spot_img
spot_img

ಮೋದಿ ಜನ ಮನದ ಹೃದಯ ಸಾಮ್ರಾಟ- ಸಂಸದ ಈರಣ್ಣ ಕಡಾಡಿ

Must Read

- Advertisement -

ಮೂಡಲಗಿ: ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ದೇಶದಲ್ಲಿ ಉಚಿತ ಲಸಿಕಾ ಅಭಿಯಾನವನ್ನು ಯಶಸ್ಸಿನ ಉತ್ತುಂಗಕ್ಕೆ ಒಯುತ್ತಿರುವ ಮತ್ತು 71ನೇ ವಸಂತಕ್ಕೆ ಕಾಲಿಡುತ್ತಿರುವ ಯಶಸ್ವಿ ಪ್ರಧಾನಿ, ವಿಶ್ವಮಾನ್ಯ ನಾಯಕ ನರೇಂದ್ರ ಮೋದಿ ದೇಶದ ಜನತೆಯ ಮನಸ್ಸು ಗೆದ್ದ, ಜನ ಮನದ ಹೃದಯ ಸಾಮ್ರಾಟರಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಶುಕ್ರವಾರ ಸೆ.17 ರಂದು ಕಲ್ಲೋಳಿ, ನಾಗನೂರ, ತುಕ್ಕಾನಟ್ಟಿ ಹೀಗೆ ಹಲವು ಗ್ರಾಮಗಳ ಆರೋಗ್ಯ ಕೇಂದ್ರಗಳಲ್ಲಿ ಏರ್ಪಡಿಸಿದ ಉಚಿತ ಲಸಿಕಾ ಅಭಿಯಾನ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಈರಣ್ಣ ಕಡಾಡಿ ಅವರು ಕಳೆದ ಎರಡು ವರ್ಷಗಳ ಸತತ ಪರಿಶ್ರಮದಿಂದ ಕರೋನಾ ವಿರುದ್ದ ಹೋರಾಟದಲ್ಲಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ. ಯುದ್ದೋಪಾದಿಯಲ್ಲಿ ದೇಶದ ಜನರಿಗೆ ಕರೋನಾ ಲಸಿಕೆಗಳ ವಿತರಣೆಯಲ್ಲಿ ಯಶಸ್ವಿಯಾಗುವ ಮೂಲಕ ಒಂದು ಐತಿಹಾಸಿಕ ದಾಖಲೆ ಗೈದಿದ್ದಾರೆ.. ಇದುವರೆಗೆ 75 ಕೋಟಿಗೂ ಅಧಿಕ ಡೋಸ್ ಲಸಿಕೆ ವಿತರಿಸುವ ಮೂಲಕ ಜಗತ್ತಿನಲ್ಲಿಯೇ ಅತಿ ಹೆಚ್ಚು ಡೋಸ್ ಲಸಿಕೆ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.

ಮೋದಿ ಅವರ ಕರೆಗೆ ಓಗೊಟ್ಟ ಜನತೆ ಕೂಡ ಲಸಿಕಾ ಅಭಿಯಾನ ಯಶಸ್ವಿಯಾಗಲು ಕೈ ಜೋಡಿಸಿದ್ದಾರೆ. ಶತ ಪ್ರತಿಶತ ಈ ಯೋಜನೆ ಮುಗಿಯುವವರೆಗೂ ನಾವೆಲ್ಲರೂ ಅವರಿಗೆ ಸಹಕರಿಸಬೇಕಾಗಿದ್ದು ಅತಿ ಅವಶ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

- Advertisement -

ಈ ಸಂದರ್ಭದಲ್ಲಿ ಶ್ರೀಶೈಲ ತುಪ್ಪದ, ಮಹಾದೇವ ಮದಭಾವಿ, ಈರಣ್ಣ ಮುನ್ನೋಳಿಮಠ, ಸುರೇಶ ಮಠಪತಿ, ಬಾಳೇಶ ಸಕ್ರೇಪ್ಪಗೋಳ, ದುಂಡಪ್ಪ ನಂದಗಾವಿ, ಪರಸಪ್ಪ ಬಬಲಿ, ಭೀಮಶೆಪ್ಪ ಹೊಸಮನಿ, ಪುಂಡಲೀಕ ಅರಭಾವಿ, ಡಾ,ವಸಂತ ನಾಯಕವಾಡಿ, ಕುಮಾರ ಮರ್ದಿ, ಅಡಿವೆಪ್ಪ ಕುರಬೇಟ, ವೈದ್ಯಾಧಿಕಾರಿ ವಿಜಯಲಕ್ಷ್ಮೀ ಸೇರಿದಂತೆ ಪಕ್ಷದ ಕಾರ್ಯಕರ್ತರು, ಅಂಗವಾಡಿ, ಆಶಾ, ಆರೋಗ್ಯ ಸಹಾಯಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group