Mudalagi: ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ – ಐರನ್ ಮ್ಯಾನ್ ಶ್ರೀಶೈಲ ಬ್ಯಾಕೂಡ

Must Read

ಮೂಡಲಗಿ: ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದರೆ ವಿವಿಧ ಇಲಾಖೆಗಳಲ್ಲಿ ನೌಕರಿ ಪಡೆಯಲು ಅವಕಾಶವಿರುತ್ತದೆ ಎಂದು ಐರನ್ ಮ್ಯಾನ್ ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ ಹೇಳಿದರು.

ತಾಲೂಕಿನ ತುಕ್ಕಾನಟ್ಟಿಯ ಸಿದ್ದಾರೂಢ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕಲ್ಲೋಳಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಹಾಗೂ ಖಜಕಿಸ್ತಾನದಲ್ಲಿ ಜರುಗಿದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಐರನ್ ಮ್ಯಾನ ಪ್ರಶಸ್ತಿ ಪಡೆದ ನಿಮಿತ್ತ ಸಂಘಟಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಆಟದಲ್ಲಿ ಭಾಗವಹಿಸುವುದು ಮುಖ್ಯ, ಪ್ರಾಥಮಿಕ ಹಂತದಿಂದಲೆ ಕ್ರೀಡೆಯಲ್ಲಿ ದೃಢಸಂಕಲ್ಪದಿಂದ ಪ್ರಯತ್ನ ಮಾಡಿದರೆ ಮುಂದೆ ಭವಿಷ್ಯದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಅವಕಾಶವಿರುತ್ತದೆ ಎಂದರು. 

ಕಲ್ಲೋಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಆರ್.ವಾಯ್.ಗಂಗರಡ್ಡಿ ಮಾತನಾಡಿ, ಕ್ರೀಡಾಪಟುಗಳು ಕ್ರೀಡಾ ನಿಯಮಗಳನ್ನು ತಿಳಿದುಕೊಂಡು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಸಿದ್ಧಾರೂಢ ಶಿಕ್ಷಣ ಸಂಸ್ಥೆಯ ಉಪಾದ್ಯಕ್ಷ ಪ್ರಭುದೇವ ಮಲ್ಲಾಪುರ ವಹಿಸಿದ್ದರು. 

ಇದೆ ಸಂದರ್ಭದಲ್ಲಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿಶೇಷ ಸಾಮಥ್ರ್ಯವುಳ್ಳ ಮಕ್ಕಳನ್ನು ಗೌರವಿಸಲಾಯಿತು. 

ಸಮಾರಂಭದಲ್ಲಿ ಕಲ್ಲೋಳಿ ಸಿಆರ್‍ಪಿ ಗಣಪತಿ ಉಪ್ಪಾರ, ಶಾಲೆಯ ಮುಖ್ಯ ಶಿಕ್ಷಕ ಎಮ್.ಎನ್.ಹಿರೇಮಠ, ಆರ್.ಬಿ.ಜರಾಳೆ, ಎಮ್.ಎನ್.ಮಹಾರ್,  ಎಸ್.ಡಿ.ಲಮಾಣಿ, ವಿ.ಎನ್.ಕಳ್ಳಿಮಣಿ, ರಾಮಣ್ಣಾ ಕೇದಾರಿ, ಚಿದಾನಂದ ಬಾಳಪ್ಪಾ ಅರಬಾಂವಿ, ಶ್ರೀಶೈಲ ವಗ್ಗೆನ್ನವರ, ಗಂಗಾಧರ ಕಟ್ಟಿಕಾರ ಮತು ಕ್ಲಸ್ಟರನ ದೈಹಿಕ ಶಿಕ್ಷಕರು ಮತ್ತಿತರರು ಇದ್ದರು.

ಜಿ.ಕೆ.ಉಪ್ಪಾರ ಸ್ವಾಗತಿಸಿ ಪರಿಚಯಿಸಿದರು, ಬಿ.ಕೆ.ಘಸ್ತಿ ನಿರೂಪಿಸಿದರು, ಎಸ್.ಎಲ್.ಕರಿಗಾರ ವಂದಿಸಿದರು.

Latest News

ವಿಶ್ಲೇಷಣೆ : ಚಿಂತನೆಗೆ ದಾರಿ ತೋರಿಸುವ ಪ್ರಯತ್ನಗಳು

ಕವಿ ಎನ್.ಶರಣಪ್ಪ ಮೆಟ್ರಿ ಯವರು ವಿರಚಿತ ಮೂರು ಕೃತಿಗಳ ಬಗ್ಗೆ ಹೇಳುವುದಾದರೆ ಇದು ಕಾವ್ಯ, ಚಿಂತನೆ, ಮತ್ತು ಜ್ಞಾನ ಪರಂಪರೆಯ ಮೂರು ಕೃತಿಗಳು — “ಮಧುರ...

More Articles Like This

error: Content is protected !!
Join WhatsApp Group