ಅಧಿಕಾರದ ಏಳು ವರ್ಷಗಳು ಪೂರೈಸಿದ ನಂತರವೂ ಪ್ರಧಾನಿ ನರೇಂದ್ರ ಮೋದಿಯವರು ಇನ್ನೂ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದು ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ಈ ವಿಷಯ ಬಹಿರಂಗಪಡಿಸಿದೆ.
ಕೊರೋನಾ ಎರಡನೆ ಅಲೆಯ ಹೊಡೆತಕ್ಕೆ ನಜ್ಜುಗುಜ್ಜಾದ ದೇಶವನ್ನು ಮುನ್ನಡೆಸುವಲ್ಲಿ ಮೋದಿಯವರ ಆಡಳಿತಕ್ಕೆ ಶೇಕಡಾ ೬೩ ರಷ್ಟು ಉತ್ತಮ ಅಭಿಪ್ರಾಯ ವ್ಯಕ್ತಗೊಂಡಿದ್ದು ಒಂದು ವೇಳೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಪ್ರಧಾನಿಯಾಗಿದ್ದರೆ ಕೊರೋನಾ ವನ್ನು ನಿರ್ವಹಣೆ ಮಾಡುವಲ್ಲಿ ಅವರ ಯಶಸ್ಸನ್ನು ಕೇವಲ ೨೨ ಶೇಕಡಾ ಜನರು ಮೆಚ್ಚಿಕೊಂಡಿದ್ದಾರೆ.
ಕೊರೋನಾ ನಿರ್ವಹಣೆಯ ಜೊತೆಗೆ ವಿದೇಶಗಳ ಜೊತೆಗೆ ಮಿತೃತ್ವ, ರಾಮ ಮಂದಿರ ನಿರ್ಮಾಣ, ಕಲಂ ೩೭೦ ರದ್ದು, ನೋಟು ಅಮಾನ್ಯೀಕರಣ, ತ್ರಿವಳಿ ತಲಾಖ್ ರದ್ದು ಇವೇ ಮುಂತಾದ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ ನಂತರ ಮೋದಿಯವರ ಜನಪ್ರಿಯತೆ ಇನ್ನೂ ಹೆಚ್ಚಾಗಿದೆ.
ರೈತರ ಆದಾಯ ಹೆಚ್ಚಳ ಕುರಿತು ಮೋದಿ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು ಕೇವಲ ಮೂರು ರಾಜ್ಯಗಳ ರೈತರಷ್ಟೇ ಕೃಷಿ ಕಾಯ್ದೆ ವಿರೋಧಿಸುತ್ತಿರುವುದರ ಬಗ್ಗೆ ಟೀಕೆಗಳು ವ್ಯಕ್ತಗೊಂಡಿವೆ.
ಒಟ್ಟಾರೆಯಾಗಿ ಏಳು ವರ್ಷಗಳ ಆಡಳಿತದಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದರೂ ಮೋದಿಯವರು ತಮ್ಮ ಜನಪ್ರಿಯತೆಯನ್ನು ಇನ್ನೂ ಉಳಿಸಿಕೊಂಡಿದ್ದು ಸಾಬೀತಾದಂತಾಗಿದೆ.