ಮುಂಗಾರು ಬೆಳೆ ಸಮೀಕ್ಷೆ ಯೋಜನೆ ; ‘ನನ್ನ ಬೆಳೆ ನನ್ನ ಹಕ್ಕು’ ರೈತರಿಗೆ ಅನುಕೂಲಕರ – ಆನಂದ ಮಾಮನಿ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಸವದತ್ತಿ: 2021-22 ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಯೋಜನೆ ಉತ್ತಮ ಯೋಜನೆಯಾಗಿದೆ. ನಮ್ಮ ಸರಕಾರ ರೈತರ ಮನೆ ಬಾಗಿಲಿಗೆ ತಲುಪಿಸುವಂಥ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿ ಮಾಡಿದೆ. ರೈತರಿಗಾಗಿ ತೆರೆದ ಮುಂಗಾರು ಬೇಳೆ ಸಮೀಕ್ಷೆ ಮೊಬೈಲ್ ಆ್ಯಪ್ ಉತ್ತಮ ಯೋಜನೆಯಾಗಿದೆ ಇದು ರಾಜ್ಯಾದ್ಯಂತ ಪ್ರಾರಂಭವಾಗಿದೆ. ಇದರಲ್ಲಿ ನನ್ನ ಬೆಳೆ ನನ್ನ ಹಕ್ಕು ಇದರಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದಂದತಹ ಬೆಳೆಗಳನ್ನ ಬೆಳೆದ ಮಾಹಿತಿಯನ್ನು ಛಾಯಾ ಚಿತ್ರದ ಸಮೇತವಾಗಿ ಮೋಬೈಲ್ ಮುಖಾಂತರ ಅಪಲೋಡ್ ಮಾಡಿ ಸರಕಾರದಿಂದ ಸಿಗತಕ್ಕ ಯೋಜನೆಗಳನ್ನು ನೋಡಿ ತಾವೂ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯ ಸದುಪಯೋಗವನ್ನು ರೈತರು ಮಾಡಿಕೊಳ್ಳಬೇಕು ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿಯವರು ಮಾತನಾಡಿದರು

ಅವರು ಸಹಾಯಕ ಕೃಷಿ ನಿದೇಶಕರ ಕಛೇರಿಯ ಮುಂಬಾಗದಲ್ಲಿ “ನನ್ನ ಬೆಳೆ ನನ್ನ ಹಕ್ಕು” ಸಮಗ್ರ ಕೃಷಿ ಅಭಿಯಾನದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

- Advertisement -

ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರಿಗಾಗಿ ಈ ವಿನೂತನ ಯೋಜನೆಯನ್ನು ತೆರೆದಿವೆ. ಈ ವಿನೂತನ ಯೋಜನೆಯ ಮಾಹಿತಿಯನ್ನು ಗ್ರಾಮ ಮತ್ತು ಹಳ್ಳಿಗಳಲ್ಲಿನ ರೈತರಿಗೂ ತಿಳಿಸುವ ಕೆಲಸವನ್ನು ಕೃಷಿ ಇಲಾಖೆ ಮಾಡುತ್ತಿದೆ. ಈಗಾಗಲೇ ಮುಂಗಾರು ಮಳೆ ಪ್ರಾರಂಭವಾಗಿದ್ದು ಒಳ್ಳೆ ಬೆಳೆಗಳು ಇವೆ ಆ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಲ್ಲಿ ಸರಕಾರ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಸಹಾಯ ಮಾಡುತ್ತಿದೆ. ರೈತರಿಗೆ ವೇಳೆಗೆ ಸರಿಯಾಗಿ ಬೀಜ ಗೊಬ್ಬರಗಳನ್ನು ಕೊಡಿಸುವಂಥ ಕೆಲಸವನ್ನು ತಾಲೂಕಾ ಆಡಳಿತ ಮತ್ತು ಕೃಷಿ ಇಲಾಖೆ ಮಾಡುತ್ತಿದೆ. ರೈತ ಸೇವಾ ಕೇಂದ್ರಗಳಿಂದಲೂ ಬೀಜ ಗೊಬ್ಬರ ಮತ್ತು ಕೃಷಿ ಪರಿಕರಗಳನ್ನ ರೈತರಿಗೆ ಕೊಡಿಸತಕ್ಕಂತಹ ಕೆಲಸವನ್ನು ಮಾಡುತ್ತಿದ್ದೇವೆ. ಸರಕಾರದ ಆದೇಶ ಬಂದ ನಂತರ ರೈತರಿಗೆ ಸಬ್ಸಿಡಿಯಲ್ಲಿ ಟ್ರ್ಯಾಕ್ಟರ, ನೇಗಿಲು, ಮೇವು ಕಟಾವು ಯಂತ್ರ ಮತ್ತು ಕೃಷಿ ಪರಿಕರಗಳನ್ನು ನೀಡಲಾಗುತ್ತದೆ. ಕೊರೋನಾ ಸಂಕಷ್ಟ ಇರುವುದರಿಂದ ಆರ್ಥಿಕವಾಗಿ ಹೊರೆ ಇರುವುದರಿಂದ ಕೆಲವೇ ದಿನಗಳಲ್ಲಿ ಹೊಸ ಆದೇಶ ಬಂದ ನಂತರ ರೈತರಿಗೆ ಪ್ರತೀ ವರ್ಷದಂತೆ ಬರುವ ಪಿವಿಸಿ ಪೈಪ ಡ್ರಿಪ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಶಾಂತ ಬಿ ಪಾಟೀಲ. ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯಶ್ವಂತಕುಮಾರ. ಸಹಾಯಕ ಕೃಷಿ ನಿರ್ದೇಶಕರಾದ ಕೆ ಎನ್ ಮಹಾರಡ್ಡಿ. ರೈತ ಮುಖಂಡರಾದ ಬಸವರಾಜ ಕಾರದಗಿ. ನಿಂಗಪ್ಪ ಮೀಸಿ. ಬಸವರಾಜ ಕಪ್ಪಣ್ಣವರ.ಪುರಸಭೆ ಉಪಾಧ್ಯಕ್ಷ ದೀಪಕ ಜಾನ್ವೇಕರ. ಧರೆಪ್ಪ ಮಡ್ಲಿ.ಪಶು ಇಲಾಖೆಯ ಎಮ್ ಎಮ್ ಮರಲಿಂಗನವರ. ಮತ್ತು ಕೃಷಿ ಇಲಾಖೆಯ ಬಸವರಾಜ ಬಿರುಕಲ್. ಕೃಷಿ ವಿಶ್ವವಿದ್ಯಾಲಯದ ಡಾ ಮಹಾಬಲೇಶ್ವರ ಹೆಗಡೆ.ಯಮನಪ್ಪ ಮಾದಿಗರ.ಸಿ ಜೆ ಬಂಗೆಣ್ಣವರ. ಆರ ಎಸ್ ಜಂಬಗಿ. ಎಸ್ ಎಲ್ ದೇಸಾಯಿ. ತೋಟಗಾರಿಕೆ ಇಲಾಖೆಯ ಬಸವರಾಜ ಮಾದರ. ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!