“ಯೋಗ ಎಂಬುದು ಭಾರತದಲ್ಲಿ ಹುಟ್ಟಿರುವ ಜಾಗತಿಕ ವಿದ್ಯೆಯಾಗಿದೆ ಯೋಗವು ಸುಮಾರು 6000 ಕ್ಕೂ ಹೆಚ್ಚು ಪ್ರಾಚೀನವಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ ಯೋಗದ ಆಚರಣೆಯು ವ್ಯಕ್ತಿಯನ್ನು ಸದಾ ಕಾಲ ಹರ್ಷದಿಂದ ಆನಂದದಿಂದ ಕಂಗೊಳಿಸುವುದು ಆದ್ದರಿಂದ ಎಲ್ಲರೂ ಯೋಗವನ್ನು ರೂಢಿಸಿಕೊಳ್ಳಿ” ಎಂದು ಬಿ.ಎಸ್ ಕೆಸರಗೊಪ್ಪ ತಿಳಿಸಿದರು.
ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. ಅಡಿಯಲ್ಲಿ ದೈಹಿಕ ಶಿಕ್ಷಣ ವಿಭಾಗ, ಎನ್.ಎಸ್.ಎಸ್, ಹಾಗೂ ಯುವ ರೆಡ್ ಕ್ರಾಸ್, ಹಾಗೂ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ವತಿಯಿಂದ ಹಮ್ಮಿಕೊಂಡ 8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, “ಯೋಗವು ವ್ಯಾಯಾಮ ಮಾತ್ರವಲ್ಲದೇ ನಮ್ಮ ಮಾನಸಿಕ ಸದೃಢತೆಗೆ ಸಹಾಯಕಾರಿಯಾಗಿದೆ ಇಡೀ ವಿಶ್ವವೇ ಇಂದು ಯೋಗಕ್ಕೆ ತಲೆಬಾಗಿದೆ. ನಮ್ಮ ದೇಶದ ಪ್ರಧಾನಮಂತ್ರಿ ಮೋದಿಜೀಯವರು ಕೂಡಾ ಇಂದು ಮೈಸೂರಿಗೆ ಆಗಮಿಸಿ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದು ಅದರ ಮಹತ್ವವನ್ನು ಜಗತ್ತಿಗೆ ತಿಳಿಸಿದ್ದಾರೆ. ಇವತ್ತಿನ ಒತ್ತಡದ ಬದುಕಿಗೆ ಪರಿಹಾರವೆಂದರೆ ಯೋಗವೊಂದೇ ಅದನ್ನು ಎಲ್ಲರೂ ಅಳವಡಿಸಿಕೊಳ್ಳೋಣ” ಎಂದು ಕರೆ ನೀಡಿದರು.
ಪ್ರಾಂಶುಪಾಲರಾದ ಶಾನೂರಕುಮಾರ ಗಾಣಿಗೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಸದೃಢವಾಧ ದೇಹದಲ್ಲಿ ಸದೃಢವಾದ ಮನಸು ನೆಲೆಸಿರಲು ಸಾಧ್ಯ ನಾವು ನೀವೆಲ್ಲ ಯೋಗವನ್ನು ನಮ್ಮ ದಿನನಿತ್ಯದ ಒಂದು ಭಾಗವಾಗಿ ಪರಿಗಣಿಸಿ ಕಾರ್ಯಗತಗೊಳಿಸೋಣ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರವಿ ಗಡದನ್ನವರ ಅವರು ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ಅವರ ಜೊತೆಗೆ ಆರ್.ಆಯ್. ಆಸಂಗಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಯೋಗಾಸನವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀಮತಿ ಅಶ್ವಿನಿ ಎಸ್. ಸಹಾಯಕ ಪ್ರಾಧ್ಯಾಪಕರುಗಳಾದ ಶ್ರೀಮತಿ ಶಿವಲೀಲಾ, ವೀಣಾ ಮೂಗನೂರ ಚೇತನರಾಜ್ ಬಿ, ಶಿವಾನಂದ ಚಂಡಕೆ, ಸಂಜೀವ ಮದರಖಂಡಿ, ಹನುಮಂತ ಕಾಂಬಳೆ, ಶ್ರೀಮತಿ ಶೀತಲ ತಳವಾರ, ಶಿವಕುಮಾರ, ಶ್ರೀಮತಿ ಗಾಯತ್ರಿ ಸಾಳೋಖೆ, ಅರುಣ ಕಡಾಡಿ, ವಸಂತ ನಾನಪ್ಪಗೋಳ ನಂದೀಶ ಕರಾಳೆ ಮುಂತಾದವರು ಭಾಗವಹಿಸಿದ್ದರು.
ಎನ್.ಬಿ.ಸಂಗ್ರೆಜಿಕೊಪ್ಪ ಸ್ವಾಗತಿಸಿದರು. ಹನುಮಂತ ಕಾಂಬಳೆ ನಿರೂಪಿಸಿದರು. ಸಂಜೀವಕುಮಾರ ಗಾಣಿಗೇರ ವಂದಿಸಿದರು.