತಪ್ಪ ಗೊಡೇರ

Must Read

ಗೋಕಾಕ : 2004 ರಿಂದ ಅರಭಾವಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಎಲ್ಲ ಧರ್ಮಿಯರನ್ನು ಒಂದುಗೂಡಿಸುವ ಮೂಲಕ ಸರ್ವ ಜನಾಂಗಗಳ ಶಾಂತಿಯ ಪ್ರತೀಕರಾಗಿದ್ದಾರೆ ಎಂದು ಪ್ರಭಾಶುಗರ ನಿರ್ದೇಶಕ ಭೂತಪ್ಪ ಗೊಡೇರ ಹೇಳಿದರು.

ಶುಕ್ರವಾರದಂದು ಲೋಕೋಪಯೋಗಿ ಇಲಾಖೆಯಿಂದ 3 ಕೋಟಿ ರೂ. ವೆಚ್ಚದ ಉದಗಟ್ಟಿ ಕ್ರಾಸ್‍ದಿಂದ ಉದಗಟ್ಟಿವರೆಗಿನ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಾಲಚಂದ್ರ ಜಾರಕಿಹೊಳಿ ಅವರಿಂದ ಅರಭಾವಿ ಕ್ಷೇತ್ರದಲ್ಲಿ ಶಾಂತಿ-ಸಾಮರಸ್ಯ ಮೂಡುತ್ತಿದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮದೇಯಾದ ಛಾಪು ಮೂಡಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರು ಈ ನಾಡಿನ ಕೊಡಗೈ ದೊರೆಯಾಗಿ ಹೆಸರುವಾಸಿಯಾಗಿದ್ದಾರೆ. ಅವರಲ್ಲಿ ಯಾರೇ ಅಪರಿಚಿತರು ಬಂದು ತಮ್ಮ ಕಷ್ಟ ಕಾರ್ಪಣ್ಯಗಳನ್ನು ತೋಡಿಕೊಂಡರೂ ತಕ್ಷಣವೇ ಸ್ಪಂದನೆ ಮಾಡುವ ಹೃದಯವಂತ ಶಾಸಕರು ಎಂದು ಅವರು ಹೇಳಿದರು.

ಮುಖಂಡರಾದ ಹನಮಂತ ಕೊಪ್ಪದ, ತಾಪಂ ಮಾಜಿ ಸದಸ್ಯ ಮಲಕಾರಿ ವಡೇರ, ಗ್ರಾಪಂ ಮಾಜಿ ಅಧ್ಯಕ್ಷ ಪಾಂಡುರಂಗ ದೊಡಮನಿ ಮುಂತಾದವರು ಮಾತನಾಡಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಮಾಜಮುಖಿ ಕಾರ್ಯಗಳನ್ನು ಪ್ರಶಂಸಿಸಿದರು. ಉದಗಟ್ಟಿ ರಸ್ತೆಯನ್ನು ಅಭಿವೃದ್ಧಿಪಡಿಸುವ ಮೂಲಕ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ದೊರಕಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉದಗಟ್ಟಿ ಗ್ರಾಪಂ ಅಧ್ಯಕ್ಷ ಅರ್ಜುನ ಸನದಿ, ರಂಗಪ್ಪ ಛಪ್ರಿ, ರಾಜು ಬಳಿಗಾರ, ಸಂಜು ಸನದಿ, ಮುತ್ತೆಪ್ಪ ಬಾಗನ್ನವರ, ಯಲ್ಲಪ್ಪ ಮಿಂಚ್ಯಾಗೋಳ, ಲಕ್ಷ್ಮಣ ಗುಡದಾರ, ಮುತ್ತೆಪ್ಪ ನಾಯ್ಕ, ನಾಗಪ್ಪ ಗುಡದಾರ, ಕಲ್ಲಪ್ಪ ಅಕ್ಕೆನ್ನವರ, ಕೃಷ್ಣಾ ಛಪ್ರಿ, ಭೀಮಶೆಪ್ಪ ಗೊಡೇರ, ಗೋಪಾಲ ಮುಧೋಳ, ಪುಂಡಲೀಕ ಬಾಗನ್ನವರ, ಪಿಡಿಓ ದೇಯನ್ನವರ, ಗುತ್ತಿಗೆದಾರ ಬಸವಂತ ದಾಸನವರ ಮುಂತಾದವರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!