ಶಾಸಕ ಪ್ರಭು ಚವ್ಹಾಣ ವಾಟ್ಸ್‌ಆ್ಯಪ್‌ಗೆ ಅಶ್ಲೀಲ ಫೋಟೊ, ವಿಡಿಯೊ ಕಳುಹಿಸಿ ಹಣದ ಬೇಡಿಕೆ 

Must Read

ಶಾಸಕ ಪ್ರಭು ಚವ್ಹಾಣ ವಾಟ್ಸ್‌ಆ್ಯಪ್‌ಗೆ ಅಶ್ಲೀಲ ಫೋಟೊ, ವಿಡಿಯೊ ಕಳುಹಿಸಿ ಹಣದ ಬೇಡಿಕೆ

ಬೀದರ – ಮಾಜಿ ಸಚಿವ, ಔರಾದ್‌ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವ್ಹಾಣ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್‌ಆ್ಯಪ್ ಸಂಖ್ಯೆಗೆ ಸಂದೇಶ ಕಳುಹಿಸಿ ₹30 ಸಾವಿರ ಹಣದ ಬೇಡಿಕೆ ಇಟ್ಟು, ಹಣ ಹಾಕದಿದ್ದರೆ ವಿಡಿಯೊ ಶೇರ್‌ ಮಾಡುವೆ ಎಂದು ಬೆದರಿಕೆ ಹಾಕಿದ ಘಟನೆ ನಡೆದಿದೆ.

ಈ ಕುರಿತು ಶಾಸಕ ಪ್ರಭು ಚವ್ಹಾಣ ಅವರ ಸಂಬಂಧಿ ಮುರುಳಿಧರ ಪವಾರ್‌ ಎಂಬುವವರು ನೀಡಿದ ದೂರಿನ ಮೇರೆಗೆ ಔರಾದ್ ತಾಲ್ಲೂಕಿನ ಹೊಕ್ರಣಾ ಪೊಲೀಸ್‌ ಠಾಣೆಯಲ್ಲಿ ಸೆ.8 ರಂದು ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಶಾಸಕ ಪ್ರಭು ಚವ್ಹಾಣ ಅವರ ವಾಟ್ಸ್‌ಆ್ಯಪ್ ಸಂಖ್ಯೆಗೆ ಅಪರಿಚಿತ ವ್ಯಕ್ತಿ ʼನನಗೆ ₹30 ಸಾವಿರ ಹಣ ಹಾಕಿ ಸಾಹೇಬ್ರೆ, ನನ್ನ ಮೇಲೆ ಭರವಸೆ ಇಟ್ಟು ಸಹಾಯ ಮಾಡಿ, ಹಣ ಹಾಕದಿದ್ದರೆ ಯೂಟ್ಯೂಬ್‌ನಲ್ಲಿ ವಿಡಿಯೊ ಶೇರ್‌ ಮಾಡುವೆʼ ಎಂದು ಸಂದೇಶ ಕಳುಹಿಸಿದ್ದರು. ಶಾಸಕರು ಅದನ್ನು ನೋಡಿ ಸುಮ್ಮನಾಗಿದ್ದರು.
ʼಸೆ.7ರಂದು ಸಂಜೆ ಎರಡು ಬಾರಿ ಬೇರೆ ಬೇರೆ ವಾಟ್ಸ್‌ಆ್ಯಪ್ ಸಂಖ್ಯೆಯಿಂದ ಶಾಸಕ ಪ್ರಭು ಚವ್ಹಾಣ ಹಾಗೂ ಪ್ರಿಯಾಂಕಾ ಗಾಂಧಿ ಅವರ ಭಾವಚಿತ್ರ ಮತ್ತು ಶಾಸಕರ ಭಾವಚಿತ್ರಕ್ಕೆ ತಂತ್ರಜ್ಞಾನ ಬಳಸಿ ಹುಡುಗಿಯೊಂದಿಗೆ ಇರುವ ಪಾಡ್‌ಕಾಸ್ಟ್‌ ಫೈಲ್‌ ವಿಡಿಯೊ ಮಾಡಿ ಶಾಸಕ ಪ್ರಭು ಚವ್ಹಾಣ ಅವರ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಶಾಸಕ ಪ್ರಭು ಚವ್ಹಾಣ ಅವರ ಹೆಸರು ಕೆಡಿಸುವ ಉದ್ದೇಶದಿಂದ ಅಪರಿಚಿತ ವ್ಯಕ್ತಿ ಬೇರೆ ಬೇರೆ ಮೂರು ವಾಟ್ಸ್‌ಆ್ಯಪ್‌ ಸಂಖ್ಯೆಗಳಿಂದ ವಿಡಿಯೊ ಹಾಗೂ ಸಂದೇಶ ಕಳುಹಿಸಿ ₹30 ಸಾವಿರ ಹಣದ ಬೇಡಿಕೆ ಇಟ್ಟು, ಕೊಡದಿದ್ದರೆ ವಿಡಿಯೊ ಶೇರ್‌ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ

ವರದಿ : ನಂದಕುಮಾರ ಕರಂಜೆ, ಬೀದರ

Latest News

ರೈತರು ಸಾವಯವ ಕೃಷಿ ಮಾಡಿ ಭೂಮಿಯ ಫಲವತ್ತತೆ ಕಾಯಬೇಕು – ಸಹದೇವ ಯರಗೊಪ್ಪ

ಮೂಡಲಗಿ: ’ರೈತರು ಸಾವಯವ ಮತ್ತು ನೈಸರ್ಗಿಕ ಕೃಷಿ ಮಾಡುವ ಮೂಲಕ ಭೂಮಿಯ ಫಲವತ್ತತೆಯನ್ನು ವೃದ್ಧಿಸುವ ಜೊತೆಗೆ ಸಮಾಜದ ಆರೋಗ್ಯವನ್ನು ಕಾಯುವುದು ಅವಶ್ಯವಿದೆ’ ಎಂದು ಚಿಕ್ಕೋಡಿ ಉಪ...

More Articles Like This

error: Content is protected !!
Join WhatsApp Group