ಚಳವಳಿ ಮುಷ್ಕರ ಬೇಡ, ಹಕ್ಕೊತ್ತಾಯ ಇರಲಿ- ಆನಂದ ಮಾಮನಿ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಸವದತ್ತಿಃ ತಾಲೂಕಿನ ಎಲ್ಲ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎನ್.ಪಿ.ಎಸ್.ನೌಕರರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕ ಘಟಕ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಹಯೋಗದಲ್ಲಿ ಇಂದು ಎನ್.ಪಿ.ಎಸ್ ವಿರೋಧಿಸಿ ಹಳೆ ಪಿಂಚಣಿಯ ವ್ಯವಸ್ಥೆ ಅಳವಡಿಸುವಂತೆ ಆಗ್ರಹಿಸಿ ಎ.ಪಿ.ಎಂ.ಸಿ ಯಿಂದ ಮೌನ ಮೆರವಣಿಗೆಯನ್ನು ತಹಶೀಲ್ದಾರ್ ಕಛೇರಿಯವರೆಗೆ ಸಂಘಟಿಸಿದ್ದರು.

ತಹಶೀಲ್ದಾರ ಕಛೇರಿಯ ಆವರಣದಲ್ಲಿ ಸಂಘಟನೆ ಹೋರಾಟವನ್ನು ಬೆಂಬಲಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ, ನೌಕರರ ಸಂಘದ ಅಧ್ಯಕ್ಷರಾದ ಆನಂದ ಮೂಗಬಸವ, ಎನ್.ಪಿ.ಎಸ್.ಘಟಕದ ಅಧ್ಯಕ್ಷರಾದ ಎಂ.ಎಂ.ಮುದ್ದನಗೌಡರ, ಸುಧೀರ ವಾಘೇರಿ ಮಾತನಾಡಿದರು.

- Advertisement -

ನಂತರ ಉಪವಾಸ ಸತ್ಯಾಗ್ರಹ ಪ್ರಾರಂಭವಾಯಿತು. ಸ್ಥಳಕ್ಕೆ ಆಗಮಿಸಿದ ವಿಧಾನಸಭಾ ಉಪ ಸಭಾಧ್ಯಕ್ಷ ಆನಂದ ಮಾಮನಿ “ ಉಪವಾಸ ನಿಲ್ಲಿಸುವಂತೆ ತಿಳಿಸಿ. ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಸೂಕ್ತ ನ್ಯಾಯ ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ ನಂತರ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಲಾಯಿತು.

ಇದಕ್ಕೆ ಸತ್ಯಾಗ್ರಹ, ಚಳವಳಿ ಎನ್ನುವುದು ಬೇಡ, ಇದು ನೌಕರರ ಹಕ್ಕೊತ್ತಾಯ ಎನ್ನೋಣ ಎಂದು ಮಾಮನಿಯವರು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಶಾಂತ ಪಾಟೀಲ,ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಯಶವಂತಕುಮಾರ, ಆರೋಗ್ಯ ಇಲಾಖೆಯ ಡಾ.ಮಹೇಶ ಚಿತ್ತರಗಿ, ಶಿಶು ಅಭಿವೃದ್ಧಿ ಇಲಾಖೆಯ ಅಮೃತ ಸಾಣೀಕೊಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸುರೇಶ ಬೆಳವಡಿ, ನೌಕರರ ಸಂಘದ ರಾಮಣ್ಣ ಗುಡಗಾರ, ಮಹಾಂತೇಶ ಮುಂಡರಗಿ, ಗ್ರೇಡ್ ೨ ತಹಶೀಲ್ದಾರರಾದ ಎಂ.ವ್ಹಿ.ಗುಂಡಪ್ಪಗೋಳ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಂ.ಎಸ್.ಕೋಳಿ, ಸಿದ್ದನಗೌಡರ,ಕಿರಣ ಕುರಿ, ವೀರೇಶ ಚಂದ್ರಗಿರಿ,ಡಿ. ಎ. ಮೇಟಿ, ಎಪ್.ಜಿ.ನವಲಗುಂದ,ಈಶ್ವರ ಕಲಗೌಡರ,ನಾಗರತ್ನ ಕುಸುಗಲ್, ಅನಸೂಯಾ ಮದನಬಾವಿ, ಪ್ರೇಮಾ ಹಲಕಿ, ಪಿ.ಜಿ.ಉಡಿಕೇರಿ,ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ರಾದ ಎ ಕೆ ಮುಲ್ಲಾ, ಮಲ್ಲಿಕಾರ್ಜುನ ಕಾರದಗಿ, ಪಾಶ್ಚಾಪುರ ಮೊದಲಾದವರು ಉಪಸ್ಥಿತರಿದ್ದು ಎನ್.ಪಿ.ಎಸ್.ನೌಕರರಿಗೆ ತಮ್ಮ ಬೆಂಬಲ ಸೂಚಿಸಿದರು.ತಾಲೂಕಿನ ಎಲ್ಲ ಇಲಾಖೆಯ ಎನ್.ಪಿ.ಎಸ್.ನೌಕರರು ಈಗಾಗಲೇ ಪತ್ರ ಚಳುವಳಿಯನ್ನು ಹಮ್ಮಿಕೊಂಡಿದ್ದು ಈ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಹಕ್ಕೊತ್ತಾಯವನ್ನು ಯಶಸ್ವಿಗೊಳಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!