spot_img
spot_img

5 ನೇಯ ದ್ವಿತೀಯ ರವಿವಾರದ ಮಾಸಿಕ ಕಪ್ಪತಗುಡ್ಡದ ಚಾರಣ ಯಶಸ್ವಿ

Must Read

spot_img
- Advertisement -

ಪ್ರತಿ ತಿಂಗಳ ಎರಡನೇ ಭಾನುವಾರರಂದು ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನಮಠದ ಪರವಾಗಿ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಭಾಲಚಂದ್ರ ಜಾಬಶೆಟ್ಟಿಯವರ ಉಸ್ತುವಾರಿಯಲ್ಲಿ ದಿನಾಂಕ: 13/10/2024 ರಂದು ಯಶಸ್ವಿಯಾಗಿ ಜರುಗಿತು.

ನೂರಕ್ಕೂ ಹೆಚ್ಚು ಚಾರಣಿಗರು ಅತೀ ಉತ್ಸಾದಿಂದ ಭಾಗವಹಿಸಿದ್ದರು.

ಧಾರವಾಡದ ‘ಪರಿಸರಕ್ಕಾಗಿ ನಾವು’, ಪ್ರತಿಷ್ಠಿತ ವಿದ್ಯಾ ವರ್ಧಕ ಸಂಘದ ಪದಾಧಿಕಾರಿಗಳು, ವಿಶ್ವವಿದ್ಯಾಲಯಗಳ ಅಧ್ಯಾಪಕರು, ವಿದ್ಯಾರ್ಥಿಗಳು, ನ್ಯಾಯವಾದಿಗಳು, ವೈದ್ಯರು, ಚಿಣ್ಣರು, ಪರಿಸರ ಪ್ರೇಮಿಗಳು, ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರದ ಶಿಕ್ಷಕ ಬಳಗ, ಕಲಘಟಗಿಯ ಸಾವಯವ ಕೃಷಿಕರು, ರಾಣೇಬೆನ್ನೂರು, ಬೆಂಗಳೂರು, ಅರಸೀಕೆರೆ, ಗೋಕಾಕ, ವಿಜಯನಗರ ಜಿಲ್ಲೆ, ಸೊಂಡೂರು, ಶಿವಮೊಗ್ಗಾ, ಬೆಳಗಾವಿ ಇನ್ನೂ ಅನೇಕ ಸ್ಥಳಗಳಿಂದ ಹತ್ತು ವರ್ಷದ ಮಕ್ಕಳನ್ನು ಹಿಡಿದು ಎಪ್ಪತ್ತೈದು ವರ್ಷ ವಯಸ್ಸಿನ ಹಿರಿಯ ಚಾರಣಿಗರು ಆಗಮಿಸಿ ಕಪ್ಪತಗುಡ್ಡದ ಮಡಿಲಿನಲ್ಲಿ ವಿಹರಿಸಿ ನವ ಚೇತನ ಪಡೆದರು, ಹಾಡಿದರು, ಕುಣಿದು ಕುಪ್ಪಳಿಸಿದರು, ತಮ್ಮಲ್ಲಿರುವ ಅದಮ್ಯ ಚೇತನಕ್ಕೊಂದು ಹೊಸ ಭಾಷ್ಯ ಬರೆದರು.

- Advertisement -

ವಿವಿಧ ಸಸ್ಯಗಳ ವಿವರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿದರು, ಪ್ರಕೃತಿಯ ಸೌಂದರ್ಯ, ಹಕ್ಕಿಗಳ ಕಲರವ, ಜುಳು ಜುಳು ಹರಿವ ತೊರೆಯ ನೀರಿನ ಮಂಜುಳ ನಿನಾದ, ಮಾನವ ಕ್ಷಣಾರ್ಧದಲ್ಲಿ ಮೈಮರೆತು ಪ್ರಕೃತಿಯೊಂದಿಗೆ ಬೆಸೆದುಕೊಳ್ಳುವ ಆ ಭಾವಬಂಧ ಬೆಸೆದುಕೊಳ್ಳುವ ಅವಿಸ್ಮರಣೀಯ ಕ್ಷಣಗಳನ್ನು ಇಲ್ಲಿಗೆ ಬಂದು ಆಸ್ವಾದಿಸಬೇಕೆ ವಿನಃ ಅಕ್ಷರಗಳಲ್ಲಿ ಹಿಡಿದಿಡುವುದು ಅಸಾಧ್ಯ.

ನಾಲ್ಕೈದು ಕಿಲೋಮೀಟರಗಳಷ್ಟು ಚಾರಣ, ನಿಸರ್ಗ ಬಿಡಿಸಿದ ಚಿತ್ರ ವಿಚಿತ್ರವಾದ ಬಣ್ಣಗಳಿಂದ ಕಂಗೊಳಿಸುತ್ತಿರುವ ಪುಷ್ಪಗಳ ಸೌಂದರ್ಯ, ಮಧುರ ಸುವಾಸನೆ ಸ್ವರ್ಗದ ಬಾಗಿಲಿಗೇರಿದ ಕಲ್ಪನೆ ಮರೆಯಲಾಗದ ಅನುಭವ.

ಹೊಸ ಲೋಕದಲ್ಲಿ ವಿಹರಿಸುತ್ತಿರುವಾಗ ಕಾಲುಗಳಿಗೆ ದಣಿವಾಗಿದ್ದ ಸಂದೇಶವನ್ನು ಮಿದುಳಿಗೆ ತಲುಪಿಸುವುದನ್ನು ಇಡೀ ಶರೀರದ ನರಮಂಡಲವೇ ಮರೆತಿದ್ದರಿಂದ ದಣಿವೆಂಬುದು ಅರಿವಿಗೆ ಬಾರದಂತಿತ್ತು.

- Advertisement -

ನಂದಿಮುಖಿ ಬಂಗಾರ ತೀರ್ಥ ತಲುಪಿದಾಗ ಮಟ ಮಟ ಮಧ್ಯಾಹ್ನ ದಾಟಿ ಘಂಟೆ ಎರಡೂವರೆಯಾಗಿತ್ತು. ಬಂಗಾರ ತೀರ್ಥದ ಪ್ರೋಕ್ಷಣೆ ಹಾಗೂ ಸೇವನೆಯಿಂದ ಕ್ಷಣಾರ್ಧದಲ್ಲಿ ಮಾಯವಾಗಿತ್ತಲ್ಲದೇ ಭವಬಂಧದ ಜಂಜಾಟದಲ್ಲಿ ತೊಡಗಿಕೊಂಡಿದ್ದ ಮೈಮನಸ್ಸುಗಳು ಪ್ರಫುಲ್ಲತೆಯಿಂದ ಕಂಗೊಳಿಸತೊಡಗಿದ್ದುದು ಜೀವನದುದ್ದಕ್ಕೂ ಮರೆಯಲಾಗದ ಘಟನೆ.

ಕಪ್ಪತಗುಡ್ಡದ ಸಂರಕ್ಷಣೆಗಾಗಿ ಕಂಕಣಬದ್ಧರಾಗುವ ಸಂಕಲ್ಪ ಮಾಡುವುರೊಂದಿಗೆ, ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಆಶೀರ್ವಚನದಿಂದ ಪುಳಕಿತಗೊಂಡ ಮನಸ್ಸು ಹೊತ್ತಕೊಂಡು ಊರಿಗೆ ಮರುಪ್ರಯಾಣ ಬೆಳೆಸುವುದರೊಂದಿಗೆ ಕಪ್ಪತಗುಡ್ಡದ ಚಾರಣ ಪ್ರಹಸನಕ್ಕೆ ಮಂಗಳ ಹಾಡಲಾಯಿತು

ಭಾಗವಹಿಸಿದ ಪ್ರಮುಖರು:
ಬೆಳಗಾವಿ ಜಿಲ್ಲೆಯ ಅಣ್ಣಾ ಹಜಾರೆಯೆಂದೇ ಗುರುತಿಸಲ್ಪಡುವ ಗೌರವ ಡಾಕ್ಟರೇಟ್ ಭಾಜನರಾಗಿರುವ ಜಲಸಂರಕ್ಷಕ ವಾರ್ಷಿಕ ಕನಿಷ್ಠ 5,000 ಗಿಡ ಮರಗಳನ್ನು ನೆಡುತ್ತಿರುವ ಡಾ. ಶಿವಾಜಿ ಕಾಗ್ಣೇಕರ, ಕಟ್ಟಣಭಾವಿ, ಭಾಲಚಂದ್ರ ಜಾಬಶೆಟ್ಟಿ, ರುದ್ರಣ್ಣ ಗುಳಗುಳಿ, ದೇವರಡ್ಡಿ ಅಗಸನಕೊಪ್ಪ, ಶಾರದಾ ಗೋಪಾಲ, ಶಂಕರ ಕುಂಬಿ, ಶಂಕರ ಹಲಗತ್ತಿ, ಡಾ. ಶಿವಾನಂದ ಶೆಟ್ಟರ, ಡಾ. ಸಂಜೀವ ಕುಲಕರ್ಣಿ, ಡಾ. ಆರ್.ಜಿ.ತಿಮ್ಮಾಪೂರ, ಸರಸ್ವತಿ ಪೂಜಾರ, ಡಾ. ಪೂರ್ಣಿಮಾ ಗೌರೋಜಿ, ಅಶೋಕ ಗೌರೋಜಿ, ಅಸ್ಲಾಮ ಜಹಾ ಅಬ್ಬಿಗೇರಿ, ಲಿನೆಟ್ ಡಿಸಿಲ್ವಾ, ಡಾ. ರವಿ ಕಂಕನವಾಡಿ, ಡಾ. ವಿದ್ಯಾ ಹಾಲಹರವಿ, ಡಾ. ಕಮತೆ, ಶಾಂತಲಾ ಪಾಟೀಲ, ಅಕ್ಕಮಹಾದೇವಿ, ಡಾ. ಬಾಬು ಮೋಟಗಿ, ಮೇಘರಾಜ್, ಪರಶುರಾಮ್, ಮುಂತಾದವರು ಭಾಗವಹಿಸಿದ್ದರು,

ಭಾಲಚಂದ್ರ ಜಾಬಶೆಟ್ಟಿ
9741888365

- Advertisement -
- Advertisement -

Latest News

ಶ್ರೀನಿವಾಸ ಶಾಲೆಯ ಆಡಳಿತ ಮಂಡಳಿ ಬದಲಾಗುವುದಿಲ್ಲ – ಅಧ್ಯಕ್ಷ ರಂಗಣ್ಣ ಸೋನವಾಲಕರ

ಮೂಡಲಗಿ - ಶ್ರೀನಿವಾಸ ಶಾಲೆಯನ್ನು ಬೇರೆಯವರಿಗೆ ಮಾರುತ್ತಿದ್ದಾರೆ, ಆಡಳಿತ ಮಂಡಳಿ ಬದಲಾಗುತ್ತದೆ ಎಂಬ ವದಂತಿ ಹರಡಿದ್ದು ಅದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ಶ್ರೀನಿವಾಸ ಸ್ಕೂಲ್ಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group