ಸಿಂದಗಿ: ಬಿಜೆಪಿ ಪಕ್ಷವೇ ರಾಜ್ಯದ ಜನರ ನಿಜವಾದ ಭರವಸೆ ಬಿಜೆಪಿ ಬಿಟ್ಟರೆ ಬೇರಾವ ಪಕ್ಷವಿಲ್ಲವೆಂದು ಜನರಿಗೆ ಮನವರಿಕೆ ಮಾಡುತ್ತಿದ್ದೇನೆ ಎಂದು ಶಾಸಕರು ರಮೇಶ ಭೂಸನೂರ ಹೇಳಿದರು
ಪಟ್ಟಣದ 12 ನೇ ವಾರ್ಡನಲ್ಲಿ ಬಿಜೆಪಿ ಮನೆ ಮನೆ ಸಂಪರ್ಕ ಎರಡನೇ ದಿನದ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ ನಡ್ಡಾ ಅವರು ಜ. 21 ರಂದು ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿದಂತೆ ನಾವು ಇಂದು ನಗರದಲ್ಲಿ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಚಾಲನೆಯನ್ನು ನೀಡಿ ಮತಕ್ಷೇತ್ರದ ಸಾವಿರಾರು ಮನೆಗಳಿಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳ ಕರಪತ್ರ ಸ್ಟಿಕರ್ ಹಚ್ಚುವುದು ಪ್ರತಿ ಭೂತ್ ಗಳಲ್ಲಿ ಗೋಡೆ ಬರಹ ಸದಸ್ಟತ್ವ ಅಭಿಯಾನ ಮಾಡಲಾಗುತ್ತಿದೆ ಮತಕ್ಷೇತ್ರದ 271 ಭೂತಗಳಲ್ಲಿ ಬಿಜೆಪಿ ಪಕ್ಷದ ಸಾಧನೆ ಅಭಿವೃದ್ಧಿ ಕಾರ್ಯಗಳ ವಿವರಗಳನ್ನು ಪಕ್ಷದ ಸಾವಿರಾರು ಕಾರ್ಯಕರ್ತರು ಪಕ್ಷದ ಮುಖಂಡರು ಹಿರಿಯರು ಮನೆ ಮನೆ ಸಂಪರ್ಕ ಅಭಿಯಾನದಲ್ಲಿ ತೊಡಗಿ ಮನವರಿಕೆ ಮಾಡಲಾಗುತ್ತಿದೆ ಎಂದರು.
ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಈರಣ್ಣ ರಾವೂರ ಮಾತನಾಡಿ, ಪಟ್ಟಣದಲ್ಲಿ ರಸ್ತೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಜಲ ಧಾರೆ ಯೋಜನೆ ಕಾಮಗಾರಿಗಳಿಗಾಗಿ ವಿಶೇಷ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜಕುಮಾರ ಗೌಂಡಿ , ಶಿವಕುಮಾರ ಬಿರಾದಾರ, ಚಂದ್ರಶೇಖರ ಅಮಲಿಹಾಳ ಸಿದ್ದಲಿಂಗಯ್ಯ ಹಿರೆಮಠ, ಪ್ರಕಾಶ ನಂದಿಕೂಲ, ಶಿವು ಹಳೆಮನಿ ಶಿವರಾಜ ಗಿರಿಗೌಡರ, ಶಿಲ್ಪಾ ಕುದರಗೊಂಡ, ಅನ್ನಪೂರ್ಣಾ ಹೊಟಗಾರ, ಸುನಂದಾ ಯಂಪುರೆ, ಅನುಸುಯ ಪರಗೂಂಡ ಬಿಜೆಪಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.