spot_img
spot_img

ಕಪ್ಪತ್ತಗುಡ್ಡದಲ್ಲಿ ಮಾಸಿಕ ಚಾರಣ ಸಂಭ್ರಮ

Must Read

- Advertisement -

ಗದಗ – ದಿನಾಂಕ 11/8/2024, ಅಗಷ್ಟ ತಿಂಗಳ ಎರಡನೇ ರವಿವಾರದಂದು ಕಪ್ಪತಗುಡ್ಡದಲ್ಲಿ “ಮಾಸಿಕ ಚಾರಣ ಸಂಭ್ರಮ ಹಾಗೂ ಸಸ್ಯಾನುಭಾವ” ಆಯೋಜಿಸಲಾಗಿದೆ.
(ಪ್ರತಿ ತಿಂಗಳ ಎರಡನೇ ರವಿವಾರಗಳಂದು)

ಚಾರಣ ಸಂಭ್ರಮ ಆರಂಭಗೊಳ್ಳುವ ಸ್ಥಳ:”ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠ” ಡೋಣಿ, ಗದಗ ಜಿಲ್ಲೆ.

ಚಾರಣ ಪ್ರಿಯರು ಮತ್ತು ಸಸ್ಯ ಪ್ರಬೇಧಗಳ ಅಧ್ಯಯನ ನಡೆಸಲು ಕ್ಷೇತ್ರಭೇಟಿ ನೀಡಬಯಸುವ ಸಂಶೋಧನಾಕಾರರಿಗೆ, ಅಧ್ಯಾಪಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಆಯುರ್ವೇದ ಹಾಗೂ ಪಾರಂಪರಿಕ ವೈದ್ಯರಿಗೆ, ಹಾಗೂ ಆಸಕ್ತ ಸಾರ್ವಜನಿಕರಿಗೆ ಸುವರ್ಣಾವಕಾಶ.

- Advertisement -

ನಿಯಮಿತವಾಗಿ ಪ್ರತಿ ತಿಂಗಳ ಎರಡನೇ ರವಿವಾರದಂದು, ಗದಗ ಜಿಲ್ಲೆಯ ಡಂಬಳ ಹೋಬಳಿಯ ಡೋಣಿ ಸಮೀಪದ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠದ ಆವರಣದಿಂದ ಪ್ರತಿ ತಿಂಗಳ ಎರಡನೇ ರವಿವಾರದಂದು “ಮಾಸಿಕ ಚಾರಣ ಸಂಭ್ರಮ ಹಾಗೂ ಸಸ್ಯಾನುಭಾವ” (ಸಸ್ಯ ಪ್ರಬೇಧಗಳ ಅಧ್ಯಯನ) ಕಾರ್ಯಕ್ರಮವನ್ನು ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಆಯೋಜಿಸಲಾಗುತ್ತದೆ.

* ಬೆಳಿಗ್ಗೆ 9-30ಕ್ಕೆ ಉಪಹಾರ, ಕಷಾಯ.                              * 10-00 ಘಂಟೆಗೆ ಸ್ವಾಗತ, ಪರಿಚಯ, ಕಾರ್ಯಕ್ರಮ ಕುರಿತು ವಿವರಣೆ, ಭಾಗವಹಿಸಲಿರುವ ಚಾರಣಿಗರು ಅನುಸರಿಸಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ವಿವರಣೆ, * ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಂದ ಜೀವ ವೈವಿಧ್ಯದ ತಾಣ ಕಪ್ಪತಗುಡ್ಡದ ಹಿರಿಮೆ ಕುರಿತು ಮಾಹಿತಿ ಹಾಗೂ ಸಸ್ಯಾನುಭಾವದಲ್ಲಿ ಪೂಜ್ಯರ ಆಶೀರ್ವಚನ,            * 10-45 ಕ್ಕೆ ಚಾರಣ ಪ್ರಾರಂಭ: ನಂದಿವೇರಿ ಸಂಸ್ಥಾನ ಮಠದ ಸಮೀಪದ ಬಂಗಾರದ ಕೊಳ್ಳ ಹಾಗೂ ಬಂಗಾರ ಹಳ್ಳಕ್ಕೆ ಭೇಟಿ.                                            *ಆಸುಪಾಸಿನಲ್ಲಿ ಕಾನನದ ಹಸಿರು ವೃಕ್ಷಗಳ ಮಧ್ಯದಿಂದ ಸೂಸುವ ಚೈತನ್ಯಕಾರಕ ಶುದ್ಧ ಗಾಳಿ ಸೇವನೆಮಾಡುವುದೇ ಆಪ್ಯಾಯಮಾನ ಅನುಭವ

* ಸಸ್ಯಾನುಭಾವದಿಂದ ಪ್ರಕೃತಿಯೊಂದಿಗೆ ಭಾವಬಂಧ ಬೆಸೆಯುವ ಅಪರೂಪದ ಕ್ಷಣ
* ಶಾರೀರಿಕ ಮತ್ತು ಮಾನಸಿಕ ವಿಕಸನಕ್ಕೆ ಸೋಪಾನ
* ಅಪರೂಪದ ಸಸ್ಯಗಳ ವೀಕ್ಷಣೆ,
* ಚಾರಣದ ಮಧ್ಯ ವಿಶ್ರಾಂತಿ ಕ್ಷಣಗಳಲ್ಲಿ ಸಸ್ಯ ಸಂರಕ್ಷಣೆ ಕುರಿತು ಸಂವಾದ
* ಬೀಜಾಂಕುರ ಹಾಗೂ ಸಸಿ ನೆಡಲು ಪ್ರೇರಣೆ
* ಮಧ್ಯಾಹ್ನ ಎರಡು ಘಂಟೆಗೆ ಪ್ರಸಾದ
* ಮೂರು ಘಂಟೆಗೆ ಜರುಗುವ ಸಮಾರೋಪದಲ್ಲಿ ಚಾರಣಾನುಭವದ ವಿನಿಮಯ ಹಾಗೂ ಸಸ್ಯ ಸಂರಕ್ಷಣೆ ಸಂಕಲ್ಪ
* ನಾಲ್ಕು ಘಂಟೆಗೆ ಮರು ಪ್ರಯಾಣ

- Advertisement -

ಭಾಗವಹಿಸಲು ನೋಂದಣಿ ಕಡ್ಡಾಯ. ನೋಂದಣಿಗಾಗಿ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಬಂದು ಹೋಗಲು ತಮ್ಮ ಸ್ವಂತ ವಾಹನದ ವ್ಯವಸ್ಥೆ ಮಾಡಿಕೊಳ್ಳುವುದು. ಟಿಪ್ಪಣಿಗಳನ್ನು ಬರೆದುಕೊಳ್ಳಲು ನೋಟಬುಕ್ ಮತ್ತು ಪೆನ್ನು ತರಲು ಕೋರಿದೆ. ಕೊಡೆಗಳು ಜೊತೆಯಲ್ಲಿದ್ದರೆ ಉತ್ತಮ ನಾಲ್ಕು ಘಂಟೆಗೆ ಮರು ಪ್ರಯಾಣ ಬೆಳೆಸುವುದು ಕಡ್ಡಾಯ ಪ್ಲ್ಯಾಸ್ಟಿಕ್ ಬಳಕೆ ನಿಷೇಧಿಸಿದೆ. ಸಸ್ಯಗಳನ್ನು ಕೀಳಬಾರದು ಸಸ್ಯಗಳನ್ನು ಕಣ್ತುಂಬಿಸಿಕೊಂಡು ಆನಂದಿಸಬಹುದು. ಮುಂದಿನ ದಿನಗಳಲ್ಲಿ ನರ್ಸರಿ ಪ್ರಾರಂಭಿಸಿ ಸಸಿಗಳನ್ನು ಪೂರೈಸುವ ಗುರಿಹೊಂದಲಾಗಿದೆ.

ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಣಿಗಾಗಿ ಶ್ರೀ ಭಾಲಚಂದ್ರ ಜಾಬಶೆಟ್ಟಿಯವರನ್ನು ಮೋಬೈಲ್ ಸಂಖ್ಯೆ 9741888365 ನ್ನು ಸಂಪರ್ಕಿಸಲು ಕೋರಿದೆ.

ಕೆಲವೇ ಜನರಿಗೆ ಅವಕಾಶವಿರುವುದರಿಂದ ಮುಂಗಡ ನೋಂದಣಿ ಕಡ್ಡಾಯ. ನೋಂದಣಿ ಮಾಡದವರಿಗೆ ಅವಕಾಶವಿರುವದಿಲ್ಲ. ವ್ಯಾಟ್ಸಪ್ ಸಂದೇಶದ ಮೂಲಕ ಭಾಗವಹಿಸಲಿಚ್ಚಿಸುವ ಎಲ್ಲಾ ಸದಸ್ಯರ:
1. ಹೆಸರು
2. ಗ್ರಾಮ
3. ವೃತ್ತಿ
4. ಮೋಬೈಲ್ ಸಂಖ್ಯೆ
5. ಆಧಾರ ಕಾರ್ಡ

ಮುಂತಾದ ವಿವರಗಳನ್ನು ಕಡ್ಡಾಯವಾಗಿ ಕಳುಹಿಸಲು ಕೋರಲಾಗಿದೆ.

ಪ್ರಕೃತಿಯೊಂದಿಗೆ ಭಾವಬಂಧ ಬೆಸೆದು ನೆಮ್ಮದಿಯ ಕ್ಷಣಗಳನ್ನು ಕಳೆಯಲು ದಯವಿಟ್ಟು ಬನ್ನಿ, ಭಾಗವಹಿಸಿ,
ಕೂಡಲೆ ಹೆಸರು ನೋಂದಾಯಿಸಿ ತಮ್ಮ ಸ್ಥಾನ ಕಾಯ್ದಿರಿಸಿಕೊಳ್ಳಿ.

ಕೆಳಗೆ ಕಾಣಿಸಿದ ಪ್ರತ್ಯೇಕ ಸಂದೇಶದಲ್ಲಿರುವ ಗೂಗಲ್ ಲೋಕೇಶನ ಅನುಸರಿಸಿ ಗಮ್ಯ ಸ್ಥಾನವಾದ ಡೋಣಿ ಸಮೀಪದ ಶ್ರೀ ನಂದಿವೇರಿ ಸಂಸ್ಥಾನ ಮಠದ ಆವರಣವನ್ನು ಬೆಳಿಗ್ಗೆ 10-00 ಘಂಟೆಯೊಳಗಾಗಿ ತಲುಪಿ ಚಾರಣ ಸಂಭ್ರಮದ ಸಂಪೂರ್ಣ ರಸಾನುಭವ ಪಡೆಯಿರಿ

ಬಾಲಚಂದ್ರ ಜಾಬಶೆಟ್ಟಿ
9741888365

- Advertisement -
- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group