spot_img
spot_img

ಮೋರಟಗಿ: 2 ನೇ ದಿನದ ಪುರಾಣ ಕಾರ್ಯಕ್ರಮ

Must Read

spot_img

ಸಿಂದಗಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ಭಕ್ತಿ ಎಂಬುದು ಅಳಿದು ಹೋಗುವ ಕಾಲಕ್ಕೆ ಧಾರ್ಮಿಕ ಕಾರ್ಯ ಉಳಿಯುವ ಕೆಲಸ ಮೋರಟಗಿ ದೈವ ಮಾಡಿತ್ತಿರುವ ಕಾರ್ಯ ಸಂತಸದ ವಿಷಯವಾಗಿದೆ ಎಂದು ಜೇರಟಗಿ ವಿರಕ್ತಮಠದ ಮಹಾಂತ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಮೋರಟಗಿ ಗ್ರಾಮದಲ್ಲಿ ಸಿದ್ದರಾಮೇಶ್ವರ ಹಾಗೂ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ 2ನೇ ದಿನದ ಪುರಾಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಪೂರ್ವ ಪರಂಪರೆಯಿಂದ ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆಯಿಂದ ಮಾಡಿ, ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಇತರ ವಿಷಯಗಳ ಬೆಳಕು ಚೆಲ್ಲುತ್ತಿರುವುದು ಸ್ವಾಗತಾರ್ಹ, ಕಲ್ಯಾಣ ದರ್ಶನ, ಮಹಿಳಾಗೋಷ್ಠಿ, ಶರಣ ದರ್ಶನ, ಧಾರ್ಮಿಕ ಸಭೆ ಮಾಡಿ ನಾಡಿನ ಹೆಸಾರಂತ ಮಾಠಾಧೀಶರನ್ನು, ರಾಜಕಾರಣಿಗಳನ್ನು ಕರೆಸಿ ಧಾರ್ಮಿಕ ವಿಚಾರ ಮಾಡುವುದು ಒಳ್ಳೆಯ ಕಾರ್ಯವಾಗಿದೆ ಎಂದರು.

ನಾಡಿನ ಹೆಸರಾಂತ ಪ್ರವಚನಕಾರ ಮಡಿವಾಳಯ್ಯ ಶಾಸ್ತ್ರಿಗಳು ಜೇರಟಗಿ, ಆಕಾಶವಾಣಿ ಕಲಾವಿಧ ಶಿವರುದ್ರಯ್ಯ ಗೌಡಗಾಂವ್, ತಬಲಾ ಸಾಥ್ ಶಾಂತಕುಮಾರ ಜೇರಟಗಿ, ಬಸವಣ್ಣ ಸಿದ್ರಾಮಯ್ಯ ಮಠಪತಿ, ಸಮಿತಿ ಅಧ್ಯಕ್ಷ ಕುಪೇಂದ್ರ ಆಹೇರಿ, ಉಪಾಧ್ಯಕ್ಷ ಅನೀಲಗೌಡ ಪಾಟೀಲ, ಮುರುಘೇಂದ್ರ ಕೋರಿ, ಶಿವನಗೌಡ ಪಾಟೀಲ, ಶರಣು ಕೋಲ್ಹಾರ, ಮಲಕಣ್ಣ ಬಿಜಾಪುರ, ಈರಣ್ಣ ಕಂಬಾರ ಸೇರಿ ಇತರರು ಹಾಜರಿದ್ದರು.

- Advertisement -
- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!