ಸವದತ್ತಿ – ಶರಣ ಸಂಗಮ ಮಾಸಿಕ ಹುಣ್ಣಿಮೆಯ ಪೂರ್ವಭಾವಿ ಸಭೆಯು ಪಟ್ಟಣದ ಕವಲಪೇಟ ಓಣಿಯ ಬಸವರಾಜ ಕಪ್ಪಣ್ಣವರ ನಿವಾಸದಲ್ಲಿ ಶನಿವಾರ ಸಂಜೆ ಜರುಗಿತು ಸಭೆಯಲ್ಲಿ ರಾಷ್ಟ್ರೀಯ ಬಸವದಳದ ಸಂಚಾಲಕ ಬಸನಗೌಡಾ ಪಾಟೀಲ ಮಾತನಾಡಿ, “ಶರಣ ಸಂಗಮ ಮಾಸಿಕ ಹುಣ್ಣಿಮೆ ಕಾರ್ಯಕ್ರಮವನ್ನು ನಾವೆಲ್ಲರೂ ಸೇರಿ ಯಶಸ್ವಿಯಾಗಿ ಆಚರಿಸಿಕೊಂಡು ಹೋಗೋಣ ಶರಣರು ಶರಣೆಯರಿಗಾಗಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಸ್ಥಳೀಯರೆಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸೋಣ ಬರುವ ಮಂಗಳವಾರ 30.3.2021 ರಂದು ಗಿರಿಜಣ್ಣವರ ಓಣಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮಾಸಿಕ ಹುಣ್ಣಿಮೆಯ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದು ತಿಳಿಸಿದರು.
ಸೇರಿದ ಸಭಿಕರೆಲ್ಲರೂ ಮಂಗಳವಾರ ಜರುಗಿಸಲು ಒಪ್ಪಿಗೆ ನೀಡಿದರು. ಈ ಸಭೆಯಲ್ಲಿ ಅಶೋಕ ವಿ ವಾಲಿ.ಪಕ್ಕಿರಪ್ಪ ಗಂಗಪ್ಪನವರ ಜಯಣ್ಣ ಮಾಳಗಿ, ನಿಂಗಪ್ಪ ಮೀಶಿ, ಬಸವರಾಜ ಕಪ್ಪಣ್ಣವರ, ಬಸವರಾಜಪುಟ್ಟಿ, ಮುಂಗರವಾಡಿ, ಬಸವರಾಜ ಪಟ್ಟೇದ.ಮಂಜುನಾಥ ಉಳ್ಳೀಗೇರಿ ಬಿ ಆರ್ ಪಾಟೀಲ.ಸೋಮಲಿಂಗ ತುರಾಯಿ, ನಾಗಪ್ಪ ಬೆಂಡಿಗೇರಿ, ಗಂಗಪ್ಪ ತೋಟಗೇರ, ಶಂಕರ ಶಿ ಹಿಟ್ನಳ್ಳಿ, ಗಣಪತಿ ಸೋಗಿ, ಕರೆಪ್ಪ ತೋರಗಲ್ಲ, ಮೊದಲಾದವರು ಉಪಸ್ಥಿತರಿದ್ದರು