ಅಣಕವಾಡು : ಕಾಮನಬಿಲ್ಲು

Must Read

  ಕಾಮನಬಿಲ್ಲು

ಮದುವೆ ಹಂದರದಾಗ ಮದುಮಗನಾದಾಗ
ಏಟೊಂದು ಖುಷಿ ಇತ್ತ !
ಏಟೊಂದು ಖುಷಿ ಇತ್ತ ಏನೊಂದು ಖುಷಿ ಇತ್ತ
ಏನೆಂಥ ಖುಷಿ ಇತ್ತ !!
ಖುಷಿಯಿಂದ ಹೇಳು ತಮ್ಮ ಆ ಖುಷಿ ಇತ್ತಿತ್ತ
ಹೋಗೇತಿ ಎತ್ತೆತ್ತ ?

ಕಣ್ಣಾಗ ಮಿಣುಕೇನ ಮಾರ್ಯಾಗ ಬೆಳಕೇನ
ಮಾತ್ನ್ಯಾಗ ಖಡಕೇನ !
ಭಾರಿ ರುಮಾಲೇನ ಬಣ್ಣ ಬಾಸಿಂಗೇನ
ಜರತಾರಿ ದೋತ್ರೇನ !

ನಿಂತಲ್ಲಿ ನಿಲ್ಲಲಿಲ್ಲ ಕುಂತಲ್ಲಿ ಕೂಡಲಿಲ್ಲ
ಜಿಂಕ್ಹಾಂಗ ಜಿಗಿದೆಲ್ಲಾ !
ಕಡಗದ ಕೈಯಾಕಿ ಕೈಹಿಡಿದು ಬಂದಾಗ
ಭೂಮ್ಯಾಗ ಇರಲಿಲ್ಲಾ !

ಬಾಳೀನ ಬವಣೆಯ ಸಾವಿರದಲೆಗಳು
ಮಾರಿಗೆ ಬಡಿದಾಗ
ಸೊರಸೊರಗಿ ಸಣ್ಣಾದಿ ಬಡತನದ ಭೂತವು
ಬೆನ್ನತ್ತಿ ಬಂದಾಗ !

ಸರಸೀರೆ ತರದಾಗ ಮೂದಲಿಸಿ ನುಡಿದಾಗ
ಚಿಂತ್ಯಾಗ ಸೋತೇನ ?
ಕಾಮನಬಿಲ್ಲಿನ ಬಣ್ಣಕ ಮಳ್ಳಾಗಿ
ಹಿಡಿಯಾಕ ಹೋದೇನ ?

ಹಂಗಾಮು ಬಂದಾಗ ಹ್ಯಾಂಗಿತ್ತು ನಿನಚಿತ್ತ
ನವಿಲ್ಹಾಂಗ ಕುಣಿತಿತ್ತ ?
ಸುಟ್ಟ ಗೆಣಸಿನ್ಹಾಂಗ ಸಪ್ಪಗ ನಿನಮಾರಿ
ಕಾಂಬುದು ಈ ಹೊತ್ತ ?

ಋಷಿಯಿಂದ ಹೇಳು ತಮ್ಮ ಆ ಖುಷಿ ಇತ್ತಿತ್ತ
ಹೋಗೇತಿ ಎತ್ತೆತ್ತ ?
ಮದುವೆ ಹಂದರದಾಗ ಮದುಮಗನಾದಾಗ
ಏಟೊಂದು ಖುಷಿ ಇತ್ತ !
ಏಟೊಂದು ಖುಷಿ ಇತ್ತ ಏನೊಂದು ಖುಷಿ ಇತ್ತ
ಏನೆಂಥ ಖುಷಿ ಇತ್ತ !!

ಎನ್.ಶರಣಪ್ಪ ಮೆಟ್ರಿ

(ದ.ರಾ. ಬೇಂದ್ರೆ ಕವನ
ಹಳ್ಳದ ದಂಡ್ಯಾಗ‌ಮೊದಲಿಗೆ ಕಂಡಾಗ ಧಾಟಿಯಲ್ಲಿ)

Latest News

ಕುಳಲಿಯಲ್ಲಿ ರಾಜ್ಯಮಟ್ಟದ ಸಂಗೀತೋತ್ಸವ

ಸಾಧಕ ಕಲಾವಿದರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮುಧೋಳ - ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ರಾಜ್ಯಮಟ್ಟದ...

More Articles Like This

error: Content is protected !!
Join WhatsApp Group