spot_img
spot_img

ನ.1ರಿಂದ ಮೂಡಲಗಿ ಪ್ರೇಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ

Must Read

- Advertisement -

 

ಮೂಡಲಗಿ: ಮೂಡಲಗಿ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಮಾರ್ನಿಂಗ್ ಸ್ಟಾರ್ ಕ್ರಿಕೆಟರ್ಸ್ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಆರು ತಂಡಗಳಿಂದ ಮೂಡಲಗಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ನ.1 ರಿಂದ 5ರವರೆಗೆ ಐದು ದಿನಗಳ ಕಾಲ ಮೂಡಲಗಿ ಶಿಕ್ಷಣ ಸಂಸ್ಥೆಯ ಕ್ರೀಡಾ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ಸದಸ್ಯ  ಬಾಲಶೇಖರ ಬಂದಿ ತಿಳಿಸಿದರು.

ಶನಿವಾರದಂದು ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಪಂದ್ಯಾವಳಿಯ ಪ್ರಚಾರ ಪ್ರತಿಗಳನ್ನು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಮೂಡಲಗಿ ಪ್ರೀಮಿಯರ್ ಲೀಗ್ (ಎಂಪಿಎಲ್-2023) ಪಂದ್ಯಾವಳಿಯ ವಿಜೇತರಿಗೆ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಅವರಿಂದ ಪ್ರಥಮ ಬಹುಮಾನ 51 ಸಾವಿರ ಮತ್ತು ಒಂದು ಟ್ರೋಪಿ ವೀರಣ್ಣ ಸೋನವಾಲಕರ ಮತ್ತು ಮಾರುತಿ ಶಾಬನವರ ಅವರಿಂದ, ಮೂಡಲಗಿ ಬಸವೇಶ್ವರ ಬ್ಯಾಂಕಿನ ಉಪಾಧ್ಯಕ್ಷ ಗಿರೀಶ ಢವಳೇಶ್ವರ ಮತ್ತು ನಿರ್ದೇಶಕ ಮಲ್ಲು ಢವಳೇಶ್ವರ ಅವರಿಂದ ಟ್ರೋಪಿ ಮತ್ತು ರೂ.30 ಸಾವಿರ ದ್ವಿತೀಯ ಬಹುಮಾನ,  ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ರವೀಂದ್ರ ಸಣ್ಣಕ್ಕಿ ಅವರಿಂದ ಟ್ರೋಪಿ ಮತ್ತು ರೂ. 20 ಸಾವಿರ ತೃತೀಯ ಬಹುಮಾನ ನೀಡಲಾಗುವುದು ಎಂದರು. 

- Advertisement -

ಲಯನ್ಸ್ ಕ್ಲಬ್ ಪರಿವಾರದ ಸದಸ್ಯ ಮತ್ತು ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ ಮತನಾಡಿ  ಗ್ರಾಮೀಣ ಭಾಗದಲ್ಲಿ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸ ಅವರ ಪ್ರತಿಭೆಗೆ ಸಹಾಯವಾಗಲಿ ಎಂದು  ಮೂಡಲಗಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ, ಕ್ರೀಡಾಪಟಗಳನು ಪ್ರೋತ್ಸಹಿಸಲು ಪ್ರತಿ ಪಂದ್ಯಕ್ಕೆ ಉತ್ತಮ ಬ್ಯಾಟ್ಸ್ಮನಗೆ ಟ್ರೋಪಿ ನೀಡಲಾಗುವುದು, ಸರಣಿ ಪುರಷೋತ್ತಮನಿಗೆ ಸೈಕ್ ಕೋಡುಗೆ, ಅತಿ ಹೆಚ್ಚು ರನ್ ಪಡೆದ ಮತ್ತು ವಿಕೆಟ್ ಪಡೆದ ವ್ಯಕ್ತಿಗೆ ಒಂದೊಂದು ಎಲ್.ಇ.ಡಿ ಟಿವ್ಹಿ ಕೊಡುಗೆ ನೀಡಲಾಗುವುದು ಎಂದರು.

ಈ ಪಂದ್ಯಾವಳಿಯಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ತಂಡ, ಮೂಡಲಗಿ ರಾಯಲ್ಸ್ ತಂಡ, ಮೂಡಲಗಿ ಸ್ಟ್ರೈಕ್ರ್ಸ್ ತಂಡ, ಮೂಡಲಗಿ ರಾಯಲ್ ಚಾಲೆಂಜ್, ಮೂಡಲಗಿ ಅಡ್ವೋಕೆಟ್ ಸ್ಟಾರ್ಸ್, ನೈಸ್ಸ್ ಗೈ ಮೂಡಲಗಿ ಬೂಲ್ಡೋಜರ್ಸ್ ತಂಡಗಳು ಭಾಗವಹಿಸಲ್ಲಿವೆ ಎಂದರು. 

ಈ ಸಮಯದಲ್ಲಿ ಶಿವಾನಂದ ಗಾಡವಿ, ಸಂಜಯ ಮೋಕಾಶಿ, ಪುಲಕೇಶ ಸೋನವಾಲಕರ, ಮಲ್ಲಪ್ಪ ಕುರುಬಗಟ್ಟಿ, ಪ್ರವೀಣ ಕುರಬಗಟ್ಟಿ, ಗಿರೀಶ ಮೇತ್ರಿ, ಪ್ರಶಾಂತ ನಿಡಗುಂದಿ, ರವಿ ಪತ್ತಾರ, ಸುರೇಶ ಸಣ್ಣಕ್ಕಿ, ಮಹಮ್ಮದ ತುಂಬಗಿ, ಬಂಧು ತುಂಬಗಿ, ಸೋಮು ಮಠಪತಿ, ಶೇಖರಯ್ಯ ಹಿರೇಮಠ, ವಿನೋದ ಹೊಸಮನಿ, ಲಕ್ಕಪ್ಪ ತಳವಾರ ಇದ್ದರು.

- Advertisement -
- Advertisement -

Latest News

ಮೂಡಲಗಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ ; ಗಮನ ಸೆಳೆದ ಮಕ್ಕಾ ಮದೀನಾ ರೂಪಕಗಳು

ಮೂಡಲಗಿ: ಮಹಾನ್ ಮಾನವತಾವಾದಿ, ಮಹಾನ್ ಚಾರಿತ್ರ್ಯ ವಂತ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಬಿಟಿಟಿ ಕಮೀಟಿ ಆಯೋಜನೆಯಲ್ಲಿ ಪಟ್ಟಣದ ಸಮಸ್ತ ಮುಸ್ಲಿಂ ಬಾಂಧವರು...
- Advertisement -

More Articles Like This

- Advertisement -
close
error: Content is protected !!
Join WhatsApp Group