spot_img
spot_img

ಬೆಳಗಾವಿಗೆ ಮೋದಿ ಬರಲಿದ್ದಾರೆ; ಈ ವಿಷಯಗಳನ್ನು ತಿಳಿದುಕೊಳ್ಳಿ

Must Read

spot_img
- Advertisement -

ಬೆಳಗಾವಿ: ನಾಳೆ (ಫೆಬ್ರುವರಿ 27)ರಂದು ಬೆಳಗಾವಿ –  ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿಗೆ ಆಗಮಿಸುವ  ಈ ಹಿನ್ನೆಲೆಯಲ್ಲಿ ನಗರದ  ಬಿ.ಎಸ್ ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಬೃಹತ್ ವೇದಿಕೆ ಸಿದ್ದವಾಗಿದ್ದು  ಕೃಷಿ ಇಲಾಖೆ ವೇದಿಕೆಯ ಮುಂಭಾಗವನ್ನು ಸಿರಿಧಾನ್ಯಗಳಿಂದ (Millet) ಸಿಂಗಾರ ಮಾಡಲಾಗಿದ್ದು ವಿಶೇಷವಾಗಿದೆ.

ಇತ್ತೀಚೆಗೆ ಮೋದಿಯವರು ಕರ್ನಾಟಕದ ಸಿರಿಧಾನ್ಯಗಳ  ಬಗ್ಗೆ ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸಿದ್ದರು. ಸಿರಿಧಾನ್ಯಗಳಿಂದ ಪಿಎಂ ಕಿಸಾನ್, ಜಿ 20, ಅಂತಾರಾಷ್ಟ್ರೀಯ ಮಟ್ಟದ ಮಿಲೇಟ್ಸ್ ವರ್ಷದ ಚಿತ್ರಣ, ಸಿರಿ ಧಾನ್ಯದಲ್ಲಿ ಮೂರು ಲೋಗೋಗಳನ್ನು ಬಿಡಿಸಲಾಗಿದೆ. ನಿನ್ನೆ (ಫೆ.26) ನವದೆಹಲಿಯಲ್ಲಿ ನಡೆದ ಬಾರಿಸು ಕನ್ನಡ ಡಿಂಡಿವ ಕಾರ್ಯಕ್ರಮದಲ್ಲೂ ಮೋದಿಯವರು ರಾಜ್ಯದ ಸಿರಿಧಾನ್ಯದ ಬಗ್ಗೆ ಪ್ರಸ್ತಾಪಿಸಿದ್ದರು.

ಶ್ರೀಸಾಮಾನ್ಯರಿಂದ ಮೋದಿಗೆ ಸ್ವಾಗತ:

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿವಮೊಗ್ಗದಿಂದ ಹೊರಟು, ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ನಾಗರಿಕರು ಮೋದಿಯವರನ್ನು ಸ್ವಾಗತಿಸಲಿದ್ದಾರೆ. ನೇಕಾರ ಕಲ್ಲಪ್ಪ ಟೋಪಗಿ, ಪೌರ ಕಾರ್ಮಿಕ ಮಹಿಳೆ ಮೀನಾಕ್ಷಿ, ರೈತ ಕಾರ್ಮಿಕ ಮಹಿಳೆ ಶೀಲಾ ಖನ್ನುಕರ್, ಆಟೋ ಚಾಲಕ ಮಯೂರ ಚೌಹಾಣ್, ಕಟ್ಟಡ ಕಾರ್ಮಿಕ ಮಂಗೇಶ್ ಇವರೆಲ್ಲ ಮೋದಿಯವರನ್ನು ಬರಮಾಡಿಕೊಳ್ಳಲಿದ್ದಾರೆ. ಇವರು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಆಯ್ಕೆಯಾಗಿದ್ದು, ಈಗಾಗಲೇ ಅಧಿಕಾರಿಗಳು ಐವರಿಗೆ ಕೊವಿಡ್ ಟೆಸ್ಟ್ ಮಾಡಿದ್ದಾರೆ.

- Advertisement -

ಬೆಳಗಾವಿಯ ಯಡಿಯೂರಪ್ಪ ರಸ್ತೆ ಬಳಿ ಬೃಹತ್ ಪೆಂಡಾಲ್ ಹಾಕಿದ್ದು, ವೇದಿಕೆ ಸಿದ್ದವಾಗಿದೆ. ಸುಮಾರು 2 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೆ 15 ಎಲ್‌ಇಡಿ ಸ್ಕ್ರೀನ್​ಗಳನ್ನು ಅಳವಡಿಸಲಾಗಿದೆ. 50 ಎಕರೆ ಪ್ರದೇಶದಲ್ಲಿ 3 ಕಡೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಸಮಾವೇಶಕ್ಕೆ ಬರುವ ಜನರಿಗೆ 1,500ಕ್ಕೂ ಹೆಚ್ಚು ಬಸ್​​ಗಳ​​ ವ್ಯವಸ್ಥೆ ಮಾಡಲಾಗಿದೆ.

ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್​ ಶೋ ನಡೆಸಲಿದ್ದಾರೆ. ಈ ಸಂಬಂಧ ಭರ್ಜರಿ ತಯಾರಿಯಾಗಿದ್ದು, ರಸ್ತೆ ಉದ್ದಕ್ಕೂ ಕೇಸರಿ ಬಾವುಟಗಳು ರಾರಾಜಿಸುತ್ತಿವೆ. 2 ಲಕ್ಷ ಜ‌ನ ರೋಡ್ ಶೋ ದಲ್ಲಿ ಭಾಗಿಯಾಗಲಿದ್ದಾರೆ. ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಧಾನಿ ನೀಡಿದ ಕೊಡುಗೆಗಳ ಕ್ಯಾನ್ವಾಸ್ ನಡೆಯಲಿದೆ. ಆಯಾ ರಾಜ್ಯದ ಜನರಿಂದಲೇ ಆ ರಾಜ್ಯದ ವೇಷಭೂಷಣ, ಸಂಸ್ಕೃತಿ ಅನಾವರಣವಾಗಲಿದೆ. ಮಹಾನ್ ಪುರುಷರ ಲೈವ್ ಪ್ರದರ್ಶನ ನಡೆಯುತ್ತದೆ. 10 ಸಾವಿರ ಹೆಣ್ಣು ಮಕ್ಕಳು ತಲೆ ಮೇಲೆ ಕುಂಭ ಹೊತ್ತು ನಿಲ್ಲಲಿದ್ದಾರೆ. 90 ಕಡೆಗಳಲ್ಲಿ ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ಲೈವ್ ಪ್ರದರ್ಶನ ನಡೆಯಲಿದೆ ಎಂದು ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.

ಮೋದಿ ರೋಡ್​ ಶೋ ನಡೆಯಲಿರುವ ಮಾರ್ಗ:

ಮಧ್ಯಾಹ್ನ 2.45ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕ ನಗರದ ಕೆಎಸ್‌ಆರ್‌ಪಿ ಮೈದಾನಕ್ಕೆ ಬರಲಿದ್ದು ಅಲ್ಲಿಂದ ವೈ ಜಂಕ್ಷನ್ ಮಾರ್ಗವಾಗಿ ಚನ್ನಮ್ಮ ವೃತ್ತಕ್ಕೆ ತೆರಳಲಿದ್ದಾರೆ. ಚನ್ನಮ್ಮ ವೃತ್ತದಿಂದ 10 ಕಿಮೀ ರೋಡ್ ಶೋ ನಡೆಯಲಿದೆ. ಕಾಲೇಜು ಮಾರ್ಗವಾಗಿ ಸಂಭಾಜಿ ವೃತ್ತ, ಕಿರ್ಲೋಸ್ಕರ್ ರಸ್ತೆ, ಶನಿ ಮಂದಿರ, ಕಪಿಲೇಶ್ವರ ದೇವಸ್ಥಾನ ರಸ್ತೆ, ಶಿವಾಜಿ ಗಾರ್ಡನ್, ಓಲ್ಡ್ ಪಿಬಿ ರೋಡ್, ಯಡಿಯೂರಪ್ಪ ಮಾರ್ಗವಾಗಿ ರೋಡ್ ಶೋ ಮಾಲಿನಿ ಸಿಟಿ ತಲುಪಲಿದೆ.

ಬೆಳಗಾವಿಯ ಹಲವು ಕಡೆ ಮಾರ್ಗ ಬದಲಾವಣೆ:

- Advertisement -

ಪೊಲೀಸ್ ಇಲಾಖೆ, ನಗರದ ಸಂಚಾರದಲ್ಲಿ ಹಲವು ಬದಲಾವಣೆ ಮಾಡಿದ್ದಾರೆ. ನಿಪ್ಪಾಣಿಯಿಂದ ಖಾನಾಪುರ ಹಾಗೂ ಗೋವಾಕ್ಕೆ ತೆರಳುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಬಾಕ್ಸೈಟ್ ರಸ್ತೆ, ಹಿಂಡಲಗಾ ಗಣಪತಿ ದೇವಸ್ಥಾನ, ಶೌರ್ಯ ಸರ್ಕಲ್ ಮೂಲಕ ಕಾಂಗ್ರೆಸ್ ರಸ್ತೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಶಹಾಪುರ ಕಡೆಯಿಂದ ಬರುವ ವಾಹನಗಳು ಇದೇ ಮಾರ್ಗವಾಗಿ ನಿಪ್ಪಾಣಿ ಕಡೆಗೆ ತೆರಳಬೇಕು.

ಈ ರಸ್ತೆಗಳಲ್ಲಿ ಸಂಚಾರ ನಿಷೇಧ:

ಸಂಚಾರಿ ಪೊಲೀಸರು ನಗರದ ಹಲವು ಮಾರ್ಗದಲ್ಲಿ ಸಂಚಾರಕ್ಕೆ ನಿಷೇಧ ವಿಧಿಸಿದ್ದಾರೆ. ಸೋಮವಾರ ಬೆಳಗ್ಗೆ 8ರಿಂದ ಸಂಜೆ 8 ಗಂಟೆಯ ವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಶನಿ ಮಂದಿರ, ಎಸ್‌ಬಿಎಂ ರಸ್ತೆ, ಓಲ್ಡ್ ಪಿಬಿ ರೋಡ್, ಯಡಿಯೂರಪ್ಪ ಮಾರ್ಗದಲ್ಲಿ ಸಂಚಾರ ನಿಷೇಧಿಸಲಾಗಿದೆ.

ಪ್ರಧಾನಿಗಳ ಕಾರ್ಯಕ್ರಮಕ್ಕೆ ಮೂರು ವಸ್ತುಗಳ ತರೋದು ನಿಷಿದ್ಧ. ಭದ್ರತೆಯ ದೃಷ್ಟಿಯಿಂದ ಕೈಚೀಲ, ನೀರಿನ ಬಾಟಲಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಪ್ರಧಾನಿ ಕಾರ್ಯಕ್ರಮಕ್ಕೆ ತರುವಂತಿಲ್ಲ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಹತ್ವದ ಆದೇಶ ಹೊರಡಿಸಿದ್ದಾರೆ.

- Advertisement -
- Advertisement -

Latest News

ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ

ಬೆಳಗಾವಿ - ತಾಲೂಕಿನ ಹೊಸ ಇದ್ದಲಹೊಂಡ ಶಿವಾಪೂರ ಸರಕಾರಿ ಪ್ರೌಢ ಶಾಲೆಯ ವರ್ಗಾವಣೆಗೊಂಡ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆ ಶ್ರೀಮತಿ ಜಿ ಬಿ ಸುಗತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group