spot_img
spot_img

ಕಲ್ಲೋಳಿ ಶತಮಾನೋತ್ಸವ ಶಾಲೆಗೆ ಸಂಸದರ ಅನುದಾನ

Must Read

ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಲು ಸ್ಮಾರ್ಟ್  ಕ್ಲಾಸ್ ಪೂರಕ- ಸಂಸದ ಈರಣ್ಣ ಕಡಾಡಿ

ಮೂಡಲಗಿ: ಶಿಕ್ಷಣ ಮನುಷ್ಯನ ಜೀವನಕ್ಕೆ ದಾರಿ ದೀಪ ಇದ್ದಂತೆ, ಚಿಂತನ ಶೀಲ ಮತ್ತು ಜಾಗೃತ ಸಮಾಜವನ್ನು ನಿರ್ಮಿಸಲು ಗುಣಮಟ್ಟದ ಶಿಕ್ಷಣ ಅವಶ್ಯಕವಾಗಿದೆ. ಸರಕಾರಿ ಶಾಲೆಗಳಲ್ಲಿನ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸಲು ಸ್ಮಾರ್ಟ್ ಕ್ಲಾಸ್‍ಗಳಂತಹ ಯೋಜನೆಗಳು ಪೂರಕವಾಗಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಶುಕ್ರವಾರ ಸೆ. 16 ರಂದು ಕಲ್ಲೋಳಿ ಪಟ್ಟಣದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ 2020-21ನೇ ಸಾಲಿನ ರಾಜ್ಯಸಭಾ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾಗಿರುವ ಸ್ಮಾರ್ಟ್ ಕ್ಲಾಸ್‍ಗಳನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, 137 ವರ್ಷಗಳನ್ನು ಪೂರೈಸಿರುವ ಕಲ್ಲೋಳಿಯ ನಮ್ಮೂರ ಶಾಲೆಗೆ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸ್ಮಾರ್ಟ್ ಕ್ಲಾಸ್‍ಗಳನ್ನು ಮತ್ತು ಶಾಲೆಗೆ ಬೇಕಾಗಿರುವ ಆಸನ ಮತ್ತು ಕಂಪ್ಯೂಟರ್ ನಂತಹ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ನಾನು ಕಲಿತಿರುವ ಶಾಲೆಯ ಋಣವನ್ನು ತೀರಿಸುವ ಅವಕಾಶ ಒದಗಿ ಬಂದಿರುವುದು ನನ್ನ ಸೌಭಾಗ್ಯ ಎಂದರು.

ಅರಭಾಂವಿ ಮತಕ್ಷೇತ್ರದಲ್ಲಿ ಪ್ರಸಕ್ತ ಸಾಲಿನಲ್ಲಿ 5 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್‍ಗಳನ್ನು ನಿರ್ಮಿಸಲು ಅನುದಾನವನ್ನು ನೀಡಲಾಗಿದೆ. ನನ್ನ ಮನವಿಯ ಮೇರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಕಂಪನಿ ಸಾಮಾಜಿಕ ಜವಾಬ್ದಾರಿಯ (ಸಿ.ಎಸ್.ಆರ್) ಅನುದಾನದಡಿಯಲ್ಲಿ ಕಲ್ಲೋಳಿ, ತುಕ್ಕಾನಟ್ಟಿ, ರಾಜಾಪೂರದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು 1000 ಡೆಸ್ಕ್ ಗಳನ್ನು ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ 40 ಗಣಕಯಂತ್ರಗಳನ್ನು ನೀಡಲಿದ್ದಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸದರಾದ ಈರಣ್ಣ ಕಡಾಡಿ ಅವರು ನೀಡಿದಂತಹ ಅನುದಾನವನ್ನು ಶಾಲೆಯ ಮಕ್ಕಳಿಗೆ ಸದುಪಯೋಗ ಪಡಿಸಿಕೊಳ್ಳಲು ಶಿಕ್ಷಕರೂ ಪ್ರಯತ್ನಿಸಬೇಕೆಂದರು. ಸಂಸದರ ತಂದೆ ಭೀಮಪ್ಪಾ ಕಡಾಡಿ ಅವರು ಗ್ರಾಮ ಪಂಚಾಯತ ಹಾಗೂ ಪಿ.ಕೆ.ಪಿ.ಎಸ್ ಅಧ್ಯಕ್ಷರಿದ್ದಾಗ 6 ಶಾಲಾ ಕೋಠಡಿಗಳನ್ನು ನಿರ್ಮಿಸಿರುತ್ತಾರೆ ಹಾಗೂ ಸಂಸದ ಈರಣ್ಣ ಕಡಾಡಿ ಅವರು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಅವಧಿಯಲ್ಲಿ ಅರಭಾವಿ ಕ್ಷೇತ್ರದ ಶಾಲೆಗಳಿಗೆ ಕೋಠಡಿಗಳ ನಿರ್ಮಾಣ, ಕಟ್ಟಡಗಳ ರಿಪೇರಿಗೆ ಸಾಕಷ್ಟು ಅನುದಾನ ನೀಡುವ ಮೂಲಕ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಅವರ ಕಾರ್ಯವನ್ನು ಸ್ಮರಿಸಿದರು.

ತಹಶೀಲ್ದಾರ ಡಿ.ಜಿ ಮಹಾತ, ಮೂಡಲಗಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಚಿನ್ನಪ್ಪನವರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ, ರಾವಸಾಬ ಬೆಳಕೂಡ, ಬಸವರಾಜ ಕಡಾಡಿ, ಹಣಮಂತ ಸಂಗಟಿ, ಧರೆಪ್ಪ ಖಾನಗೌಡ್ರ, ಮಹಾದೇವ ಮಧಬಾಂವಿ, ಪ್ರಭು ಕಡಾಡಿ, ಶಿವಪ್ಪ ಬಿ.ಪಾಟೀಲ, ಶಿವಾನಂದ ಹೆಬ್ಬಾಳ, ಅಡಿವೆಪ್ಪ ಕುರಬೇಟ, ಹಣಮಂತ ಕೌಜಲಗಿ, ಮಲ್ಲಪ್ಪ ಹೆಬ್ಬಾಳ, ತುಕಾರಾಮ ಪಾಲ್ಕಿ, ರಾಮಲಿಂಗ ಬಿ.ಪಾಟೀಲ, ಸಿದ್ದು ಮರಡಿ, ಅಶೋಕ ಆಡಿನವರ, ಬಸಗೊಂಡ ಖಾನಾಪೂರ, ಹಣಮಂತ ಹೊನ್ನಳ್ಳಿ, ಶಿವನಿಂಗ ಕುಂಬಾರ, ಹಣಮಂತ ಪಾಲಭಾವಿ, ಅಜೀತ ಚಿಕ್ಕೋಡಿ, ಬಸವರಾಜ ದಾಸನಾಳ, ಸಂತೋಷ ಕಬಾಡಗಿ, ಈರಣ್ಣ ಮುನ್ನೋಳಿಮಠ, ಪ್ರಧಾನ ಗುರುಗಳಾದ ಚಿದಾನಂದ ಬಡಿಗೇರ, ಬಿ.ಆರ.ಸಿ ಗಣಪತಿ ಉಪ್ಪಾರ, ಎಸ್.ಎಸ್. ನಾಯಕವಾಡಿ ಸೇರಿದಂತೆ ಶಿಕ್ಷಕರು, ಪಾಲಕರು ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!