spot_img
spot_img

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ಜಿಲ್ಲಾಧ್ಯಕ್ಷರಾಗಿ ಶ್ರೀಮತಿ ಗಂಗಮ್ಮ ನಂಜುಂಡಪ್ಪ ಆಯ್ಕೆ

Must Read

ಹಾಸನ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಕ್ರೊಟ್ರೇಶ್ ಎಸ್ ಉಪ್ಪಾರರ ಸಮ್ಮುಖದಲ್ಲಿ ಕವಯತ್ರಿ ಹೇಮರಾಗ ನಿವಾಸದಲ್ಲಿ ಜಿಲ್ಲಾ ಕಾರ್ಯಕಾರಿಣಿ ಹಾಗೂ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು.

ಸಭೆಯ ಅಧ್ಯಕ್ಷತೆಯನ್ನು ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಸಮುದ್ರವಳ್ಳಿ ವಾಸು ರವರು ವಹಿಸಿಕೊಂಡಿದ್ದರು.

ಪದಾಧಿಕಾರಿಗಳೊಂದಿಗೆ ಚರ್ಚಿಸಿ ಗಂಗಮ್ಮ ನಂಜುಂಡಪ್ಪ ನವರನ್ನು ಸಭೆಯ ಸರ್ವಾನುಮತದ ಒಪ್ಪಿಗೆ ಮೇರೆಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ನಾಗರಾಜ್ ದೊಡ್ಡಮನಿ, ಕೋಶಾದ್ಯಕ್ಷರಾದ ಎಚ್. ಎಸ್. ಬಸವರಾಜು, ಹಾಸನ ತಾಲ್ಲೂಕು ಅಧ್ಯಕ್ಷರಾದ ಹೇಮರಾಗ, ಆಲೂರು ತಾಲೂಕು ಅಧ್ಯಕ್ಷರಾದ ರಘು ಕೆ.ಸಿ ಹೊಸೂರು, ಕಾರ್ಯದರ್ಶಿ ಧರ್ಮ ಕೆರಲೂರು, ಗೌರವಾಧ್ಯಕ್ಷರಾದ ಹೆಚ್.ಇ ದ್ಯಾವಪ್ಪ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಅಶ್ವಿನಿ ಪಿ ರಘು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾರುತಿ ಕೆ.ಬಿ, ಜಿಲ್ಲಾ ಸಂಚಾಲಕರಾದ ನಿರಂಜನ ಎ.ಸಿ ಬೇಲೂರು, ಅರಸೀಕೆರೆ ಸಂಚಾಲಕರಾದ ಮುತ್ತುಶ್ರೀ ವಾಣಿ, ಕವಯತ್ರಿ ಪಲ್ಲವಿ ಬೇಲೂರು, ಪದ್ಮಾವತಿ ವೆಂಕಟೇಶ್ ಹಾಗು ಇನ್ನಿತರು ಹಾಜರಿದ್ದರು.

- Advertisement -
- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!