ಸಿಂದಗಿ ನಗರ ಸೌಂದರ್ಯೀಕರಣಕ್ಕೆ ಹೆಚ್ಚಿನ ಅನುದಾನ – ಶಾಸಕ ಮನಗೂಳಿ

Must Read

ಸಿಂದಗಿ; ನಗರವನ್ನು ಸೌಂದರೀಕರಣವನ್ನಾಗಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಇಲ್ಲಿನ ಎಲ್ಲ ರಸ್ತೆಗಳಿಗೆ ವಿದ್ಯುತ್ ಅಳವಡಿಕೆ ಮಾಡಬೇಕು. ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಿಂದ ಕನಕದಾಸ ವೃತ್ತದವರೆಗೆ ನಿರ್ಮಾಣವಾದ ರೂ ೨ ಕೋಟಿ ವೆಚ್ಚದಲ್ಲಿ ದ್ವೀಪಥ ಡಾಂಬರಿಕರಣ ರಸ್ತೆ ಹಾಗೂ ನೂತನ ವಿದ್ಯುತ್ ಸಂಪರ್ಕವನ್ನು ಹೆಚ್ಚಿನ ಆದ್ಯತೆ ನೀಡಲು ಸರಕಾರದಿಂದ ಹೆಚ್ಚಿನ ಅನುದಾನ ತರಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಿಂದ ಕನಕದಾಸ ವೃತ್ತದವರೆಗಿನ ದ್ವೀಪಥ ರಸ್ತೆ ಹಾಗೂ ನೂತನ ವಿದ್ಯುತ್ ದೀಪಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ, ಚಿಕ್ಕಸಿಂದಗಿ ಬೈಪಾಸ್‌ದಿಂದ ಬಸವೇಶ್ವರ ವೃತ್ತ, ಡಾ. ಅಂಬೇಡ್ಕರ ವೃತ್ತದವರೆಗೆ ಮಹಾತ್ಮಾ ಗಾಂದಿಜಿ ವೃತ್ತ್ ಹಾಗೂ ಡಾ. ಅಂಭೇಡ್ಕರ ವೃತ್ತದಿಂದ ಟೀಪ್ಪು ಸುಲ್ತಾನ ವೃತ್ತ, ಮೋರಟಗಿ ಬೈಪಾಸ್ ವರೆಗೆ ಮತ್ತು ಸ್ವಾಮಿ ವಿವೇಕಾನಂದ ವೃತ್ತದಿಂದ ಗೋಲಗೇರಿ ಬೈಪಾಸ್ ವರೆಗೆ ದ್ವೀಪಥ ರಸ್ತೆ ಹಾಗೂ ವಿದ್ಯುತ್ ಕಂಬಗಳ ಅಳವಡಿಕೆ ಮಾಡಲಾಗಿದೆ. ಅಲ್ಲದೆ ಬಂದಾಳ ರಸ್ತೆಯಿಂದ ಸ್ವಾಮಿ ವಿವೇಕಾನಂದ ವೃತ್ತದವರೆಗೆ ರೂ ೨ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿಸಿ ರಸ್ತೆ ಮತ್ತು ಚರಂಡಿ, ಪ್ಲೇರ‍್ಸ ಜೋಡಣೆ ಕಾರ್ಯ ಪೂರ್ಣಗೊಂಡಿದ್ದು, ಹಳೇ ಚಾಂದಕವಟೆ ಸಿಸಿ ರಸ್ತೆ ನೂತನ ವಿದ್ಯುತ್ ಕಂಬಗಳ ಜೋಡಣೆ ಮಾಡಲಾಗುವುದು. ಹೆಗ್ಗೆರೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ರೂ ೧ ಕೋಟಿ ೧೫ ಲಕ್ಷಗಳ ವೆಚ್ಚದಲ್ಲಿ ನೂತನ ಡಾಂಬರೀಕರಣ ಮಾಡಲಾಗಿದೆ ಅದಕ್ಕೂ ಕೂಡಾ ವಿದ್ಯುತ್ ಕಂಬಗಳು ಮಂಜೂರಾಗಿವೆ. ಸೋಂಪೂರ ರಸ್ತೆಗೆ ವಿದ್ಯುತ್ ಕಂಬಗಳು ಮಂಜೂರಾಗಿವೆ ನೂತನವಾಗಿ ನಿರ್ಮಣವಾದ ಎಲ್ಲ ರಸ್ತೆಗಳ ಪಕ್ಕದಲ್ಲಿ ನೂತನ ವಿದ್ಯುತ್ ಕಂಬಗಳನ್ನು ಜೋಡಣೆ ಮಾಡಿ ಒಳ್ಳೆಯ ಸೇವೆ ಮಾಡಲು ಸನ್ನದ್ಧರಾಗಿದ್ದೇವೆ. ಅಲ್ಲದೆ ಬೀದಿ ವ್ಯಾಪಾರಸ್ಥರಿಗೆ ಸುಸಜ್ಜಿತವಾದ ಮಾರುಕಟ್ಟೆ ಹಾಗೂ ಆಟೋ ಚಾಲಕರಿಗೆ ನಿಲ್ದಾಣ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದರು.

ವಿದ್ಯುತ್ ದೀಪಗಳನ್ನು ಲೋಕಾರ್ಪಣೆಗೊಳಿಸಿದ ಡಾ. ವಿಶ್ವಪ್ರಭು ಶಿವಾಚಾರ್ಯರು ಮಾತನಾಡಿ, ಸಿಂದಗಿ ಪಟ್ಟಣ ನಗರಸಭೆಯಾಗಿ ನಿರ್ಮಾಣವಾಗಿದೆ ಇದಕ್ಕೆ ಸರಕಾರದಿಂದ ಸಾಕಷ್ಠು ಅನುದಾನ ತಂದು ಸೌಂದರೀಕರಣಕ್ಕೆ ಹೆಚ್ಚಿನ ಆಧ್ಯತೆ ನೀಡಿ ಸಾರ್ವಜನಿಕರಿಗೆ ಅನುಕೂಲ ಮಾಡುತ್ತಿದ್ದಾರೆ ಇವರ ಸೇವೆ ಅಮೋಘವಾದದ್ದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗುತ್ತಿಗೆದಾರ ಮುತ್ತು ಮುಂಡೆವಾಡಗಿ, ರಮೇಶ ಹೂಗಾರ, ಭೀಮನಗೌಡ ರೆಡ್ಡಿ, ಡಾ. ರವಿ ಗೋಲಾ, ಖಾದರ ಬಂಕಲಗಿ, ಶ್ರೀಧರ ಬಮ್ಮಣ್ಣಿ, ನಿಂಗರಾಜ ನಾಶಿ ಸೇರಿದಂತೆ ಅನೇಕರಿದ್ದರು.

LEAVE A REPLY

Please enter your comment!
Please enter your name here

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group