ಸಿಂದಗಿ; ಕ್ಷೇತ್ರದ ಕೆಲವು ಗ್ರಾಮಗಳಿಗೆ ಬಸ್ಸುಗಳ ಸಂಚಾರವಿಲ್ಲದೆ ಶಾಲಾ ಮಕ್ಕಳಿಗೆ ಶೈಕ್ಷಣಿಕವಾಗಿ ಹಿನ್ನಡೆಯಗುತ್ತಿರುವುದನ್ನು ಗಮನಿಸಿ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಬಸ್ಸಿನ ಸೌಕರ್ಯ ಹಾಗೂ ಅವುಗಳ ಸಂಚಾರಕ್ಕೆ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ವಿಜಯಪುರ ಪಂ.ರಾ.ಇA ಉಪವಿಬಾಗ ಸನ್ ೨೦೨೩-೨೪ ನೇ ಸಾಲಿನ ಮುಖ್ಯಮಂತ್ರಿಗಳ ರೂ. ೫೦ ಲಕ್ಷದ ವಿಶೇಷ ಅನುದಾನದಲ್ಲಿ ಸಂಗೊಳ್ಳಿ ರಾಯಣ್ಣ ಸರ್ಕಲ್ ದಿಂದ ಬೋರಗಿ ರಸ್ತೆ ವರೆಗೆ ಸಿಸಿ ರಸ್ತೆ ಕಾಮಗಾರಿಯ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇದೆ ಸಂದರ್ಭದಲ್ಲಿ .ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಪ್ರಥಮ ದರ್ಜೆ ಗುತ್ತಗೆದಾರ ಸತೀಶ ಬಿರಾದಾರ. ಭೀಮನಗೌಡ ಬಿರಾದಾರ. ಚನ್ನು ಹೊಡ್ಲ ಗ್ರಾಮ ಪಂಚಾಯತ್ ಅಧ್ಯಕ್ಷರ ಪ್ರತಿನಿದಿ ಬಸವರಾಜ ಹರನಾಳ ಹಾಗೂ ಗ್ರಾಮ ಪಂಚಾಯತ್ ಸದ್ಯಸರಾದ ಶಂಕರಯ್ಯ ಹಿರೇಮಠ್. ಇರಫನ್ ಮುಲ್ಲಾ. ಅನ್ನುಗೌಡರ ಪಾಟೀಲ. ಎಸ್.ಕೆ.ಪೂಜಾರಿ (ವಕೀಲರು). ಶಂಕರ ಗೋಣಿ.ನಿಂಗು ಮೂಲಿಮನಿ. ಜಹಾಂಗೀರ ಮುಜಾವರ.ನಿಂಗು ಪ್ರಭುಗೋಳ.ಸಿದ್ದು ಜಾಲವಾದಿ. ಜಟ್ಟೆಪ್ಪ ಹರನಾಳ. ನಮ್ಮ ಪಕ್ಷದ ಮುಖಂಡರು, ಹಿರಿಯರು ಕಾರ್ಯಕರ್ತರು ಉಪಸ್ಥಿತರಿದ್ದರು..