spot_img
spot_img

ಕಾಣೆಯಾದ ಮಗನಿಗಾಗಿ ತಾಯಿ ಕಣ್ಣೀರು

Must Read

ಬೀದರ – ಏಕಾಏಕಿ ಕಾಣೆಯಾದ ಕರುಳಿನ ಕುಡಿ,. ಮಗನನ್ನು ಹುಡುಕಿ ಕೊಡುವಂತೆ ಕಣ್ಣೀರು ಹಾಕುತ್ತಿರುವ ತಾಯಿ.

ಐದು ದಿನಗಳ ಹಿಂದೆ ಮನೆಯಿಂದ ಹೊರಗಡೆ ಹೋದ ಮಗ ವಾಪಸ್​ ಆಗದ ಹಿನ್ನೆಲೆಯಲ್ಲಿ ಊರೂರು ತಿರುಗಿ ಮಗನ ಹುಡುಕಾಟ ನಡೆಸುತ್ತಿರುವ ತಾಯಿ ಕಲಾವತಿ,. ಈ ತಾಯಿಗೆ ಊರಿನ ಮಹಿಳೆಯರು, ಯುವಕರು ಸಾಥ್​ ನೀಡಿದ್ದಾರೆ,. ಕಳೆದು ಹೋದ ಮಗನನ್ನು ಹುಡುಕಿ ಕೊಡುವಂತೆ ಕಣ್ಣೀರು ಹಾಕುತ್ತಿರುವ ತಾಯಿಯ ಸ್ಥಿತಿ ಮರುಕ ಹುಟ್ಟಿಸುತ್ತಿದೆ.

ಬೀದರ್​ ಜಿಲ್ಲೆಯ ಭಾಲ್ಕಿ ತಾಲೂಕಿನ ಜೈನಾಪುರ ಗ್ರಾಮದ ಕಲಾವತಿ ಎಂಬ ಮಹಿಳೆಯ ನೆಚ್ಚಿನ ಮಗ ಶ್ರೀಕಾಂತ್(20) ಎಂಬಾತ ಜೂನ್​ 3ರಂದು ಸಂಜೆ 4 ಗಂಟೆಗೆ ಅಮ್ಮ ನನಗೆ ತುಂಬ ಕೆಲಸ ಇದೆ ಎಂದು ಹೇಳಿ ಹೊರಗಡೆ ಹೋಗುತ್ತಾನೆ,. ಹಾಗೆ ಹೋದ ಶ್ರೀಕಾಂತ್​ ಒಂದು ವಾರ ಕಳೆಯುತ್ತಾ ಬಂದರೂ ಮನೆಗೆ ವಾಪಸ್​ ಆಗಲೇ ಇಲ್ಲ.

ಈಗಾಗಲೇ ಈ ಕುರಿತು ಗ್ರಾಮಸ್ಥರೆಲ್ಲ ಸೇರಿ ಧನ್ನೂರಾ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ,. ಆದರೆ ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿ ಪೊಲೀಸರು, ಶ್ರೀಕಾಂತ್​ ಪತ್ತೆ ಹಚ್ಚಲು ಕಾಳಜಿ ತೋರುತ್ತಿಲ್ಲ ಎಂದು ಜೈನಾಪುರ ಗ್ರಾಮಸ್ಥರು ಹೇಳುತ್ತಾರೆ,. ಇತ್ತ ಮನೆಯಲ್ಲಿ ಅತ್ಯಂತ ಪ್ರತಿಭಾವಂತ ಮತ್ತು ಎಲ್ಲ ಕೆಲಸ ಕಾರ್ಯಗಳನ್ನ ಕ್ಷಣದಲ್ಲಿ ಮುಗಿಸಿ ಬಿಡುತ್ತಿದ್ದ ಶ್ರೀಕಾಂತ್​ನನ್ನ ಕಳೆದುಕೊಂಡ ತಾಯಿ ಕಲಾವತಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಇನ್ನು ಇವರ ಮಗನನ್ನು ಹುಡುಕಲು ಸಾಥ್​ ಕೊಟ್ಟಿರುವ ಗ್ರಾಮದ ಮಹಿಳೆಯರು, ಯುವಕರು ಜಿಲ್ಲೆಯ ಹುಮನಾಬಾದ್​, ಚಿಟಗುಪ್ಪಾ, ಔರಾದ್, ಭಾಲ್ಕಿ ಸೇರಿದಂತೆ ಮೂಲೆ ಮೂಲೆಯಲ್ಲಿ ಹುಡುಕಾಡುತ್ತಿದ್ದಾರೆ,. ಹಲವು ಗ್ರಾಮಗಳ, ಪಟ್ಟಣಗಳ ಬಸ್​ ನಿಲ್ದಾಣ, ಬೀದಿ ಬದಿ ಕಂಪೌಂಡ್​ಗಳಲ್ಲಿ ಯುವಕ ಚಿತ್ರ ಇರುವ ಬಿತ್ತಿ ಪತ್ರ ಅಂಟಿಸಿ ಶ್ರೀಕಾಂತ್​ ಕಾಣಿಸಿದರೇ 9353615469 ಮೊಬೈಲ್​ ನಂ. ಕರೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!