- Advertisement -
ಮೂಡಲಗಿ: ಕಲ್ಲೋಳಿ ಪಟ್ಟಣದ ಮುಗಳಖೋಡ ಶಾಖಾಮಠದ ಮಾತೆ ಅಕ್ಕ ನಾಗಮ್ಮ(೮೫) ಗುರುವಾರ ಲಿಂಗೈಕ್ಯರಾದರು.
ಮುಗಳಖೋಡ ಪೂಜ್ಯ ಯಲ್ಲಾಲಿಂಗ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಳೆದ ನಾಲ್ಕು ದಶಕಗಳ ಕಾಲ ಶಿವಧ್ಯಾನ ಮಾಡುತ್ತ ಜನಸಾಮಾನ್ಯರ ಒಳಿತನ್ನು ಬಯಸುತ್ತಿದ್ದರು. ಶಾಖಾಮಠಕ್ಕೆ ಮಾತೆ ಮಹಾದೇವಿ ಅವರನ್ನು ಉತಾರಾಧಿಕಾರಿಯನ್ನು ಮಾಡಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಪಟ್ಟಣದ ಅನೇಕ ಗಣ್ಯರು,ಮಠದ ಅಪಾರ ಭಕ್ತರು ಭಾಗವಹಿಸಿದ್ದರು.
- Advertisement -
ಸಂತಾಪ: ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಮಾತೆ ಅಕ್ಕ ನಾಗಮ್ಮ ಅವರು ಲಿಂಗೈಕ್ಯರಾದ ಸುದ್ದಿ ತಿಳಿದು ಸಂತಾಪ ವ್ಯಕ್ತಪಡಿಸಿದರು.