spot_img
spot_img

ಸಿಂದಗಿ ಪಟ್ಟಣದ ಸೌಂದರ್ಯೀಕರಣಕ್ಕೆ ಶಾಸಕ ಭೂಸನೂರ ಚಾಲನೆ

Must Read

- Advertisement -

ಸಿಂದಗಿ: ಪಟ್ಟಣದ ಸೌಂದರ್ಯೀಕರಣ ಮಾಡದೇ ಬರೀ ಹಳ್ಳಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂಬ ಅಪವಾದವನ್ನು ತಳ್ಳಿ ಹಾಕುವ ನಿಟ್ಟಿನಲ್ಲಿ ಈ ಅವಧಿಯಲ್ಲಿ ಹೆಚ್ಚಿನ ಒತ್ತನ್ನು ನಗರ ಪ್ರದೇಶಕ್ಕೆ ನೀಡಿ  ನಗರವನ್ನು ಸೌಂದರ್ಯೀಕರಣ ಮಾಡಲು ಮುಂದಾಗಿದ್ದೇನೆ ನಂತರ ಸುತ್ತಮುತ್ತಲಿನ ರಸ್ತೆಗಳ ಕಾಮಗಾರಿಗಳನ್ನು ಮಂಜೂರು ಮಾಡಿದ್ದೇನೆ ಎಂದು ಶಾಸಕ ರಮೇಶ ಭೂಸನೂರ ಅಭಿಮತ ವ್ಯಕ್ತ ಪಡಿಸಿದರು.

ಪಟ್ಟಣದ ಹಳೆಯ ಬಜಾರನಲ್ಲಿ ನಗಾರಾಭಿವೃದ್ದಿಕೋಶ ಎಸ್‍ಎಫ್‍ಸಿ ವಿಶೇಷ ಅನುದಾನದಡಿ ಹಮ್ಮಿಕೊಂಡಿದ್ದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಈ ತಾಲೂಕಿನ ಹೆಸರನ್ನು ಇಡೀ ಜಗತ್ತಿಗೆ ಪರಿಚಯಿಸಿದ ನಟಸಾರ್ವಭೌಮ ಹಂದಿಗನೂರ ಸಿದ್ರಾಮಪ್ಪನವರನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸುಮಾರು ರೂ 1 ಕೋಟಿ ವೆಚ್ಚದಲ್ಲಿ ರಂಗಮಂದಿರ ನಿರ್ಮಾಣವಾಗುತ್ತಲಿದೆ.

ಇದರಿಂದ ಸಾಂಸ್ಕೃತಿಕ ಕಾರ್ಯಗಳಿಗೆ ಸಹಾಯಕವಾಗಲಿವೆ ಅಲ್ಲದೆ ಎಲ್ಲ ಶಿಕ್ಷಕ ಸಮುದಾಯದ ಬಹುದಿನಗಳ ಬೇಡಿಕೆಯಂತೆ ಶಿಕ್ಷಕರ ಭವನ ( ಗುರುಭವನ) ನಿರ್ಮಾಣ ಮಾಡಲಾಗುತ್ತಿದೆ ಎಂದರು.    

- Advertisement -

ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ ಮಾತನಾಡಿ, ಪಟ್ಟಣದ ಜನರ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆಗಳಿಲ್ಲ ಎಂಬ ಕೊರಗನ್ನು ಶಮನಗೊಳಿಸಲು ಶಾಸಕರು ನಗರದ ಸೌಂದರ್ಯೀಕರಣ ಮಾಡುವಲ್ಲಿ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಅವರ ಈ ಕಾರ್ಯಕ್ಕೆ ಪುರಸಭೆಯ ಎಲ್ಲ ಸದಸ್ಯರು ಸಾಥ್ ನೀಡುತ್ತಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದರು

ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ ಮಾತನಾಡಿ, ಅಭಿವೃದ್ದಿಯ ಹಿತದೃಷ್ಟಿಯಲ್ಲಿಟ್ಟುಕೊಂಡು ಶಾಸಕ ರಮೇಶ ಭೂಸನೂರ ಅವರು ಅಭಿವೃಧ್ಧಿಗೆ ಮುಂದಾಗಿದ್ದು ಅವರಿಗೆ ಕ್ಷೇತ್ರದ ಜನತೆ ಮತ್ತೊಮ್ಮೆ ಆರ್ಶೀವಾದ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ  ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಅಶೋಕ ವಾರದ, ಸುಶಾಂತ ಪೂಜಾರಿ, ಪುರಸಭೆ ಸದಸ್ಯರಾದ ಮಾಂತಗೌಡ ಬಿರಾದಾರ, ಬಸವರಾಜ ಯರನಾಳ, ಶರಣಗೌಡ ಪಾಟೀಲ, ಭಾಷಾಸಾಬ ತಾಂಬೋಳಿ, ಗೊಲ್ಲಾಳ ಬಂಕಲಗಿ, ಮುಖಂಡರಾದ ಸೈಫನ್ ನಾಟೀಕಾರ, ಮಹಾಂತೇಶ ನಾಯ್ಕೋಡಿ, ವಿರೇಶ ದುರ್ಗಿ, ಅನೀಲ ಕಡಕೋಳ, ಶರಣಪ್ಪ ಸುಲ್ಪಿ,  ಮಲ್ಲು ಪೂಜಾರಿ, ಸುನಂದಾ ಯಂಪುರೆ, ನೀಲಮ್ಮ ಯಡ್ರಾಮಿ, ರಾಮು ಮೋರಟಗಿ, ಗಂಗಾಧರ ಚಿಕ್ಕಮಠ, ಗುತ್ತಿಗೆದಾರ ಯಲ್ಲು ಬಳುಂಡಗಿ ಸೇರಿದಂತೆ ಸ್ಥಳೀಯರು ಇದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಹೂಗಾರ ಮಾದಣ್ಣ ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಒಂದು ಕ್ರಾಂತಿಯ ಕಾಲ. ಅಪ್ಪ ಬಸಣ್ಣನವರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ರಂಗದಲ್ಲಿ ಪರಿವರ್ತನೆಯಾಯಿತು. ವ್ಯಕ್ತಿ ಹಾಗೂ ಸಮಾಜದ...
- Advertisement -

More Articles Like This

- Advertisement -
close
error: Content is protected !!
Join WhatsApp Group