ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೈತಿಕ ಶಿಕ್ಷಣವೇ ಮೂಲಾಧಾರ

Must Read

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...

ಮಲ್ಲಪ್ಪ ಕಂಕಣವಾಡಿ ಅವರಿಗೆ ಪಿಎಚ್‍ಡಿ

ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಕೆಂಚಪ್ಪ ಕಂಕಣವಾಡಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಡಾ: ಹೆಚ್.ಎಸ್.ಜಂಗೆ ಅವರ...

ಪೋಸ್ಟ್ ಕಾರ್ಡಗಳಲ್ಲಿ ಪ್ರಧಾನಿಗೆ ಶುಭಾಶಯ

ಸಿಂದಗಿ: ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶ್ವ ನಾಯಕ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಮೋದೀಜಿ...

If there is a child in your house then it is an opportunity for you become a child again.

ಪೋಷಕರೆಂದರೆ ಪೋಷಣೆ ಮಾಡುವವರು ಎಂದು. ಸಂಸಾರ, ಸಮಾಜ, ಪರಿಸರ, ಗ್ರಾಮ, ರಾಜ್ಯ,ದೇಶ,ವಿಶ್ವದ ಪೋಷಣೆ ಮನುಕುಲದಿಂದ ಆಗುವುದಕ್ಕೆ ಮುಖ್ಯವಾಗಿ ಮಾನವೀಯತೆಯುಳ್ಳ ಶಿಕ್ಷಣದ ಅಗತ್ಯವಿದೆ. ಮಾನವ ಆರನೆ ಅರಿವುಳ್ಳ ವಿಶೇಷ ಪ್ರಾಣಿಯೆನ್ನುವ ಸತ್ಯ ನಮಗೆ ತಿಳಿದಿದೆ. ಭಾರತೀಯ ಶಿಕ್ಷಣವು ಪುರಾಣ ಕಾಲದಿಂದಲೂ ಜ್ಞಾನಕ್ಕಾಗಿ ಸಂಶೋಧನೆ ನಡೆಸಿಕೊಂಡು ಮನುಕುಲದ ಒಳಿತಿಗಾಗಿ ತಮ್ಮನ್ನು ತಾವರಿತು ನಡೆಯಲು ಆಧ್ಯಾತ್ಮದ ದಾರಿಯಲ್ಲಿ ನಡೆದುಕೊಂಡು ಬಂದಿದೆ. ಕಾಲಬದಲಾದಂತೆ ಪಾಶ್ಚಾತ್ಯರ ಶಿಕ್ಷಣ,ಧರ್ಮ,ಸಂಸ್ಕೃತಿ, ಭಾಷೆಯ ಹಿಡಿತಕ್ಕೆ ಒಳಗಾದ ಭಾರತೀಯ ಶಿಕ್ಷಣವು ತನ್ನ ಮೂಲ ದಿಕ್ಕಿನಿಂದ ಹೊರಬಂದು ಭೌತಿಕದಲ್ಲಿ ಸಾಧನೆ ನಡೆಸಿದೆ.

ಆದರೆ, ಆಧ್ಯಾತ್ಮದ ಪ್ರಕಾರ ಶಿಕ್ಷಣ ಎಂದರೆ ಆತ್ಮಪರಿಶೀಲನೆ ಯಾಗಿತ್ತು. ಕೆಲವು ಅರ್ಧಸತ್ಯದ ವಿಚಾರ ಜನರ ಜೀವನವೆ ಅತಂತ್ರಸ್ಥಿತಿಗೆ ತಲುಪಿದಾಗ ಜೀವ ಉಳಿಸಿಕೊಳ್ಳಲು ಅಸತ್ಯ,ಅನ್ಯಾಯದ ಪರ ನಿಂತ ಪರಿಣಾಮವೆ ರಾಜಕೀಯದಲ್ಲಿ ಅಧರ್ಮ ಬೆಳೆಯಿತು.ಇಡೀ ದೇಶದ ಶಿಕ್ಷಣ ಒಂದೇ ಸಮನಾಗಿರಲು ಕಷ್ಟ.ಹಾಗಾಗಿ, ತಮ್ಮ ಇಷ್ಟಕ್ಕೆ ತಕ್ಕಂತೆ ಪಠ್ಯಪುಸ್ತಕದಲ್ಲಿ ವಿಚಾರಗಳನ್ನು ಅಳವಡಿಸುತ್ತಾ ದೇಶದ ಸ್ವಾತಂತ್ರ್ಯ ವನ್ನು ದುರ್ಭಳಕೆ ಮಾಡಿಕೊಂಡವರೂ ಹೆಚ್ಚಾದರು.

- Advertisement -

ಶಿಕ್ಷಣದಲ್ಲಿ ನೀಡಬೇಕಾಗಿದ್ದ ರಾಜಯೋಗದ ವಿಚಾರ ರಾಜಕೀಯಕ್ಕೆ ತಿರುಗಿ ಪ್ರಜಾಪ್ರಭುತ್ವದ ಪ್ರಜೆಗಳ ಸಾಮಾನ್ಯಜ್ಞಾನ ಹಿಂದುಳಿಯಿತು. ಈಗ ರಾಷ್ಟ್ರೀಯ ಶಿಕ್ಷಣ. ನೀತಿಯನ್ನು ಜಾರಿಗೆ ತರುವ‌ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತಿರುವುದು ಒಂದು ವಿಶೇಷವಾದ ಬೆಳವಣಿಗೆ. ಇದರಿಂದ ಶಿಕ್ಷಣ ಮಕ್ಕಳ ಆಂತರಿಕ ಜ್ಞಾನ ಬೆಳೆಯುತ್ತದೆ. ಮಾನವನ ಒಳಗಿರುವ ವಿಶೇಷವಾದ ಜ್ಞಾನವನ್ನು, ಪ್ರತಿಭೆಯನ್ನು, ಪ್ರಾರಂಭದಲ್ಲಿ ಪೋಷಕರು ಶಿಕ್ಷಕರು ಗಮನಿಸಿ ಅದಕ್ಕೆ ತಕ್ಕಂತೆ ಉನ್ನತವಾದ ವಿಚಾರದಿಂದ ಶಿಕ್ಷಣ ನೀಡಿದಾಗಲೇ ಬೆಳೆಯುವ ಪೈರಿಗೆ ಮೊಳಕೆಯಲ್ಲಿಯೇ ಸರಿಯಾದ ಪೋಷಣೆ,ಸಹಕಾರ ಸಹಾಯ ಸಿಗುತ್ತದೆ.

ಬೇರು ಸದೃಢವಾದಂತೆ ರೆಂಬೆಕೊಂಬೆಗಳೂ ಗಟ್ಟಿಯಾಗಿರುತ್ತದೆ.ಹೀಗಾಗಿ ಪೋಷಕರಾದವರು ತಮ್ಮ‌ಮಕ್ಕಳಲ್ಲಿ ಅಡಗಿರುವ‌ ವಿಶೇಷ ಆಸಕ್ತಿಯನ್ನು ಮೊದಲೇ ಗಮನಿಸಿ ಮನೆಯೊಳಗಿನಿಂದಲೇ ಪ್ರೋತ್ಸಾಹ ನೀಡುತ್ತಾ ಸರಿಯಾದ ಶಿಕ್ಷಣ ನೀಡಿದರೆ , ಸ್ವಾವಲಂಬನೆ ಸ್ವಾಭಿಮಾನ, ದೇಶಭಕ್ತಿ ಆತ್ಮಶಕ್ತಿಯನ್ನು ಹೆಚ್ಚಿಸಬಹುದು. ಇದಕ್ಕಾಗಿ ಭಾರತೀಯ ಪ್ರಜೆಗಳ ಮೂಲ ಶಿಕ್ಷಣವು ಭಾರತೀಯತೆಯ ವಿಚಾರವಾಗಿದ್ದು ಸ್ವದೇಶದ ಸ್ವರಾಜ್ಯ ದ ಸ್ವಧರ್ಮ,ಸ್ವಕರ್ಮ, ಸ್ವಾಭಿಮಾನ, ಸ್ವಾವಲಂಬನೆ, ಸತ್ಯವನ್ನು ಬೆಳೆಸಿದಾಗಲೆ ಪೋಷಕರ ಸಮಸ್ಯೆಗೆ ಪರಿಹಾರ ಒಳಗಿನ ಜ್ಞಾನದಲ್ಲಿ ಸಿಗುತ್ತದೆ. ಇಲ್ಲಿ ಪೋಷಕರೆಂದಾಗ ಮಕ್ಕಳು ಮಾತ್ರ ಕಾಣದೆ, ದೇಶದ ಪ್ರಜೆಗಳೆಲ್ಲರೂ ಭಾರತಾಂಬೆಯ ಮಕ್ಕಳೆ ಆದಾಗ ಅವಳ ಜ್ಞಾನವೇ ನಮ್ಮಲ್ಲಿಲ್ಲವಾದರೆ ಮಕ್ಕಳನ್ನು ರಕ್ಷಿಸುವ ಶಕ್ತಿ ಇರುವುದಿಲ್ಲ. ಆಧ್ಯಾತ್ಮ ಎಂದರೆ ಆದಿ ಆತ್ಮ ಎಂದಾಗ, ನಮ್ಮೊಳಗಿರುವ ಆತ್ಮಶಕ್ತಿಯನ್ನು ಹೆಚ್ಚಿಸಿಕೊಂಡು ಮಕ್ಕಳ ಪೋಷಣೆ ಮಾಡಿದಾಗಲೆ ಇನ್ನಷ್ಟು ಬಲಬರುತ್ತದೆ.

ನಮ್ಮ ಮಕ್ಕಳೆ ನಮ್ಮ ಜ್ಞಾನಕ್ಕೆ ವಿರುದ್ದ ನಡೆದಂತೆ ಅನುಭವವಿಲ್ಲದ ಜ್ಞಾನ ವಿರುದ್ದ ಪರಿಣಾಮಕ್ಕೆ ದಾರಿಯಾಗುತ್ತದೆ.ಶಿಕ್ಷಣವನ್ನು ನೀಡುವಾಗ ಆಂತರಿಕ ಜ್ಞಾನಕ್ಕೆ ಮೊದಲು ಪೋಷಕರು ಶಿಕ್ಷಣ ನೀಡಿ ನಂತರ ಭೌತಿಕ ಜ್ಞಾನ ನೀಡುವುದು ಹಿಂದೆ ಯುಗಯುಗದಿಂದಲೂ ನಡೆದುಬಂದಿತ್ತು. ಇತ್ತೀಚಿನ ದಿನಗಳಲ್ಲಿ ಪೋಷಕರನ್ನು ಶೋಷಣೆ ಮಾಡುವ ಮಕ್ಕಳು ಹೆಚ್ಚಾಗಿರುವುದಕ್ಕೆ ಕಾರಣವೆ ಅವರ ಮೂಲ ಶಿಕ್ಷಣ. ಮುಗ್ದತೆಗೆ ಕೊಡುವ ಶಿಕ್ಷಣ ಬಿಟ್ಟು ಪ್ರಭುದ್ದತೆ ಬೆಳೆಸಿದರೆ ಪೋಷಕರ ವಿರುದ್ದವೆ ನಿಲ್ಲುವುದು ಸಹಜ. ಹೀಗಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೈತಿಕ ಶಿಕ್ಷಣವೆ ಮೂಲಾಧಾರವಾಗಿದೆ.

ಮಾನವನ ದೇಹದೊಳಗಿರುವ ಮುಖ್ಯಚಕ್ರಗಳಲ್ಲಿ ಮೂಲಾಧಾರವೆ ಪ್ರಮುಖವಾಗಿದ್ದು ಅದರಿಂದ ಮೇಲಿರುವ ಚಕ್ರದ ಕಡೆಗೆ ಹೋಗುವ ಮೊದಲು ನಮ್ಮ ನಮ್ಮ ಮೂಲದ ಧರ್ಮ, ಕರ್ಮ, ಶಿಕ್ಷಣ,ಸಂಸ್ಕೃತಿ, ಭಾಷೆಯನ್ನರಿತು ಅಡಿಪಾಯವನ್ನು ಭದ್ರ ಪಡಿಸಿಕೊಂಡು ಉನ್ನತ ವಿಚಾರಗಳತ್ತ ನಡೆಯುವುದು ಅಗತ್ಯ. ಮೊದಲೇ ಸಹಸ್ರಾರ ಚಕ್ರವನ್ನು ಶುದ್ದಿಗೊಳಿಸಲು ಕಷ್ಟ.ಇದಕ್ಕೆ ಸಹಸ್ರಾರು ವರ್ಷಗಳ ಸಾಧನೆಯ ಅಗತ್ಯವಿರುತ್ತದೆ. ಕಲಿಗಾಲದ ಮಾನವನ ಅಲ್ಪ ಜ್ಞಾನ,ವಯಸ್ಸಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ನಮ್ಮ ಮೂಲವನ್ನರಿತು ಹೆಚ್ಚು ಸಾಧನೆ ಮಾಡಲು ಅದನ್ನು ಉತ್ತಮ ಶಿಕ್ಷಣದ ಮೂಲಕ ಬೆಳೆಸಿದರೆ ಶೀಘ್ರವಾಗಿ ಜೀವನದ ಗುರಿ ತಲುಪಬಹುದು.

ಅದಕ್ಕೆ ವಿರುದ್ದ ನಿಂತು ಹೊರನಡೆದರೆ ತಿರುಗಿ ಬರೋದು ಕಷ್ಟ. ಭಾರತೀಯರ ಮೂಲ ಜ್ಞಾನದ ಶಿಕ್ಷಣವನ್ನು ಭಾರತೀಯ ಪ್ರಜೆಗಳು ಮಕ್ಕಳಿಗೆ ಮೊದಲೇ ಕೊಟ್ಟು ಬೆಳೆಸಿದಾಗಲೆ ಸದೃಶ, ಸಮೃದ್ದಿ,ಸಮಗ್ರ, ಶಕ್ತಿಶಾಲಿಯಾದ ಪ್ರಜೆಗಳಿಂದ ದೇಶ ರಕ್ಷಣೆ ಸಾಧ್ಯವಿದೆ.ಇದಕ್ಕಾಗಿ ಭಾರತೀಯರಿಗೆ ಬೇಕಿದೆ ಭಾರತೀಯ ಶಿಕ್ಷಣ. ಮಕ್ಕಳು, ಮಹಿಳೆಯರಲ್ಲಿರುವ ಅದ್ಬುತವಾದ ಜ್ಞಾನಶಕ್ತಿಯನ್ನು ಪೋಷಣೆ ಮಾಡಿ ಬೆಳೆಸುವುದು ಪ್ರಜಾಧರ್ಮ. ಪ್ರಜಾಪ್ರಭುತ್ವದ ದೇಶದೊಳಗಿರುವ ಪ್ರಜೆಗಳಲ್ಲಿ ನಮ್ಮ ಮೂಲ ಶಿಕ್ಷಣದ ಕೊರತೆಯಿದ್ದರೆ ಪರಕೀಯರ ಪ್ರವೇಶ ಸುಲಭವಾಗಿದ್ದು,ಆಳೋದು ಸಹಜ.

ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಜ್ಞಾನದಿಂದ ರಾಜಯೋಗ.ಪರರ ವಶದ ಜ್ಞಾನದಿಂದ ರಾಜಕೀಯ. ಶಿಕ್ಷಣದಲ್ಲಿ ರಾಜಯೋಗವಿದ್ದರೆ ಮಹಾತ್ಮರ ದೇಶವಾಗುತ್ತದೆ. ಸ್ವಾಮಿ ವಿವೇಕಾನಂದರ ಪ್ರಕಾರ ನಾವೆಲ್ಲರೂ ಅಮೃತಾತ್ಮರು ಎಂದರೆ ಮೃತವಾಗದ ಆತ್ಮಶಕ್ತಿಯುಳ್ಳ ಮಹಾತ್ಮರಾಗಬೇಕಾದರೆ ಆಧ್ಯಾತ್ಮ ಅಗತ್ಯವಿದೆ. ನಮ್ಮ ನಾವು ಅರ್ಥ ಮಾಡಿಕೊಳ್ಳಲು ಸತ್ಯಜ್ಞಾನ ಬೇಕಿದೆ.

ಮಿಥ್ಯ ಜ್ಞಾನ ತಾತ್ಕಾಲಿಕ. ಹೀಗಾಗಿ ಜ್ಞಾನವಿಜ್ಞಾನದ ಸಮಾನತೆಯನ್ನು ಹೆಚ್ಚಿಸುವ ಕೆಲಸ ಮಾನವ ಮಾಡಬೇಕಿದೆ.ಪೋಷಕರು ಮಕ್ಕಳ ಮೂಲ ಜ್ಞಾನವನ್ನು ಹೆಚ್ಚಿಸುತ್ತಾ ವಿಶೇಷ ಶಕ್ತಿಯಾಗಿ ಪರಿವರ್ತಿಸುವ ಶಿಕ್ಷಣ ನೀಡುವುದು ಧರ್ಮ ಕಾರ್ಯ ವಾಗಿರುತ್ತದೆ. ಇದಕ್ಕಾಗಿ ಪೋಷಕರಾದವರು ಮಕ್ಕಳ ಸ್ಥಾನ ದಲ್ಲಿ ನಿಂತು ಅವರ ಮುಗ್ದ ಮನಸ್ಸನ್ನರಿತು ಸರಿಯಾದ ಸತ್ಯ ಧರ್ಮದಲ್ಲಿ ನಡೆಸಲು ಸಹಕರಿಸಬೇಕಲ್ಲವೆ?


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...
- Advertisement -

More Articles Like This

- Advertisement -
close
error: Content is protected !!